Janataa24 NEWS DESK
Vijayapura: ನಿನ್ನೆ ಕೊರೆಸಿದ್ದ ಕೊಳವೆಬಾವಿಗೆ ಇಂದು ಬಿದ್ದ ಎರಡು ವರ್ಷದ ಮಗು.

ವಿಜಯಪುರ: ಬಿರು ಬೇಸಿಗೆ ಪ್ರಾರಂಭವಾಗಿ ಎಲ್ಲೆಡೆ ಬರಗಾಲ ಆವರಿಸಿದೆ ರೈತರು ನೀರಿಲ್ಲದೇ ನಾಟಿ ಮಾಡಿದ ಬೆಳೆಗಳನ್ನು ಉಳಿಸಿಕೊಳ್ಳವುದು ಹೇಗೆ ಎಂದು ಇಂದು ಬೋರ್ವೆಲ್ ಗಳ (Borwel)ಮೊರೆ ಹೋಗಿದ್ದಾರೆ ಆದರೇ ಗಂಗಮ್ಮ ದೇವಿ ಕೆಲವರ ಪಾಲಿಗೆ ಒಲಿದರೇ ಕೆಲವರ ಪಾಲಿಗೆ ದಕ್ಕದೇ ಹೋಗುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಶಂಕರಪ್ಪ ಎನ್ನುವ ರೈತ ಕೊರೆದ ಕೊಳವೆ ಬಾವಿ ಕೇವಲ ನೀರು ಸಿಗದೇ ನೋವು ಕೊಟ್ಟದ್ದು ಅಲ್ಲದೇ ತನ್ನ ಮೊಮ್ಮಗ ಅದರೊಳಗೆ ಬೀಳುವ ಮೂಲಕ ಶಾಕ್ ಕೊಟ್ಟಿದೆ
ನೆನ್ನೆ ವಿಜಯಪುರದ ಲಚ್ಯಾಣ ಗ್ರಾಮದಲ್ಲಿ ನೆನ್ನೆ ಕೊರೆಸಿದ್ದ ಕೊಳವೆ ಬಾವಿ ಒಳಕ್ಕೆ ಅದೇ ಕುಟಂಬಕ್ಕೆ ಸೇರಿದ ಎರಡು ವರ್ಷದ ಮಗು ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.
ಶಂಕರಪ್ಪ(Shankarappa) ಎನ್ನುವ ಲಚ್ಯಾಣ ಗ್ರಾಮದ ರೈತ ನೆನ್ನೆ ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದರು. ಕೊಳವೆ ಬಾವಿಯಲ್ಲಿ ನೀರು ಸಿಗದ ಕಾರಣ ಬಾವಿ ಮುಚ್ಚದೇ ಬಿಟ್ಟಿರುತ್ತಾರೆ ಆದರೇ ಇಂದು ಶಂಕರಪ್ಪನವರ ಮೊಮ್ಮಗ ಆಟವಾಡಲು ಹೋಗಿ ಇಂದು ಸ್ವಾತಿಕ್ ಕೊಳವೆ ಬಾವಿಗೆ ಬಿದ್ದಿದ್ದಾರೆ.
ಈ ಘಟನೆ ಆದ ಕ್ಷಣದಿಂದ ಪೋಲಿಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಮಗುವನ್ನು ರಕ್ಷಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Sumalatha :ಮಂಡ್ಯ ಲೋಕ ಸ್ವರ್ಧೆಯಿಂದ ಹಿಂದೆ ಸರಿದ ಸುಮಲತಾ, ಶ್ರೀಘ್ರದಲ್ಲೇ ಬಿಜೆಪಿ ಸೇರ್ಪಡೆ.