Janataa24 NEWS DESK
ಕಂದಾಯ ಇಲಾಖೆ ಅಧಿಕಾರಿಗಳು ಬಡ ಕುಟುಂಬಗಳ ಸಮಸ್ಯೆಯನ್ನು ಗಾಳಿಗೆ ತೂರುತ್ತಿದ್ದಾರಾ.

ತುರುವೇಕೆರೆ: ತಾಲೂಕಿನ ದಂಡಿನಶಿವರ ಹೋಬಳಿಯ ಅಕ್ಕಾಳಸಂದ್ರ ಗ್ರಾಮದ ನಿವಾಸಿ.
ಶಬಾನ ಬಾನು ಎಂಬುವರ ಮನೆಗೆ ಸುಮಾರು ವರ್ಷದಿಂದ ಹಾದು ಹೋಗಲು ದಾರಿ ಇದ್ದು, ಕೆಲದಿನಗಳ ಹಿಂದೆ ಬಲಾಢ್ಯ ಹಣವಂತರು ಈ ಕುಟುಂಬ ಓಡಾಡುವ ದಾರಿಗೆ ಅಡ್ಡಲಾಗಿ ಬೇಲಿಯನ್ನು ಹಾಕಿದ್ದಾರೆ.
ಇದರ ವಿಷಯವಾಗಿ ಶಬಾನ ಬಾನು ಅವರ ಕುಟುಂಬ ಪೊಲೀಸ್ ಠಾಣೆಗೆ ದೂರು ಕೂಡ ಸಲ್ಲಿಸಿದ್ದು, ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದೆ.
ಆದರೂ ಪ್ರಯೋಜನವಾಗಿಲ್ಲ ,ನಂತರ ಈ ಕುಟುಂಬ ಇದಕ್ಕೆ ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರು ಕೂಡ ಸಲ್ಲಿಸಿ, ಸಮಸ್ಯೆ ಬಗೆಹರಿಸಲು ಹೇಳಿದ್ದಾರೆ.
ಇನ್ನು ಎಂಟು 10 ದಿನವಾದರೂ ತಾಲೂಕು ಕಚೇರಿ ಕಂದಾಯ ಇಲಾಖೆ ಅಧಿಕಾರಿಗಳು ಈ ಬಡ ಕುಟುಂಬದ ಸಮಸ್ಯೆಯನ್ನು ಆಲಿಸದೆ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ ಎಂದು ಈ ಕುಟುಂಬ ನೇರ ಆರೋಪ ಮಾಡುತ್ತಿದೆ.
ಇದರ ಬಗ್ಗೆ ಗಮನಹರಿಸಿ ತಾಲೂಕು ದಂಡಾಧಿಕಾರಿಯಾದ ರೇಣು ಕುಮಾರ್ ಅವರು ಈ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುತ್ತಾರ ಕಾದುನೋಡಬೇಕು.
ವರದಿ :ಮಂಜುನಾಥ್ ಕೆ ಎ ತುರುವೇಕೆರೆ.