JANATAA24 NEWS DESK
Turuvekere: ಸ್ಮಶಾನದ ಜಾಗಕ್ಕೂ ಬಂದೇ ಬಿಡ್ತು ಚರಂಡಿ ನೀರು, ಹಾಗಾದರೆ ಸ್ಮಶಾಣ ನಿರ್ವಹಿಸುವ ಇಲಾಖೆ ಕಳೆದೋಯ್ತಾ?

ತುರುವೇಕೆರೆ: ತಾಲೂಕಿನ ದಂಡಿನ ಶಿವರ ಗ್ರಾಮ ಎಸ್ ಸಿ ಕಾಲೋನಿ ಹತ್ತಿರ 20 ಗುಂಟೆ ಜಮೀನು ಈಗಾಗಲೇ ಸ್ಮಶಾನಕ್ಕೆ ಮಂಜೂರು ಆಗಿದ್ದು ಸ್ಮಶಾನದ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸುಮಾರು ಹದಿಮೂರು ಲಕ್ಷ ಹಣ ಆರು ತಿಂಗಳ ಹಿಂದೆಯಷ್ಟೇ ಮಂಜೂರಾಗಿದ್ದು ಇದರ ನಿರ್ವಹಣೆಯನ್ನು ನಿರ್ಮಿತಿ ಕೇಂದ್ರಕ್ಕೆ ಹಸ್ತಾಂತರಿಸಲಾಗಿತ್ತು ಆದರೂ ಇದಕ್ಕೆ ಸಂಬಂಧಪಟ್ಟ ನಿರ್ಮಿತಿ ಕೇಂದ್ರ ಇದರ ನಿರ್ವಹಣೆಯನ್ನು ಸರಿಯಾಗಿ ಮಾಡದೆ ಸ್ಮಶಾನದ ಜಾಗದಲ್ಲಿರುವ ಗುಂಡಿಗಳನ್ನು ಮುಚ್ಚದೆ ಶವ ಸಂಸ್ಕಾರವನ್ನು ನೀರು ತುಂಬಿರುವ ಗುಂಡಿಯಲ್ಲೇ ಮಾಡುವಂತಹ ಪರಿಸ್ಥಿತಿ ಬಂದೊದಗಿದೆ ಅಂತಾನೆ ಹೇಳಬಹುದು.
ಇದನ್ನು ಪ್ರಶ್ನೆ ಮಾಡಿದ ಗ್ರಾಮದ ದಲಿತ ಮುಖಂಡ ಹಾಗೂ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನ ಶಿವರ ಕುಮಾರ್ ಈಗಾಗಲೇ ನಿರ್ಮಿತಿ ಕೇಂದ್ರದ ಇಂಜಿನಿಯರ್ ಗಳನ್ನ ದಯಮಾಡಿ ಸ್ಮಶಾನದಲ್ಲಿರುವ ಗುಂಡಿಗಳನ್ನ ಮುಚ್ಚಿಕೊಡಿ ಇಲ್ಲವಾದರೆ ಇಲ್ಲಿ ಶವ ಸಂಸ್ಕಾರ ಮಾಡಲು ಆಗುವುದಿಲ್ಲ ಎಂಬ ಪ್ರಶ್ನೆಯನ್ನು ಕೂಡ ಮಾಡಲಾಗಿ ಅವರಿಗೆ ಇಂಜಿನಿಯರ್ ಕೊಟ್ಟ ಉತ್ತರ ಗುಂಡಿ ಮುಚ್ಚಲು ನಮ್ಮಲ್ಲಿ ಅವಕಾಶವಿಲ್ಲ ನೀವುಗಳೇ ಗುಂಡಿ ಮುಚ್ಚಿ ಗುಂಡಿಯಲ್ಲಿ ನಿಂತಿರುವ ನೀರನ್ನು ಖಾಲಿ ಮಾಡಿಕೊಟ್ಟರೆ ನಾವು ಸರಿಪಡಿಸಿ ಕೊಡುತ್ತೇವೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಜೊತೆಗೆ ಈಗಾಗಲೇ ಈ ಸ್ಮಶಾನವಿರುವ ಸ್ಥಳಕ್ಕೆ ತಾಲೂಕು ದಂಡಾಧಿಕಾರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಹ ಈ ಜಾಗದ ಅವ್ಯವಸ್ಥೆಯನ್ನು ನೋಡಿದ್ದು ಆದರೂ ಯಾವುದೇ ಕ್ರಮ ಕೈಗೊಳ್ಳದೆ ಸ್ಮಶಾನದಲ್ಲಿ ಇರುವ ನೀರು ನಿಂತಿರುವ ಗುಂಡಿಗಳಲ್ಲಿ ಶವ ಸಂಸ್ಕಾರ ಮಾಡುವಂತಹ ಪರಿಸ್ಥಿತಿ ಬಂದಿರುವುದು ಕಣ್ಣಿಗೆ ಎದ್ದು ಕಾಣುತ್ತಿದೆ ಸ್ಮಶಾಣ ನೀರು ನಿಂತು ಕೆರೆಯಂತಾಗಿದೆ ಎಂದು ದಲಿತ ಮುಖಂಡ ಆರೋಪಿಸಿದ್ದಾರೆ.
ಹಾಗಾದರೆ ಸ್ಮಶಾನ ನಿರ್ವಹಣೆ ಮಾಡಲು ಸಂಬಂಧಪಟ್ಟ ಇಲಾಖೆ, ಸಂಬಂಧ ಪಟ್ಟ ಮಂತ್ರಿಗಳೇ ಬರಬೇಕೇ.
ವರದಿ: ಮಂಜುನಾಥ್ ಕೆಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.