JANATAA24 NEWS DESK
Turuvekere: ರಸ್ತೆಗಳಿದ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ.

ತುರುವೇಕೆರೆ: ತಾಲೂಕು ಜೆ ಡಿ ಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಹೃತ್ವಿಕ್. ಗೌಡ ನೇತೃತ್ವದಲ್ಲಿ ಸೋಮವಾರದಂದು ಬೆಳಿಗ್ಗೆ ದಬ್ಬೆಘಟ್ಟ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಸರಿಯಾದ ಸಮಯಕ್ಕೆ ಬಸ್ ಬಾರದ ಹಿನ್ನೆಲೆ ಬಸ್ಸುಗಳನ್ನು ತಡೆದು ನಿಲ್ಲಿಸಿ ಪ್ರತಿಭಟನೆಗೆ ಇಳಿದರು.
ಇದೇ ಸಂದರ್ಭದಲ್ಲಿ ಸ್ಥಳಕ್ಕೆ ತಾಲೂಕು ದಂಡಾಧಿಕಾರಿ ಕುಂ ಹಿ ಅಹಮದ್ ಭೇಟಿ ನೀಡಿ, ವಿದ್ಯಾರ್ಥಿಗಳ ಸಮಸ್ಯೆಗಳ ಮಾಹಿತಿ ಪಡೆದರು, ಇದೇ ವೇಳೆ ತಾಲೂಕು ಜೆಡಿಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಹೃತ್ವೀಕ್ ಗೌಡ ಮಾತನಾಡಿ ಸತತ ಒಂದು ವರ್ಷಗಳಿಂದಲೂ ಬೆಳಗ್ಗೆ ಶಾಲಾ ಕಾಲೇಜುಗಳಿಗೆ ತೆರಳಲು ಮತ್ತು ಸಂಜೆ ಸಮಯದಲ್ಲಿ ತಮ್ಮ ತಮ್ಮ ಗ್ರಾಮಗಳಿಗೆ ತೆರಳಲು ಸರಿಯಾದ ಸಮಯಕ್ಕೆ ಬಸ್ಸುಗಳನ್ನು ಬಿಡದೆ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದು ಈಗಾಗಲೇ ಹಲವು ಬಾರಿ ಡಿಪೋ ಮ್ಯಾನೇಜರ್ ಅವರಿಗೆ ಮನವಿ ನೀಡಿದರು.
ಮನವಿ ಪಡೆದ ಎರಡು ದಿನಗಳ ಮಾತ್ರ ಬಸ್ಸುಗಳನ್ನು ಸರಿಯಾದ ಸಮಯಕ್ಕೆ ಬಿಟ್ಟು ನಂತರ ಯಥಾಪ್ರಕಾರ ಸರಿಯಾದ ಸಮಯಕ್ಕೆ ಬಸ್ಸುಗಳನ್ನು ಬಿಡದೆ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ಈಗಲೂ ಸಹ ಇದೆ ಈಗಾಗಲೇ ಬಸ್ ಬಾರದ ಹಿನ್ನೆಲೆ ವಿದ್ಯಾರ್ಥಿಗಳು ಸಹ ಬೇಸತ್ತು ಹೋಗಿದ್ದು ಇನ್ನು ಮುಂದೆ ಅಧಿಕಾರಿಗಳ ನಿರ್ಲಕ್ಷತನಕ್ಕೆ ನಾವುಗಳು ಬಗ್ಗುವುದಿಲ್ಲ ಇದೇ ರೀತಿಯಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟಕ್ಕೆ ಮುನ್ನುಡಿ ಬರೆಯಬೇಕಾಗುತ್ತದೆ ಎಂದರು.
ಹಾಗೂ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಡಿಪೋ ಮ್ಯಾನೇಜರ್ ಆಗಮಿಸಿದಾಗ ವಿದ್ಯಾರ್ಥಿಗಳ ಮತ್ತು ಡಿಪೋ ಮ್ಯಾನೇಜರ್ಗಳ ನಡುವೆ ಕೆಲ ಸಮಯ ಸರಿಯಾದ ಸಮಯಕ್ಕೆ ಬಸ್ ಬಾರದ ಕುರಿತು ವಾಗ್ವಾದವು ನಡೆಯಿತು ಇದೇ ವೇಳೆ ಬಸ್ ಮೆನೇಜರ್ ನಮ್ಮಲ್ಲಿ ಬಸ್ಗಳ ಕೊರತೆ ಸಿಬ್ಬಂದಿಗಳ ಕೊರತೆ ಇರುವುದರಿಂದ ಕೆಲವು ವ್ಯತ್ಯಾಸಗಳಾಗಿವೆ ಇನ್ನು ಮುಂದೆ ಸರಿಯಾದ ಸಮಯಕ್ಕೆ ಬಸ್ ಗಳನ್ನು ಬಿಡುತ್ತೇವೆ ಎಂದರು, ಆದರೂ ವಿದ್ಯಾರ್ಥಿಗಳು ಈಗಾಗಲೇ ನೀವು ಸತತವಾಗಿ ಒಂದು ವರ್ಷಗಳಿಂದಲೂ ಬರಿ ಸುಳ್ಳುಗಳನ್ನ ಹೇಳುತ್ತಾ ಬಂದಿದ್ದೀರಾ ನೀವು ಯಾವುದೇ ಕಾರಣಕ್ಕೂ ಬಸ್ಸುಗಳನ್ನು ಬಿಡುವುದಿಲ್ಲ ಎಂದು ಹೇಳಿ ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ಮಂತ್ರಿಗಳ ವಿರುದ್ಧ ಧಿಕ್ಕಾರ ಕೂಗುತ್ತಾ, ನಿಮ್ಮ ಕೈಲಾದರೆ ಬಸ್ಸುಗಳನ್ನು ಬಿಡಿ ಇಲ್ಲವಾದರೆ ಆಗುವುದಿಲ್ಲ ಎಂದು ಹೇಳಿ ನಮ್ಮ ಕೇಂದ್ರ ಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಅವರ ಬಳಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಹೇಳಿ ಬಸ್ಸುಗಳನ್ನು ಹೇಗೆ ಬಿಡಿಸಿಕೊಳ್ಳಬೇಕೆಂದು ನಮಗೆ ಗೊತ್ತಿದೆ ಎಂಬ ಮಾತಿನೊಂದಿಗೆ ಪ್ರತಿಭಟನೆಯನ್ನು ಮುಂದುವರಿಸಿದರು, ನಂತರ ತಾಲೂಕಿನ ಶಾಸಕರು ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿ ಸರಿಯಾದ ಸಮಯಕ್ಕೆ ಬಸ್ ಗಳನ್ನು ಬಿಡಲು ಸೂಚಿಸಿದರು.
ಇದೆ ವೇಳೆ ಸಿಎಸ್ ಪುರ ಜೆಡಿಎಸ್ ಯುವ ಮುಖಂಡರಾದ ಪಾಂಡುಗೌಡ, ಬೆಂಗಳೂರು ಯುವ ಮುಖಂಡರಾದ ಸುಗಮ್ ಗೌಡ, ಯುವ ಮುಖಂಡರುಗಳಾದ, ರಾಮ್ ಕುಮಾರ್, ಪ್ರಸಾದ್ ಗೌಡ, ಸುಮಂತ್, ಪವನ್, ಪೃಥ್ವಿ, ಕುಶಾಲ್, ಹೇಮಂತ್, ಹರ್ಷ, ಮನು, ಧನುಷ್, ಆನಂದ್, ಯದು ಗುಬ್ಬಿ, ಕುಮಾರ್, ಭರತ್ ಗೌಡ, ದರ್ಶನ್, ಹಾಗೂ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.