Document

Turuvekere: ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಆರಂಭ.

JANATAA24 NEWS DESK 

 

 

Turuvekere: ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಆರಂಭ.

Turuvekere: ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಆರಂಭ.

ತುರುವೇಕೆರೆ: ಪಟ್ಟಣದ ತಾಲೂಕು ಕಚೇರಿಗೆ ಹೊಂದಿಕೊಂಡಂತಿರುವ ವಾಣಿಜ್ಯ ಸಂಕೀರ್ಣದಲ್ಲಿ ಇಂದು ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಶಾಖೆಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅನಂತರಾಜು ಉದ್ಘಾಟಿಸಿದರು, ಈ ಶಾಖೆಯು ಜಿಲ್ಲಾ ಸಂಚಾಲಕ ನಾಗತಿಹಳ್ಳಿ ಕೃಷ್ಣಮೂರ್ತಿ, ಜಿಲ್ಲಾ ಸಂಘಟನಾ ಸಂಚಾಲಕ ದಂಡಿನ ಶಿವರಕುಮಾರ್, ತಾಲೂಕು ಸಂಚಾಲಕ ಮಲ್ಲೂರು ತಿಮ್ಮೇಶ್ ರವರ ನೇತೃತ್ವದಲ್ಲಿ ಉದ್ಘಾಟನೆಗೊಂಡಿದ್ದು ಇದೇ ವೇಳೆ ತಾಲೂಕು ಶಾಖೆ ಉದ್ಘಾಟಿಸಿದ ಅನಂತರಾಜು ಮಾತನಾಡಿ ಪಟ್ಟಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಇಂದಿನಿಂದ ಆರಂಭಗೊಂಡಿದ್ದು ಇದರಿಂದಾಗಿ ನೊಂದವರಿಗೆ ಸಾಮಾಜಿಕವಾಗಿ ದೀನದಲಿತರಿಗೆ ಸರ್ವ ಜನಾಂಗದವರಿಗೂ ಆರೋಗ್ಯಕರ ಹೋರಾಟ ಮಾಡುವುದರ ಮೂಲಕ ನ್ಯಾಯ ದೊರಕಿಸಿ ಕೊಡುವಂತಹ ಕಾರ್ಯ ನಿರ್ವಹಿಸಬೇಕು, ನೊಂದವರ ಪಾಲಿಗೆ ದಾರಿ ದೀಪವಾಗಿ ಈ ಸಂಘಟನೆ ಕಾರ್ಯ ನಿರ್ವಹಿಸಿ ನ್ಯಾಯ ದೊರಕಿಸಿ ಕೊಡಬೇಕು ಇದರ ಜೊತೆಗೆ ನಾನು ಕೂಡ ಒಬ್ಬ ಅಧಿಕಾರಿಯಾಗಿ ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದರು.

 

ನಂತರ ಜಿಲ್ಲಾ ಸಂಚಾಲಕರಾದ ನಾಗತಿಹಳ್ಳಿ ಕೃಷ್ಣಮೂರ್ತಿ ಮಾತನಾಡಿ ತಾಲೂಕಿನಲ್ಲಿ ಇಂದು ತಾಲೂಕು ಶಾಖೆ ಆರಂಭವಾಗಿದ್ದು ನಮ್ಮ ಶಾಖೆಯ ಸರ್ವ ಸದಸ್ಯರಿಗೂ ಹೇಳುವುದೇನೆಂದರೆ ದೀನ ದಲಿತರ ಕಣ್ಣೀರು ಹೊರೆಸುವಂತಹ ಕೆಲಸ ಆಗಬೇಕಾಗಿದೆ ಜೊತೆಗೆ ಯಾರೇ ನೊಂದ ಜನರು ನಿಮ್ಮ ಸಹಾಯ ಕೇಳಿ ಬಂದರೆ ಅಂತಹವರನ್ನು ಕಚೇರಿಗೆ ಕರೆಯಿಸಿ ತಾಲೂಕಿನ ಸಂಚಾಲಕರೊಂದಿಗೆ ಮತ್ತು ಪದಾಧಿಕಾರಿಗಳೊಂದಿಗೆ ಚರ್ಚಿಸಿ ನೊಂದವರಿಗೆ ನ್ಯಾಯ ದೊರಕಿಸಿ ಕೊಡುವಂತಹ ಹೋರಾಟ ಆಗಬೇಕು ಜೊತೆಗೆ ಎಲ್ಲಾ ಸಮುದಾಯದ ಬಡವರಿಗೆ ನಿರ್ಗತಿಕರಿಗೆ ನಿವೇಶನಗಳು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲೂ ಕೂಡ ನಮ್ಮ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಕಾರ್ಯ ನಿರ್ವಹಿಸಲಿದೆ ಜೊತೆಗೆ ಎಲ್ಲಾ ಸಮುದಾಯದ ಜನಗಳಿಗೆ ತಾಲೂಕಿನ ದಸಂಸ ಶಾಖೆ ದಾರಿ ದೀಪವಾಗಲಿ ಎಂದು ಶುಭ ಹಾರೈಸಿದರು.

 

ಇದೇ ಸಂದರ್ಭದಲ್ಲಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ತುರುವೇಕೆರೆ ತಾಲೂಕಿನ ಎಲ್ಲ ಪದಾಧಿಕಾರಿಗಳು ಯುವ ಮುಖಂಡರು ಹಾಗೂ ಹಿರಿಯ ಮುಖಂಡರು ಹಲವರು ಉಪಸ್ಥಿತರಿದ್ದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.


ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *