Document

Lokasabha 2024 : ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಬಿ. ಎನ್ ಚಂದ್ರಪ್ಪ ಅವರನ್ನು ವಿರೋಧಿಸಿ ಸಭೆ

Janataa24 NEWS DESK

Lokasabha 2024: ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಬಿ. ಎನ್ ಚಂದ್ರಪ್ಪ ಅವರನ್ನು ವಿರೋಧಿಸಿ ಸಭೆ -ಮಾಜಿ ಸಚಿವ ವೆಂಕಟರಮಣಪ್ಪ

Venkataramanappa BN Chandrappa
Farmer Minister Venkataramanappa

ಪಾವಗಡ : ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ತಮ್ಮ ಪುತ್ರ ಎಚ್‌.ವಿ.ವೆಂಕಟೇಶ್‌ ಅವರನ್ನು ಸೋಲಿಸುವ ನಿಟ್ಟಿನಲ್ಲಿ ಗುಂಪುಗಾರಿಕೆ ಕಟ್ಟಿ, ಇಲ್ಲಿನ ಜೆಡಿಎಸ್‌ ಅಭ್ಯರ್ಥಿ ಪರ ಕೆಲಸ ಮಾಡಿದ್ದ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಭೋವಿ ಸಮಾಜದಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪರಿಗೆ ಸಮ್ಮತಿ ತೋರುವುದಿಲ್ಲ ಇವರ ಪರ ಮತ ಹಾಕುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್‌ ದುರೀಣ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ ಖಡಕ್ ಎಚ್ಚರಿಕೆಯ ಹೇಳಿಕೆ ಕೊಟ್ಟಿದ್ದಾರೆ.

ಅವರು ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ, ಈ ಭಾಗದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿ.ಎನ್‌.ಚಂದ್ರಪ್ಪ ಆಯ್ಕೆ ಮಾಡಿ ಹೈಕಮಾಂಡ್‌ ಆದೇಶ ಹೊರಡಿಸಿದೆ.ಈ ಭಾಗದಲ್ಲಿ ಭೋವಿ ಸಮಾಜಕ್ಕೆ ಅದ್ಯತೆ ನೀಡಿಲ್ಲ ಚಂದ್ರಪ್ಪ ಹೊರತುಪಡಿಸಿ ಬೇರೆಯಾರಿಗಾದರೂ ಟಿಕೆಟ್‌ ನೀಡಿ ಎಂದು ರಾಜ್ಯ ಕಾಂಗ್ರೆಸ್‌ ಹೈಕಮಾಂಡ್‌ಗೆ ಬೇಡಿಕೆ ಇಡಲಾಗಿತ್ತು. ಆದರೆ ಹೈಕಮಾಂಡ್ ಇದ್ಯಾವುದನ್ನೂ ಪರಿಗಣಿಸಿಲ್ಲ.

ಅಲ್ಲದೇ ಈ ಭಾಗದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್‌.ವಿ.ವೆಂಕಟೇಶ್‌ ರವರಿಗೆ ಪಾವಗಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ತಪ್ಪಿಸಲು ಆನೇಕ ರೀತಿಯ ಪ್ರಯತ್ನ ಪಟ್ಟಿದ್ದರು. ತಂದೆ ಮಗನಿಗೆ ರಾಜಕೀಯ ಭವಿಷ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್‌ ಹೈಕಮೆಂಡ್‌ಗೆ ಇಲ್ಲ ಸಲ್ಲದ ಮಾಹಿತಿ ನೀಡಿ ನಮ್ಮನ್ನು ಅಪಾಧನೆಗೆ ಗುರಿಪಡಿಸಿದ್ದರು.

Venkataramanappa  BN Chandrappa
BN Chandrappa

ಇಲ್ಲಿನ ನಮ್ಮ ವಿರುದ್ಧ ಏಳೆಂಟು ವಿರೋಧಿಗಳ ಗುಂಪು ಕಟ್ಟಿ, ನಮ್ಮ ವಿರುದ್ಧ ಬುಗಿಲೆಬ್ಬಿಸಿದ್ದರು. ಜತಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಎಚ್‌.ವಿ.ವೆಂಕಟೇಶ್‌ ಅವರಿಗೆ ಇಲ್ಲಿನ ಕಾಂಗ್ರೆಸ್‌ ಟಿಕೆಟ್‌ ಸಿಗುತ್ತಿದ್ದಂತೆ,ಬಿ.ಎನ್‌.ಚಂದ್ರಪ್ಪ (BN Chandrappa)ಸೇರಿ ಇವರ ಆನೇಕ ಮಂದಿ ಬೆಂಬಲಿಗರು ನಮ್ಮನ್ನು ಸೋಲಿಸಲು ಇಲ್ಲಿನ ಜನತಾದಳದ ಅಭ್ಯರ್ಥಿ ಪರ ಕೆಲಸ ಮಾಡಿದ್ದರು.

ಇವರು ಚುನಾವಣೆಯ ಕಣದಲ್ಲಿದ್ದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಲು ಏನೇ ಪ್ರಯತ್ನ ಪಟ್ಟರೂ ಮತದಾರರರು ಕೈಬಿಡಲಿಲ್ಲ. ಹೆಚ್ಚು ಮತಗಳಿಂದ ಎಚ್‌.ವಿ.ವೆಂಕಟೇಶ್‌ ಜಯಸಾಧಿಸಿದ್ದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಭೋವಿ ಸಮಾಜದ ವತಿಯಿಂದ ಶೀಘ್ರ ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಟಿ ನಡೆಸಿ,ಬಿ.ಎನ್‌.ಚಂದ್ರಪ್ಪ ವಿರುದ್ದ ಮತದಾನ ಮಾಡುವಂತೆ ತೀರ್ಮಾನ ಕೈಗೊಳ್ಳಲಾಗುವುದು.

ನಮ್ಮ ಜೊತೆ ಇತರೆ ಕೂರಚ,ಕೊರಮ ಇತರೆ ಸಮುದಾಯಗಳಿಗೂ ಚಂದ್ರಪ್ಪ ಪರ ಕೆಲಸ ಮಾಡದಂತೆ ಸಂದೇಶ ನೀಡಲಿದ್ದೇವೆ, ಈ ವಿಷಯದಲ್ಲಿ ಯಾವುದೇ ರಾಜಿ ಇರುವುದಿಲ್ಲ.ಲೋಕ ಸಭಾ ಚುನಾವಣೆಯಲ್ಲಿ ಯಾರಿಗೆ ನಮ್ಮ ಮತದಾನ ಎಂಬುವುದು ಶೀಘ್ರದಲ್ಲಿ ತಿಳಿಸಲಿರುವುದಾಗಿ ಅವರು ಹೇಳಿದರು.

ವರದಿ: ಇಮ್ರನ್ ಉಲ್ಲಾ ಪಾವಗಡ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

Venkataramanappa : ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಬಿ. ಎನ್ ಚಂದ್ರಪ್ಪ ಅವರನ್ನು ವಿರೋಧಿಸಿ ಸಭೆ -ಮಾಜಿ ಸಚಿವ ವೆಂಕಟರಮಣಪ್ಪ

Document

Leave a Reply

Your email address will not be published. Required fields are marked *