ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ತಾಲೂಕಿನ ಗಡಿ ಭಾಗದಲ್ಲಿ ಬಾರಿ ಬೃಹತ್ ರೊಡ್ ಶೋ…

Janataa24 NEWS DESK

ಪಾವಗಡ

ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ತಾಲೂಕಿನ ಗಡಿ ಭಾಗದಲ್ಲಿ ಬಾರಿ ಬೃಹತ್ ರೊಡ್ ಶೋ ಮೂಲಕ ಪ್ರಚಾರ ಕೈಗೊಂಡಿದ್ದರು.

IMG 20230423 WA0023



ಪ್ರಚಾರಕ್ಕೆ ಬಂದ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ರವರಿಗೆ ಆ ಭಾಗದ ಮಹಿಳಾ ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡರು.



ವೆಂಕಟಮ್ಮನಹಳ್ಳಿ ಗ್ರಾಮದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅಭ್ಯರ್ಥಿ ವೆಂಕಟೇಶ್ ಹಿಂದೆ 2013ರಲ್ಲಿ ಕೆಲವೇ ಅಂತರದಲ್ಲಿ ಸೋತಿದ್ದು ಆದರೆ ಅಲ್ಲಿಂದ ಇಲ್ಲಿಯವರೆಗೆ ಜನರ ಸೇವೆಯಲ್ಲಿ ತೊಡಗಿದ್ದೆನೆ.

ಕೋವಿಡ್ ವೇಳೆಯಲ್ಲಿ ಬಹಳಷ್ಟು ನಿರ್ಗತಿಕರ ಸೇವೆ ಮಾಡಿಕೊಂಡು ಬಂದಿದ್ದೆ.



ಈ ಹಿಂದೆ ನಮ್ಮ ತಂದೆಯವರಿಗೆ ನಾಲ್ಕು ಬಾರಿ ಗೆಲ್ಲಿಸಿ ತಮ್ಮ ಸೇವೆ ಮಾಡಲು ಅನುಕೂಲ ಮಾಡಿ ಅನೇಕ ಅಭಿವೃದ್ಧಿ ಕೆಲಸಗಳು ಮಾಡಿಕೊಂಡ ರೀತಿಯಲ್ಲಿ ಒಂದು ಬಾರಿ ನಿಮ್ಮ ಕಾಲಿಗೆ ಬಿದ್ದು ಕೇಳುಕೊಳ್ಳುತ್ತೇನೆ ಒಂದು ಅವಕಾಶ ಕಲ್ಪಿಸಿ.



ನಮ್ಮ ಕಾಂಗ್ರೆಸ್ ಸರ್ಕಾರ ಬಂದ ತಕ್ಷಣವೇ ಬಡವರಿಗಾಗಿ ಯೋಜನೆಗಳಾದ ಮಹಿಳೆಯರಿಗೆ ಎರಡು ಸಾವಿರ ಹಣ.

ಇನ್ನೂರು ವಿದ್ಯುತ್ ಯುನಿಟ್ ಉಚಿತ.ಬಡವರಿಗೆ ಹತ್ತು ಕೆಜಿ ಅಕ್ಕಿ.ನಿರುದ್ಯೋಗ ಬತ್ಯೆ ಮೂರು ಸಾವಿರ.

ಈ ಯೋಜನೆ ನಮ್ಮ ಸರ್ಕಾರ ಬಂದು ಕೇವಲ ಹದಿನೈದು ದಿನಗಳಲ್ಲಿ ಯೋಜನೆಗಳು ನೀಡಲಾಗುತ್ತದೆ ಎಂದರು.



ಈ ವೇಳೆ ವೆಂಕಟಮ್ಮನಹಳ್ಳಿ ಯುವ ಮುಖಂಡ ನಾನಿ.ಮಾಜಿ ವಳ್ಳೂರು ಪಂಚಾಯತಿ ಅಧ್ಯಕ್ಷ ಚನ್ನಕೇಶವ.ಮುತ್ಯಾಲಪ್ಪ. ರಾಜೇಶ್. ರವಿ.ಇತರೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಾಹಿಸಿದರು.



ನಂತರ ವಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಟೂರಾಯನಹಳ್ಳಿ ಗ್ರಾಮದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಹೆಚ್ ವಿ ವೆಂಕಟೇಶ್ ರವರು ಪ್ರಚಾರ ನಡೆಸಿ ಮತ ಯಾಚನೆ ಮಾಡಿದರು..
ಈ ವೇಳೆ ಇಂಟೂರಾಯನಹಳ್ಳಿ ಗ್ರಾಮದ ಮುಖಂಡರು, ಕಾರ್ಯಕರ್ತರು, ವಳ್ಳೂರು ಗ್ರಾ. ಪಂ ಮಟ್ಟದ ಮುಖಂಡರು ಉಪಸ್ಥಿತರಿದ್ದರು..


ವರದಿ

ಪಾವಗಡ: ಇಮ್ರಾನ್ ಉಲ್ಲಾ.

Leave a Reply

Your email address will not be published. Required fields are marked *