ಗುಬ್ಬಿ: ದೇವರಾಜ್

ಕಾರ್ ಮತ್ತು ಕ್ಯಾಂಟರ್ ನಡುವೆ ಭೀಕರ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ.
ಇಂಡಿಕಾ ಕಾರ್ ನಲ್ಲಿದ್ದ ಕುಟುಂಬಸ್ಥರು ಚಿಕ್ಕನಾಯಕನಹಳ್ಳಿಯಿಂದ ಬೆಂಗಳೂರಿನ ಕಡೆಗೆ ಸಾಗುತ್ತಿದ್ದಾಗ ಗುಬ್ಬಿ ತಾಲೂಕಿನ ಕೊಂಡ್ಲಿ ಕ್ರಾಸ್ ನಲ್ಲಿ ಅಪಘಾತ ಸಂಭವಿಸಿದೆ.
ತುಮಕೂರಿನ ಕಡೆ ಸಾಗುತ್ತಿದ್ದ ಕಾರಿಗೆ ಎದುರು ಬಂದ ಕ್ಯಾಂಟರ್ ಮುಖ-ಮುಖಿಯಾಗಿ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಮೃತರಾಗಿದ್ದು. ಓರ್ವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ನಾಗರತ್ನಮ್ಮ ರವರು ಆಸ್ಪತ್ರೆಯಲ್ಲಿ ಕೊನೆಯುಸಿರಳೆದಿದ್ದಾರೆ.
ಮೃತ ಕುಟುಂಬಸ್ಥರು ಚಿಕ್ಕನಾಯಕನಹಳ್ಳಿ ತಾಲೂಕಿನ ನಡುವನಿನಳ್ಳಿಯವರಾಗಿದ್ದು ನಾರಾಯಣಪ್ಪ(54), ರಾಮಣ್ಣ(58), ಸಾಗರ್(23) ಮೂವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಆರಕ್ಷಕ ಸಿಬ್ಬಂದಿಗಳಿಂದ ಸ್ಥಳ ಪರಿಶೀಲನೆ.