Document

Turuvekere: ಮೈ ಮೇಲೆ ದೇವರು ಬಂದಂತೆ ನಟನೆ-ದಲಿತರು ಗುಡಿ ಒಳ ಬರಬೇಡಿ ಎಂದವ ಅರೆಸ್ಟ್.

JANATAA24 NEWS DESK 

 

 

Turuvekere: ಮೈ ಮೇಲೆ ದೇವರು ಬಂದಂತೆ ನಟನೆ-ದಲಿತರು ಒಳ ಬರಬೇಡಿ ಎಂದವ ಅರೆಸ್ಟ್.

ಗುಡಿಯೊಳಗೆ ದಲಿತರು ಬಂದರೆ ದೇವರು ಬರುತ್ತೆ-ದೇವರು ಬಂದಂತೆ ನಟಿಸಿ ದಲಿತರನ್ನ ಗುಡಿಯೊಳಗಿಂದ ಹೊರ ಹಾಕಿದ ಮೇಲ್ಜಾತಿಯ ವ್ಯಕ್ತಿ.

 

Turuvekere

ತುರುವೇಕೆರೆ: ತಾಲೂಕಿನ ಗೋಣಿ ತುಮಕೂರು ಗ್ರಾಮದಲ್ಲಿರುವ ಅರಸಮ್ಮ ದೇವಸ್ಥಾನದಲ್ಲಿ ನಡೆದಂತಹ ಘಟನೆ.

ಹೊಸದಾಗಿ ಮದುವೆಯಾದ ನವಜೋಡಿ ದೇವಸ್ಥಾನ ಒಳಗೆ ಹೋದರೆ, ಮೇಲ್ಜಾತಿಯ ವ್ಯಕ್ತಿ ದೇವರು ಬಂದಂತೆ ನಟಿಸಿ ಅವರನ್ನು
ಹೊರಹಾಕಿಸಿದ್ದಾರೆ,

 

ದಲಿತರು ನಿಮಗೆ ಪ್ರವೇಶವಿಲ್ಲ. ಪುಣ್ಯ ಮಾಡಿಸಬೇಕು. ನಡೀ ಆಚೆಗೆ ಎಂದು ಗದರಿಸಿ ಎಂದು ಗದರಿ ಗ್ರಾಮಸ್ಥ ನಾರಾಯಣಪ್ಪ ಎಂಬಾತ ಹೊರಕಳಿಸಿರುವ ವಿಡಿಯೋ ವೈರಲ್ ಆಗಿದೆ. ಗ್ರಾಮಸ್ಥರ ನಡವಳಿಕೆಗೆ ಬೇಸತ್ತು ದಂಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್(FIR) ದಾಖಲಾಗಿದೆ.

ಗೃಹ ಸಚಿವ ತವರು ಜಿಲ್ಲೆಯಲ್ಲಿ ಈ ಘಟನೆ ಗೃಹ ಸಚಿವರು ನೋಡಲೇಬೇಕಾದಂತಹ ಸುದ್ದಿ ಇದು.

ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಸ್ಥಳ ಮಹಾಜರಿಗೆ ತಾಲೂಕು ದಂಡಾಧಿಕಾರಿ ಮತ್ತು ಪೊಲೀಸ್ ಇಲಾಖೆ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಕೆಲವು ಮೂಲಗಳಿಂದ ತಿಳಿದು ಬಂದಿದೆ.

 

 

ಸಾರ್ವಜನಿಕವಾಗಿ ಅವಮಾನಕಾರಿಯಾಗಿ ವರ್ತನೆ, ಪರಿಶಿಷ್ಟ ಜಾತಿ ಗುರುತನ್ನು ಉಲ್ಲೇಖಿಸಿ ಅಪಮಾನ. 19 ನೇ ತಾರೀಕು ಸಂಜೆ 7.30 ರ ಸಮಯದಲ್ಲಿ ನಡೆದಂತಹ ಘಟನೆ.

 

ನಾರಾಯಣಪ್ಪ, ಪ್ರಭಾ, ಕಾಂತಣ್ಣ, ಅಮೂಲ್ಯ, ಪುಟ್ಟೇಗೌಡ, ಪದ್ಮ ಸೇರಿ ಇತರರ ಮೇಲೆ ಎಫ್‌ಐಆರ್ ದಾಖಲಾಗಿದೆ. ದೇವರ ಬಂದಂತೆ ನಾಟಕವಾಡಿದ್ದ ನಾರಾಯಣಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

 

ವರದಿ: ಮಂಜುನಾಥ್ ತುರುವೇಕೆರೆ.

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *