ಅಹಿಂದ ವರ್ಗದವರ ಆಶೀರ್ವಾದದಿಂದ ಈ ಬಾರಿ ಕಾಂಗ್ರೆಸ್ ಜಯಭೇರಿ

Janataa24 NEWS DESK

IMG 20230423 WA0025

ಅಹಿಂದ ವರ್ಗದವರ ಆಶೀರ್ವಾದದಿಂದ ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಎಸ್ ಆರ್ ಶ್ರೀನಿವಾಸ್ ರವರು ಜಯಗಳಿಸುತ್ತಾರೆ ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶಂಕರನಂದ್ ತಿಳಿಸಿದರು.

ಗುಬ್ಬಿ: ತಾಲೋಕಿನ ಕಡಬ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಜನಸಾಮಾನ್ಯರು ಹೆಚ್ಚು ಕಷ್ಟ ಅನುಭವಿಸಿದ್ದಾರೆ. ದಿನನಿತ್ಯ ವಸ್ತುಗಳ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತಿದ್ದಾರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆಡಳಿತ ವ್ಯವಸ್ಥೆಯಿಂದ ಬೆಸತ್ತು ಜನರು ಕಾಂಗ್ರೆಸ್ನತ್ತ ಮುಖ ಮಾಡುತ್ತಿದ್ದಾರೆ.
ಕಡಬ ಹೋಬಳಿಯಲ್ಲಿ ಮಾಜಿ ಸಚಿವ ಎಸ್ ಆರ್ ಶ್ರೀನಿವಾಸ್ ರವರಿಗೆ ಹೆಚ್ಚು ಮತದಾರರು ಸ್ಪಂದನೆ ನೀಡುತ್ತಿದ್ದಾರೆ. ಅಲ್ಪಸಂಖ್ಯಾತರ ಹಾಗೂ ಎಲ್ಲ ಜನಾಂಗದ ಮುಖಂಡರು ಸ್ವಯಂ ಪ್ರೇರಿತರಾಗಿ ಮುಂದೆ ನಿಂತು ಮತಪ್ರಚಾರ ನಡೆಸುತ್ತಿದ್ದಾರೆ ಹಾಗೂ ಅಹಿಂದ ವರ್ಗದವರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮನ್ನಣೆ ನೀಡುತ್ತಿದ್ದು ಈ ಬಾರಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷವು ಹೆಚ್ಚು ಮತಗಳ ಅಂತರದಿಂದ ಜಯಗಳಿಸಲಿದೆ ಎಂದು ತಿಳಿಸಿದರು.


ಕಾಂಗ್ರೆಸ್ ಮುಖಂಡ ಲಕ್ಷ್ಮಿ ನಾರಾಯಣಪ್ಪ ಮತನಾಡಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಲೆ ತೀವ್ರವಾಗಿದೆ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಸರ್ಕಾರ ರಚಿಸಲಿದೆ. ಬಿಜೆಪಿ ಸರ್ಕಾರದ ಭ್ರಷ್ಟ ಆಡಳಿತ ನೀತಿಯಿಂದ ಜನತೆ ಮನನೊಂದಿದ್ದಾರೆ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಸರ್ಕಾರ ಬಡವರಿಗೆ 10 ಕೆ.ಜಿ ಅಕ್ಕಿಯನ್ನು ನೀಡುತ್ತಿದ್ದರು ಬಿಜೆಪಿ ಭ್ರಷ್ಟ ಸರ್ಕಾರವು ಅದನ್ನು ನಾಲ್ಕು ಕೆಜಿ ನೀಡುತ್ತಿದೆ. ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸಂತೃಪ್ತಿ ಆಹಾರವನ್ನು ಒದಗಿಸುತ್ತಾರೆ. 200 ಯೂನಿಟ್ ವಿದ್ಯುತ್ತನ್ನು ಮೊದಲ ಸಚಿವ ಸಂಪುಟದಲ್ಲಿ ನೀಡುತ್ತೇವೆ ಎಂದು ರಾಹುಲ್ ಗಾಂಧಿ ಅವರು ತಿಳಿಸಿದ್ದಾರೆ ಹಾಗಾಗಿ ಮತದಾರರು ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಹಾಗೂ ಗುಬ್ಬಿ ಕ್ಷೇತ್ರದಲ್ಲಿ ಮಾಜಿ ಸಚಿವ ಎಸ್ ಆರ್ ಶ್ರೀನಿವಾಸ್ ರವರು ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಮತ್ತೆ ಸಚಿವರಾಗುತ್ತಾರೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಕುಂದರನಹಳ್ಳಿ ಸಿದ್ದಲಿಂಗಯ್ಯ, ಕಡಬ ಶಿವಕುಮಾರ್, ಎಸ್ ಎಲ್ ಗೌಡ, ಮಂಜುಳಾ, ಶ್ರೀನಿವಾಸ್, ಇನ್ನು ಅನೇಕ ಮುಖಂಡರು ಹಾಜರಿದ್ದರು.

ವರದಿ

ಗುಬ್ಬಿ :ಶ್ರೀಕಾಂತ್

Leave a Reply

Your email address will not be published. Required fields are marked *