Document

Turuvekere: ವಾತ್ಸಲ್ಯ ಕಾರ್ಯಕ್ರಮದಡಿ ಫಲಾನುಭವಿಗೆ ಮನೆ ಹಸ್ತಾಂತರ. 

JANATAA24 NEWS DESK 

 

 

Turuvekere: ವಾತ್ಸಲ್ಯ ಕಾರ್ಯಕ್ರಮದಡಿ ಫಲಾನುಭವಿಗೆ ಮನೆ ಹಸ್ತಾಂತರ.

Turuvekere

ತುರುವೇಕೆರೆ: ಧರ್ಮಸ್ಥಳ ಹೇಮಾವತಿ ವಿ ಹೆಗ್ಗಡೆಯವರ ಕಾರ್ಯಕ್ರಮಗಲ್ಲಿ ಒಂದಾದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಕದಬಳ್ಳಿ ವಲಯದ ದೇವರ ಮಾವಿನಕೆರೆ ಗ್ರಾಮದ ವಾತ್ಸಲ್ಯ ಫಲಾನುಭವಿಯಾದ ಶ್ರೀಮತಿ ಲಕ್ಷ್ಮಮ್ಮ ರವರಿಗೆ ವಾತ್ಸಲ್ಯ ಮನೆ ನಿರ್ಮಿಸಿ ಹಸ್ತಾಂತರಿಸಲಾಯಿತು ಕಾರ್ಯಕ್ರಮವನ್ನು ತುಮಕೂರು ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ನೆರವೇರಿಸಿ ಇದೇ ವೇಳೆ ಮಾತನಾಡಿದ ಅವರು ಹೇಮಾವತಿ ವಿ ಹೆಗ್ಗಡೆಯವರು ಜೀವನ ನಿರ್ವಹಣೆ ನಡೆಸಲು ಸಾಧ್ಯವಾಗದ ಕನಿಷ್ಠ ಅವಶ್ಯಕತೆ ಗಳನ್ನು ಪೂರೈಸಿಕೊಳ್ಳಲು ಸಾಮರ್ಥ್ಯ ವಿಲ್ಲದ ಸುಮಾರು 18000 ಜನರಿಗೆ ಪ್ರತಿ ತಿಂಗಳು ಮಾಶಾಸನವನ್ನು ನೀಡುತ್ತಿದ್ದು

 

 

ಅಲ್ಲದೆ ವಾಸವಿರಲು ಮನೆ ಇಲ್ಲದ ಫಲಾನುಭವಿಗಳಿಗೆ ಯೋಜನೆಯಿಂದ ವಾತ್ಸಲ್ಯ ಮನೆಯನ್ನು ರಚನೆ ಮಾಡಿ ನೀಡುತ್ತಿದ್ದು, ಇದುವರೆಗೆ ಸುಮಾರು ಏಳುನೂರು ಮನೆ ರಚನೆ ಮಾಡಿ ಕೊಡಲಾಗಿದೆ, ಅದರಂತೆ ತಮ್ಮನ್ನು ಯಾರು ನೋಡಿಕೊಳ್ಳಲು ಇಲ್ಲದೆ ಇರುವ ಲಕ್ಷ್ಮಮ್ಮರವರಿಗೆ ರೂ 135,000 ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದ್ದು, ಜೀವನದ ಉಳಿದ ದಿನಗಳನ್ನು ನೆಮ್ಮದಿಯಿಂದ ಕಳೆಯುವಂತಾಗಲಿ ಲಕ್ಷ್ಮಮ್ಮರವರಿಗೆ ಊರಿನ ಎಲ್ಲರೂ ಸಹಾಯ ಸಹಕಾರ ನೀಡಬೇಕೆಂದರು, ಜೊತೆಗೆ ಯೋಜನೆಯ ವತಿಯಿಂದ ನಡೆಯುವ ಅನೇಕ ಜನಪರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

 

ಇದೆ ಸಂದರ್ಭದಲ್ಲಿ ಮಂಡ್ಯಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಮಂಜೇಶ್ ಮಾತನಾಡಿ ಆಡು ಮುಟ್ಟದ ಸೊಪ್ಪಿಲ್ಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡದೇ ಇರುವ ಕಾರ್ಯಕ್ರಮಗಳಿಲ್ಲ. ಸಮಾಜದ ಅಶಕ್ತರಿಗೆ ಯೋಜನೆಯ ಕಾರ್ಯಕರ್ತರ ಮೂಲಕ ಸೇವಾ ಕಾರ್ಯಕ್ರಮಗಳನ್ನು ತಲುಪಿಸುವಲ್ಲಿ ಸಂಸ್ಥೆಯು ಯಶಸ್ವಿಯಾಗಿದೆ ಮತ್ತು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ನನಗೆ ಬಹಳ ಖುಷಿ ತಂದಿದೆ ಎಂದರು,

 

ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಶೇಖರ್ ಶೆಟ್ಟಿ ,ಊರಿನ ಮುಖಂಡರಾದ ಪರಮೇಶ್, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾದ ಶ್ರೀಮತಿ ಸುವರ್ಣ, ಪಂಚಾಯಿತಿ ಸದಸ್ಯರಾದ ರವಿ ಮತ್ತು ಕೃಷ್ಣೆಗೌಡ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾರಾಣಿ, ವಲಯದ ಮೇಲ್ವಿಚಾರಕರಾದ ಮೇಘಮಾಲ, ಸೇವಾಪ್ರತಿನಿಧಿ ಅಶ್ವಿನಿ, ಸಂಘದ ಸದಸ್ಯರು ಉಪಸ್ಥಿತರಿದ್ದರು,

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *