Document

Turuvekere: ಕಲ್ಪ ಜ್ಯೋತಿ ಪತ್ರಿಕಾ ಸಂಸ್ಥೆಯ ಸಮಾಜಮುಖಿ ಕಾರ್ಯ ಶ್ಲಾಘನೀಯವಾದದ್ದು–ಕಾಡಸಿದ್ದೇಶ್ವರ ಮಹಾಸ್ವಾಮಿಗಳು

JANATAA24 NEWS DESK 

Turuvekere:ಕಲ್ಪ ಜ್ಯೋತಿ ಪತ್ರಿಕಾ ಸಂಸ್ಥೆಯ ಸಮಾಜಮುಖಿ ಕಾರ್ಯ ಶ್ಲಾಘನೀಯವಾದದ್ದು ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಅಭಿನವ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

Turuvekere The social work of Kalpa Jyoti Patrika is commendable. Kadasiddheshwara Mahaswamy

ತಿಪಟೂರು: ತಾಲ್ಲೂಕಿನ ಕೆ.ಬಿ.ಕ್ರಾಸ್ ನಲ್ಲಿ ಕಲ್ಪ ಜ್ಯೋತಿ ಪತ್ರಿಕಾ ಸಂಸ್ಥೆ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಒಂದು ಸಂಸ್ಥೆ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ ಅವರ ನೋವು ನಲಿವುಗಳಿಗೆ ಸ್ಪಂದಿಸುತ್ತಿರುವುದು ಉತ್ತಮ ಸಮಾಜಮುಖಿ ಕಾರ್ಯವಾಗಿದ್ದು ಮುಂದಿನ ದಿನಮಾನಗಳಲ್ಲಿ ಇಂತಹ ಸಮಾಜಮುಖಿ ಕಾರ್ಯಗಳು ಕಲ್ಪ ಜ್ಯೋತಿ ಸಂಸ್ಥೆಯಿಂದ ಹೆಚ್ಚಿನದಾಗಿ ನಡೆಯಲಿ ಪ್ರತಿ ಹಳ್ಳಿ ಹಳ್ಳಿಗೂ ಇವರ ಸೇವೆ ತಲುಪುವಂತಾಗಲಿ ಉತ್ತಮ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವ ಅವಶ್ಯಕತೆ ಇದ್ದು ಇಂದಿನ ದಿನಮಾನಗಳಲ್ಲಿ ಆರೋಗ್ಯ ಸೇವೆಯನ್ನು ತಲುಪಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿಕ್ಕನಾಯಕನಹಳ್ಳಿ ವಿಧಾನಸಭ ಕ್ಷೇತ್ರದ ಶಾಸಕ ಸಿ.ಬಿ‌.ಸುರೇಶ್ ಬಾಬು ಮಾತನಾಡಿ ಇಂದು ಮನುಷ್ಯನ ಓಡುವ ಜೀವನಶೈಲಿಗೆ ಆರೋಗ್ಯ ತಪಾಸಣೆ ಬಹಳ ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಕಲ್ಪ ಜ್ಯೋತಿ ಸಂಸ್ಥೆ ಆರೋಗ್ಯ ಶಿಬಿರವನ್ನು ಅದರಲ್ಲಿಯೂ ಹೃದಯ ತಪಾಸಣಾ ಶಿಬಿರವನ್ನು ಆಯೋಜಿಸಿರುವುದು ಉತ್ತಮ ನಡೆಯಾಗಿದ್ದು ಸಂಸ್ಥೆಯ ಅಧ್ಯಕ್ಷರಾದ ನಂದೀಶ್ ರವರ ಸೇವಾ ಮನೋಭಾವ ಪ್ರತಿ ಹಳ್ಳಿ ಹಳ್ಳಿಗಳಿಗೂ ತಲುಪಲಿ ಅವರ ಕಾಯಕ ನಿಷ್ಠೆ ಇಂದಿನ ಯುವಕರಿಗೆ ಮಾದರಿಯಾಗಲಿ ಎಂದರು.

ಆರೋಗ್ಯ ತಪಾಸಣಾ ಶಿಬಿರದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ವೈದ್ಯರ ತಂಡದ ವತಿಯಿಂದ ಎಕೋ ಹಾಗೂ ಇಸಿಜಿ ಮಾಡಲಾಯಿತು ಹಾಗೂ ತಿಪಟೂರಿನ ವೈಭವಿ ಆಸ್ಪತ್ರೆ ವೈದ್ಯರು ಹಾಗೂ ಸುನಂದ ಕಣ್ಣಿನ ಆಸ್ಪತ್ರೆ ವೈದ್ಯರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ನಿಖಿಲ್ ರಾಜಣ್ಣ, ನಾಕೇನಹಳ್ಳಿ ಸುರೇಶ್, ಕಲ್ಪ ಜ್ಯೋತಿ ಪತ್ರಿಕಾ ಸಂಸ್ಥೆಯ ಅಧ್ಯಕ್ಷ ಬೊಮ್ಮೇನಹಳ್ಳಿ ನಂದೀಶ್, ಕೆ.ಪಿ.ಟಿ.ಸಿ.ಎಲ್. ಜಿಲ್ಲಾ ಸಂಘಟನಾ ಕಾರ್ಯದರ್ಶಿ ನರಸಿಂಹಮೂರ್ತಿ, ಬಿಳಿಗೆರೆ ಗ್ರಾ.ಪಂ.ಅಧ್ಯಕ್ಷರಾದ ಜ್ಯೋತಿ ಪರಮೇಶ್, ಗ್ರಾ.ಪಂ.ಸದಸ್ಯರುಗಳಾದ ರಾಘವೇಂದ್ರ, ಹಟ್ಣ ಮಂಜುನಾಥ್, ಕೆ.ಬಿ.ಕ್ರಾಸ್ ರಾಜಣ್ಣ, ಸೇರಿದಂತೆ ದಲಿತ ಮುಖಂಡರುಗಳಾದ ದಂಡಿನಶಿವರ ಕುಮಾರ್, ಹಟ್ಣ ದಯಾನಂದ್, ಅಗಸರಹಳ್ಳಿ ಮೂರ್ತಿ, ಶೆಟ್ಟಿಹಳ್ಳಿ ಕಲ್ಲೇಶ್ ಇತರರಿದ್ದರು.

ವರದಿ: ಮಂಜುನಾಥ್ ತುರುವೇಕೆರೆ.


ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

 

Document

Leave a Reply

Your email address will not be published. Required fields are marked *