JANATAA24 NEWS DESK
Yugadhi: ಭಾರತೀಯ ಸಂಸ್ಕೃತಿಯ ಪ್ರತೀಕ ಆಚರಣೆ ಯುಗಾದಿ
ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ಪಂಚಾಂಗದ ಪ್ರಕಾರ ವಿಶ್ವದಾದ್ಯಂತ ಇರುವ ಹಿಂದುಗಳು ವರ್ಷದ ಮೊದಲ ಹಬ್ಬವಾಗಿ ಆಚರಿಸುವುದೇ ಯುಗಾದಿ ಆಗಿದ್ದು ಇದನ್ನು ಚಂದ್ರಮಾನ ಯುಗಾದಿ ಎಂದು ಯುಗಾಂತರಗಳಿಂದ ಆಚರಣೆ ಮಾಡುತ್ತಿರುವುದೇ ಯುಗಾದಿ. ಯುಗಾದಿ ಹಬ್ಬದ ಬೆಳ್ಳಂಬೆಳಗ್ಗೆ ಅಭ್ಯಂಜನ ಸ್ನಾನ ಮಾಡಿ ಹಬ್ಬ ಆಚರಿಸುವವರು ಮನೆಗಳಿಗೆ ತಳಿರು ತೋರಣಗಳಿಂದ ಸಿಂಗಾರ ಮಾಡಿ ತಮ್ಮ ಮನೆ ದೇವರಿಗೆ ಬೇವು ಮತ್ತು ಬೆಲ್ಲ ನೈವೇದ್ಯಕ್ಕೆ ಇಟ್ಟು ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| -(ಅದರರ್ಥ ಹೀಗಿದೆ – ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ) ಎಂದು ಭಕ್ತಿಯಿಂದ ಬೇವು ಬೆಲ್ಲ ಮನೆಮಂದಿಗೆಲ್ಲ ಹಂಚಿ ತಾವು ಸಹ ಪ್ರಸಾದ ರೂಪದಲ್ಲಿ ಸ್ವೀಕರಿಸುವರು.
ಬೇವು ಬೆಲ್ಲ ಸೇವಿಸುವುದರ ಸಂಕೇತ ಮನುಷ್ಯ ಕಷ್ಟ ಮತ್ತು ಸುಖಗಳನ್ನು ಜೀವನದಲ್ಲಿ ಸಮಾನವಾಗಿ ಕಾಣಬೇಕು ಹಾಗೂ ಬೇವನ್ನು ತಿನ್ನುವುದರಿಂದ ಮನುಷ್ಯ ಸಂಪೂರ್ಣ ಆರೋಗ್ಯವನ್ನು ಪಡೆಯಲು ಸಹಾಯ ಆಗುತ್ತದೆ ಈ ಕಾರಣದಿಂದ ಬೇವು ಬೆಲ್ಲಕ್ಕೆ ವಿಶೇಷ ಮಹತ್ವ ಇದೆ.
ಯುಗಾದಿ ಹಬ್ಬದಂದು ಮನೆ ಮಂದಿಯೆಲ್ಲ ಒಂದೆಡೆ ಸೇರಿ ಆಚರಿಸುವುದು ಪದ್ಧತಿ ಹಾಗೂ ವಿವಾಹ ಮಾಡಿಕೊಟ್ಟ ಮಗಳು ಅಳಿಯನನ್ನು ಅಥವಾ ಮಗ ಸೊಸೆಯನ್ನು ಮನೆಗಳಿಗೆ ಕರೆಸಿಕೊಂಡು ಹೊಸ ಉಡುಪು ಮತ್ತು ಉಡುಗೊರೆ ನೀಡಿ ಆಚರಿಸುವ ಕಾರಣ ಪರಸ್ಪರ ಮಾನವೀಯ ಮೌಲ್ಯಗಳು ವೃದ್ಧಿಸುವುವು. ಹಾಗೂ ’ವಸುದೈವ ಕುಟುಂಬಕಂ’ ಎಂಬಂತೆ ವಿಶಾಲಾರ್ಥವನ್ನು ಹೊಂದಿ ನಮ್ಮ ಸಂಸ್ಕೃತಿಯನ್ನು ಮತ್ತಷ್ಟು ಗಟ್ಟಿಯಾಗಿ ಬೆಸೆಯುವದರ ಸಂಕೇತವೇ ಯುಗಾದಿ.
Yugadhi: ಯುಗಾದಿಯ ಮಹತ್ವ..!
ಯುಗ +ಆದಿ= ಯುಗಾದಿ ಅಂದರೆ ಯುಗದ ಆದಿಯೇ ಯುಗಾದಿ ಚತುರ್ಮುಖ ಬ್ರಹ್ಮ ವಿಶ್ವ ಸೃಷ್ಟಿಯನ್ನು ಆರಂಭಿಸಿದ ದಿನವೇ ಯುಗಾದಿ ದಿನ. ಅಲ್ಲದೆ ಪ್ರಕೃತಿ ನವ ಚೈತನ್ಯವನ್ನು ಪಡೆದುಕೊಂಡು ಹೊಸ ಚಿಗುರಿನಿಂದ ಕಂಗೊಳಿಸುವ ಪರ್ವದಿನ, ಯುಗಾದಿಯಲ್ಲಿ ಎರಡು ವಿಧದ ಆಚರಣೆ. ಒಂದು ಚಾಂದ್ರಮಾನ ಯುಗಾದಿ, ಎರಡು ಸೌರಮಾನ ಯುಗಾದಿ. ಪ್ರತಿ ವರ್ಷ ಚೈತ್ರಮಾಸದ ಆರಂಭದ ದಿನ ಬರುವುದು ಚಾಂದ್ರಮಾನ ಯುಗಾದಿ ಆಗಿದೆ. ಹಿರಿಯ ಕವಿ ಡಿ.ವಿ.ಜಿ.ರವರು ಹೇಳಿರುವಂತೆ ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಹೊಸ ಯುಕ್ತಿ ಹಳೆ ತತ್ವ ಜೊತೆಗೂಡಿ ಧರ್ಮ ಎಂಬಂತೆ ಮರದ ಬೇರುಗಳ ಹಳೆಯದಾದರೂ ಚಿಗುರು ಹೊಸದು. ಹಾಗಾಗಿ ಜಗತ್ತೇ ಪ್ರಾಕೃತಿಕವಾಗಿ ನವ ಯೌವ್ವನವನ್ನು ಪಡೆಯುವ ದಿನ ಯುಗಾದಿಯಿಂದ ಆರಂಭಿಸುತ್ತದೆ. ಕವಿವಾಣಿಯಂತೆ ವಸಂತ ಬಂದ ಋತುಗಳ ರಾಜ ತಾ ಬಂದ ಎಂಬಂತೆ ವಸಂತ ಋತುವಿನ ಆಗಮನವು ಸಹ ಯುಗಾದಿಯಂದೆ ಆರಂಭ. ಅಶ್ವಿನಿ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ.
ಯುಗಾದಿ ಹಬ್ಬಕ್ಕೆ ತ್ರೇತಾಯುಗಕ್ಕೂ ಸಂಬಂಧ ಉಂಟು. ಶ್ರೀ ಮಹಾವಿಷ್ಣುವು ರಾಮಾವತಾರ ತಾಳಿದಾಗ ಅಸುರ ರಾವಣನನ್ನು ಸಂಹರಿಸಿ ಅಯೋಧ್ಯಾ ರಾಜನಿಗೆ ಪಟ್ಟಭಿಷೇಕ ಆದ ದಿನವೇ ಯುಗಾದಿ.
ಪಂಚಾಂಗ ಶ್ರವಣ:
ಸನಾತನ ಭಾರತೀಯರು ಅತ್ಯಂತ ಹೆಚ್ಚಾಗಿ ನಂಬುವುದು ಪಂಚಾಂಗ, ಪಂಚಾಂಗ ದಿನಸೂಚಿಯಷ್ಟೆ ಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲ, ಮದುವೆ ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು, ಒಟ್ಟಾರೆ ಜನಜೀವನದ ಸ್ಥಿತಿಯನ್ನು ಸೂಚಿಸಿರುವುದು. ಅಂದು ಹಿರಿಯ ಕಿರಿಯರೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಾಡಿ ನಲಿವರು, ಹಾಗೂ ಯುಗಾದಿಯ ದಿನ ಬೆಳಗ್ಗೆ ಮನೆ ದೇವರ ಪೂಜೆ ಮಾಡಿ ಗುರುಹಿರಿಯರ ಪಾದಗಳಿಗೆ ನಮಿಸಿ ನಂತರ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಮಾಡುವುದು ಸಹ ಯುಗಾದಿ ವೈಶಿಷ್ಟ್ಯ ಯುಗಾದಿ ದಿನದಂದು ದೇವಾಲಯಗಳಲ್ಲಿ ವಿಶೇಷ ಅಭಿಷೇಕ, ರುದ್ರಪಾರಾಯಣ, ವಿಷ್ಣು ಸಹಸ್ರನಾಮ ಮಾಡುವುದರಿಂದ ಪುರೋಹಿತರು ಲೋಕಾಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಾ ‘ಲೋಕಾ ಸಮಸ್ತ ಸುಖಿನೋ ಭವಂತು, ಸಮಸ್ತ ಸನ್ಮಾಂಗಳಾನಿ ಭವಂತು’ ಎಂದು ಆಶೀರ್ವಚನ ನೀಡುವರು.
ಪಂಚಾಂಗದಲ್ಲಿ ರಾಶಿ ನಕ್ಷತ್ರಗಳ ವಿವರ, ಶುಭ ಆಶುಭಗಳ ವಿವರ ಗ್ರಹಗಳ ಚಲನೆಯ ವಿವರ, ಗುರುದೆಸೆ, ಶನಿಕಾಟ, ಗ್ರಹಗಳಲ್ಲಿ ಹಲವು ಕಾಟಗಳ ವಿವರ ಮತ್ತು ಅವುಗಳಿಂದ ಮುಕ್ತಿ ಮುಂತಾದ ವಿವರಗಳು ಇರುವ ಪಂಚಾಂಗವನ್ನು ಯುಗಾದಿ ಹಬ್ಬದ ದಿನ ಮನೆಗೆ ತಂದು ಪೂಜೆ ಸಲ್ಲಿಸಿ ಪುರೋಹಿತರನ್ನು ಅವರ ಮೂಲಕ ಪಂಚಾಂಗ ಶ್ರವಣ ಮಾಡಿಸಿ ತಮ್ಮ ಗ್ರಹ ಗತಿಗಳನ್ನು ತಿಳಿದುಕೊಳ್ಳುವುದು ಸಹ ಯುಗಾದಿ ಹಬ್ಬದ ದಿನವೇ ಆಗಿದೆ.
ಈ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ, ಆಂಧ್ರ,. ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷಗಳಲ್ಲಿ ಆಚರಿಸುವರು. ತೆಲಂಗಾಣ ಆಂಧ್ರ ಮತ್ತು ಕರ್ನಾಟಕಗಳಲ್ಲಿ ಸಂಸ್ಕೃತಿಕ ಹಬ್ಬವನ್ನಾಗಿ ಆಚರಿಸುತ್ತಾರೆ.
ವಿಶೇಷ ತಿನಿಸು
ಒಬ್ಬಟ್ಟು ಅಥವಾ ಹೋಳಿಗೆ. ತೆಂಗಿನಕಾಯಿ ಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಕಡಲೆ ಅಥವಾ ತೊಗರಿ ಬೇಳೆಯ ಹೂರಣದಲ್ಲಿ ಮಾಡುವರು.
ಯುಗ ಯುಗಾಂತರುಗಳು ಕಳೆದರೂ ಶಿಲಾ ಯುಗದಿಂದ ನಾಗರೀಕತೆಯ ವರೆಗೂ ಮನುಷ್ಯನ ಆಲೋಚನೆ ಮತ್ತು ಭೌತಿಕ ಬೆಳವಣಿಗೆ ಆದರೂ ನಮ್ಮ ಹಿರಿಯ ಋಷಿಮುನಿಗಳು ಹಾಕಿಕೊಟ್ಟ ಸಂಪ್ರದಾಯ ಕಿಂಚಿತ್ತೂ ಕಡೆಮೆಯಾಗದಂತೆ ಆಧುನಿಕತೆಗೆ ಮೊರೆಹೋಗದೆ ಸನಾತನ ಸತ್ ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಂಡು ಆಚರಿಸುತ್ತಿರುವುದು ನಮ್ಮ ಸನಾತನ ಶಕ್ತಿಯ ಸಂಕೇತವಾಗಿದೆ.
ವರದಿ :ಮಂಜುನಾಥ್ ಡಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.