JANATAA24 NEWS DESK
Turuvekere: ಸುನಿಲ್ ಚಾರಿಟಬಲ್ ಟ್ರಸ್ಟ್ ಹಾಗೂ ಕಲ್ಪಜ್ಯೋತಿ ಪತ್ರಿಕಾ ಸಹಯೋಗದಲ್ಲಿ ನಡೆದ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ ಯಶಸ್ವಿ.

ತುರುವೇಕೆರೆ: ತುರುವೇಕೆರೆ ತಾಲ್ಲೂಕಿನ ದಂಡಿನಶಿವರದಲ್ಲಿ ಯುವ ಮುಖಂಡ ಚಿಮ್ಮನಹಳ್ಳಿ ಸುನಿಲ್ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಅದ್ಧೂರಿಯಾಗಿ ನರವೇರಿತು.
ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಶಾಸಕ ಎಂ.ಟಿ.ಕೃಷ್ಣಪ್ಪ ಚಾಲನೆ ನೀಡಿ ಮಾತನಾಡಿ ಗ್ರಾಮೀಣ ಬಾಗದಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಮೂಲಕ ಸಾಮಾನ್ಯ ಜನರಿಗೆ ಆರೋಗ್ಯದ ಬಗೆಗೆ ಅರಿವು ಮೂಡಿಸುವ ಉತ್ತಮ ಕಾರ್ಯ ಮಾಡುತ್ತಿರುವ ಸುನಿಲ್‌ರವರಿಗೆ ಒಳ್ಳೆಯದಾಗಲಿ ಇಂತಹ ಕಾರ್ಯಕ್ರಮಗಳು ಅವರ ಟ್ರಸ್ಟ್ ಮೂಲಕ ಮುಂದಿನ ದಿನಗಳಲ್ಲಿ ಹೆಚ್ಚಿನದಾಗಿ ನಡೆಯಲಿ ಎಂದರು.
ಆರೋಗ್ಯ ಶಿಬಿರದಲ್ಲಿನ ಮಳಿಗೆಯ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ತುಮುಲ್ ಮಹಾಲಿಂಗಪ್ಪ ಜನರಿಗೆ ಐಶ್ವರ್ಯ, ಅಧಿಕಾರದ ಜೊತೆಗೆ ಆರೋಗ್ಯ ಬಹಳ ಮುಖ್ಯ ಅದರಲ್ಲೂ ಆರೋಗ್ಯದ ಅರಿವು ಪೂರ್ವಭಾವಿಯಾಗಿ ಜನರಿಗೆ ತಿಳಿಯಬೇಕೆಂದರೆ ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗ ಮಾತ್ರ ಇತ್ತೀಚಿನ ಒತ್ತಡದ ದಿನಗಳಲ್ಲಿನ ಕಾಯಿಲೆಗಳಿಂದ ಪಾರಾಗಲು ಸಾಧ್ಯ ಎಂದರು.
ಆರೋಗ್ಯ ಶಿಬಿರದಲ್ಲಿ ಗರ್ಭಿಣಿಯರಿಗೆ ಮಡಿಲು ತುಂಬಿ ಮಾತನಾಡಿದ ತುಮಕೂರು ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಗೀತಾ ರಾಜಣ್ಣ, ಚಿಮ್ಮನಹಳ್ಳಿ ಸುನಿಲ್ ರವರು ತಮ್ಮ ಹುಟ್ಟು ಹಬ್ಬವನ್ನು ಆರೋಗ್ಯ ಶಿಬಿರ ಏರ್ಪಡಿಸಿ ಮಾಡಿಕೊಳ್ಳುತ್ತಿರುವುದು ಅವರ ಸಾಮಾಜಿಕ ಸೇವಾಕಾರ್ಯವನ್ನು ತೋರುತ್ತದೆ ಅವರ ಸೇವೆ ಸಮಾಜಕ್ಕೆ ಹೆಚ್ಚಿನದಾಗಿ ತಲುಪಲಿ ಪ್ರತಿ ಗ್ರಾಮಕ್ಕೂ ಇವರ ಸೇವಾ ಕಾರ್ಯಗಳು ಅವರ ಟ್ರಸ್ಟ್ ಮೂಲಕ ನೆರವೇರಲಿ ಅವರಿಗೆ ಭಗವಂತ ಮುಂದಿನ ದಿನಗಳಲ್ಲಿ ಉನ್ನತ ಅಧಿಕಾರ ನೀಡಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಬಿ.ಎಸ್.ವಸಂತಕುಮಾರ್ ಮಾತನಾಡಿ ಸಮಾಜದ ಏಳಿಗೆಗೆ ಪ್ರತಿಯೊಬ್ಬರೂ ಒಂದಿಲ್ಲೊAದು ಕೊಡುಗೆ ನೀಡುವುದು ನಮ್ಮಗಳ ಕರ್ತವ್ಯ ಸುನಿಲ್ ಸೇವಾಕಾರ್ಯ ಇತರ ಯುವಕರಿಗೂ ಮಾದರಿಯಾಗಲಿ ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎ.ಐ.ಸಿ.ಸಿ.ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸುಬೃಹ್ಮಣ್ಯ ಶ್ರೀಕಂಠೇಗೌಡ ಮಾತನಾಡಿ ಸುನಿಲ್ ಹುಟ್ಟುಹಬ್ಬದಂದು ಕೇವಲ ಹಾರಾ ತುರಾಯಿಗೆ ಸೀಮಿತವಾಗದೆ ಸಮಾಜಮುಖಿಯಾಗಿ ಕೆಲಸಮಾಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳಿಗೆ ನನ್ನ ಸಹಕಾರ ಸದಾ ಇರುತ್ತದೆಂದು ತಿಳಿಸಿದರು.
ತಿಪಟೂರಿನ ಶೇಖರ್ ಬ್ಲಡ್ ಬ್ಯಾಂಕ್ ಮೂಲಕ ರಕ್ತದಾನ ಶಿಬಿರ ನಡೆಯಿತು, ಇದಕ್ಕೆ ಸ್ವತಹ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುನಿಲ್‌ರವರೇ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು.
ಆರೋಗ್ಯ ಶಿಬಿರದಲ್ಲಿ ಸಪ್ತಗಿರಿ ಆಪತ್ರೆ ವೈದ್ಯರು, ಶೇಖರ್ ಬ್ಲಡ್ ಬ್ಯಾಂಕ್‌ನ ಆದಂ ಹಾಗೂ ಸಿಬ್ಬಂದಿ, ಕಣ್ಣಿನ ತಜ್ನರು, ಸಾಯಿಗಂಗಾ ಆಸ್ಪತ್ರೆ ವೈದ್ಯರಾದ ಡಾ:ರಾಘವೇಂದ್ರ ಸೇರಿದಂತೆ ಇತರರು ಆರೋಗ್ಯ ತಪಾಸಣೆ ನೆರವೇರಿಸಿದರು.
ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ, ಮುಖಂಡರಾದ ಗುಡ್ಡೇನಹಳ್ಳಿ ಪ್ರಸನ್ನಕುಮಾರ್, ಅಮ್ಮಸಂದ್ರ ಸಿದ್ದಗಂಗಣ್ಣ, ದಂಡಿನಶಿವರ ರಾಜಕುಮಾರ್, ಶಂಕರೇಗೌಡ, ಜಕ್ಕನಹಳ್ಳಿ ಬಾಬಣ್ಣ, ಸುನಿಲ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುನಿಲ್, ಸುನಿಲ್‌ರವರ ತಂದೆಯವರಾದ ತಿಮ್ಮೇಗೌಡ, ಕಲ್ಪಜ್ಯೋತಿ ಪತ್ರಿಕೆ ಸಂಪಾದಕರಾದ ಬೊಮ್ಮೇನಹಳ್ಳಿ ನಂದೀಶ್, ಮೇಲನಹಳ್ಳಿ ಮಂಜಣ್ಣ, ಪೃಥ್ವಿರಾಜ್ ಸೇರಿದಂತೆ ಇತರರು ಇದ್ದರು.
ವರದಿ: ಮಂಜುನಾಥ್ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.