JANATAA24 NEWS DESK
Turuvekere: ಒಳ ಮೀಸಲಾತಿ ಜಾರಿ ಮಾಡುವಂತೆ ತುರುವೇಕೆರೆಯಲ್ಲಿ ಪ್ರತಿಭಟನೆ.

ತುರುವೇಕೆರೆ: ತಾಲೂಕು ಆಡಳಿತ ಸೌಧ ಮುಂಭಾಗ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ನೇತೃತ್ವದಲ್ಲಿ ಮಾದಿಗ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು,ಕಾಂಗ್ರೆಸ್ ಸರಕಾರದ ವಿರುದ್ಧ ಗುಡುಗಿದ ಮಾದಿಗರ ಸೈನ್ಯ ಸಿಡಿದೆದ್ದಿದ್ದು
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿ ಒಳ ಮೀಸಲಾತಿಯನ್ನು ಜಾರಿ ಮಾಡುವಲ್ಲಿ ರಾಜ್ಯ ಸರಕಾರದ ವಿಳಂಬ ನೀತಿಯನ್ನು ಖಂಡಿಸಿ ಉಗ್ರವಾಗಿ ಹೋರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ತುರುವೇಕೆರೆ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ತೊರೆಮಾವಿನಹಳ್ಳಿ ಚಂದ್ರು ಮಾತನಾಡಿ, ಒಳ ಮೀಸಲಾತಿ ಜಾರಿ ಮಾಡುವಂತೆ ಸುಪ್ರಿಂಕೋಟ್೯ ಸೂಚಿಸಿದರು ಸಹ ಜಾರಿ ಮಾಡುವಲ್ಲಿ ಸರಕಾರ ವಿಳಂಬ ನೀತಿಯ ಧೋರಣೆ ಅನುಸರಿಸುತ್ತದೆ ಸರಕಾರ ಕೂಡಲೆ ಒಳ ಮೀಸಲಾತಿ ಜಾರಿ ಮಾಡಬೇಕು, ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಮಾದಿಗರ ಶಕ್ತಿ ಏನೆಂದು ತೋರಿಸಬೇಕಾದೀತು ಎಂದು ಎಚ್ಚರಿಸಿದರು, ತಾಲೂಕು ಸಂಚಾಲಕ ತಿಮ್ಮೇಶ್ ಮಾತನಾಡಿ ರಾಜ್ಯ ಸರ್ಕಾರವು ವಿವಿಧ ಇಲಾಖೆಗಳಲ್ಲಿನ 56,432 ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಲು ಸರ್ಕಾರ ಒಂದು ಕಡೆ ಒಳಮೀಸಲಾತಿ ಜಾರಿ ಅನುಸರಿಸದಿರುವುದು ಈಗಾಗಲೇ ಒಳಮೀಸಲಾತಿ ಕುರಿತ ಕಾಯ್ದೆ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡು, ರಾಜ್ಯಪಾಲರ ಅಂಕಿತವೂ ಪಡೆದಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸಬೇಕು ಇಲ್ಲವಾದರೆ ನಮ್ಮ ಶಕ್ತಿ ಏನೆಂದು ತೋರಬೇಕಾಗುತ್ತೆ ಎಂದು ಎಚ್ಚರಿಸಿದರು. ದಲಿತ ಮುಖಂಡ
ಮುನಿಯೂರು ರಂಗಸ್ವಾಮಿ ಮಾತನಾಡಿ,ಈಗಾಗಲೆ ಒಳಮೀಸಲಾತಿ ವಿಷಯದಲ್ಲಿ ರಾಜ್ಯ ಸರ್ಕಾರ ಯಾವ ರೀತಿ ಮಾದಿಗರಿಗೆ ಮೋಸಮಾಡುತ್ತಿದೆ ಮಾದಿಗರಿಗೆ ಮರಣ ಶಾಸನ ಬರೆದಿದೆ ಎಂಬುದು ನಿಮಗೆಲ್ಲ ತಿಳಿದಿರುವ ವಿಷಯ ನಮ್ಮ ಸಮುದಾಯದ ವಿರುದ್ಧ ಶಡ್ಯಂತರ ರೂಪಿಸುತ್ತಿದ್ದಾರೆ,ವಿಷ ಉಣಿಸುತ್ತಿದ್ದಾರೆ ಎಂಬುದನ್ನು ತಿಳಿಯಿರಿ ಈ ವಿಚಾರವಾಗಿ ರಾಜ್ಯ ಮತ್ತು ಜಿಲ್ಲೆಯಲ್ಲಿ ಒಳಮೀಸಲಾತಿ ವಿಚಾರವಾಗಿ ಅನೇಕ ರೀತಿಯ ಹೋರಾಟಗಳನ್ನು ಮಾಡಿದ್ದೇವೆ.ತಾಲ್ಲೂಕಿನ ಎಲ್ಲಾ ಮಾದಿಗ ಮುಖಂಡರು ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದು ಕಟ್ಟಿಟ್ಟ ಬುತ್ತಿ, ಸ್ವ ಪ್ರತಿಷ್ಠೆಯನ್ನು ಬಿಟ್ಟು ಮುಂದಿನ ಮಕ್ಕಳ ಭವಿಷ್ಯತ್ತಿಗಾಗಿ ನಮ್ಮ ಬಲವನ್ನು ತೋರಿಸುವ ಮುಖಾಂತರ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾಗಿದೆ ಎಂದರು.
ಕೃಷ್ಣ ಮಾದಿಗ ಮಾತನಾಡಿ ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸುತ್ತಿರುವ ನಮ್ಮ ಸಮುದಾಯ ಮಾದಿಗರ ಮೇಲೆ ನಿಮಗ್ಯಾಕೆ ಇಷ್ಟೊಂದು ದ್ವೇಷ, ಕೋಪ, ಅಸಹನೆ, ಅಸೂಯೆ? ಬಾಬಾಸಾಹೇಬರನ್ನು ಎದೆಯಲ್ಲಿ ಅಪ್ಪಿಕೊಂಡವರು ನಾವು ಅವರ ಸಿದ್ಧಾಂತಗಳಿಗೆ , ಚಿಂತನೆಗಳಿಗೆ ಬದ್ಧವಾಗಿ ನಡೆಯುತ್ತಿದ್ದೇವೆ. ನಮಗೆ ದಕ್ಕಬೇಕಾದ, ನ್ಯಾಯಬದ್ಧವಾದ ಒಳಮೀಸಲಾತಿಯನ್ನಷ್ಟೇ ಜಾರಿಗೊಳಿಸಿ ಎಂದು ನಾವು ಈ ಮೂವತೈದು ವರುಷಗಳಿಂದ ಸರಕಾರವನ್ನು ಒತ್ತಾಯಿಸುತ್ತಿದ್ದೇವೆ. ಅದು ನಮ್ಮ ಸಂವಿಧಾನಬದ್ಧವಾದ ನ್ಯಾಯಯುತ ಬೇಡಿಕೆ.ನಮ್ಮದು ಯಾರನ್ನೂ ನೋಯಿಸುವ ಹಠವಲ್ಲಾ ಬದಲಿಗೆ ನಮಗಾಗುತ್ತಿರುವ ದಶಕಗಳ ನೋವನ್ನು ನಿವಾರಿಸಿಕೊಳ್ಳುವ ಹಂಬಲವಷ್ಟೇ. ನಾವು ಇನ್ನೊಬ್ಬರ ಅನ್ನವನ್ನು ಕಸಿದುಕೊಳ್ಳುವವರಲ್ಲ, ಅಂತಹ ವ್ಯಕ್ತಿತ್ವವೂ ನಮ್ಮದಲ್ಲ. 35 ವರ್ಷಗಳಿಂದ ನಮ್ಮ ಹಸಿವಿನ ಕೂಗು ಮತ್ತು ಸಂವಿಧಾನ ಬದ್ಧವಾದ ಹಕ್ಕು ಸರ್ಕಾರಕ್ಕೆ ಕೇಳಿಸುತ್ತಿಲ್ಲ , ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಒಳ ಮೀಸಲಾತಿ ಹೋರಾಟಗಾರರು ಉಪಸ್ಥಿತರಿದ್ದು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ವರದಿ: ಮಂಜುನಾಥ್ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.