Document

Turuvekere: ಫೆ.6ರಂದು ಕಣಕೂರಿನಲ್ಲಿ ಟಿ.ಟಿ.ಡಿ. ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಕಲ್ಯಾಣೋತ್ಸವ–ಬಾಲಾಜಿ ಕೆ. ಕುಮಾರ್. 

JANATAA24 NEWS DESK 

 

Turuvekere: ಫೆ.6ರಂದು ಕಣಕೂರಿನಲ್ಲಿ ಟಿ.ಟಿ.ಡಿ. ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಕಲ್ಯಾಣೋತ್ಸವ–ಬಾಲಾಜಿ ಕೆ. ಕುಮಾರ್.

Turuvekere On Feb. 6, TTD Sri Lakshmi Venkateswara Swamy Kalyanotsava-Balaji K. Kumar will be present at Kanakur.

ತುರುವೇಕೆರೆ: ಮುಂಬರುವ ‌ಫೆಬ್ರವರಿ 4 ರಿಂದ 6 ರವರೆಗೆ ತಾಲೂಕಿನ ಮಾಯಸಂದ್ರ ಹೋಬಳಿಯ ಕಣಕೂರು ಗ್ರಾಮದಲ್ಲಿ ಶ್ರೀ ಬಾಲಾಜಿ ಸೇವಾ ಟ್ರಸ್ಟ್ (ರಿ) ಮತ್ತು ಕಣಕೂರು ಗ್ರಾಮಸ್ಥರಿಂದ ಹಾಗೂ ಭಕ್ತಾದಿಗಳಿಂದ ನಿರ್ಮಾಣಗೊಂಡಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ (ನಡು ಕೇರಪ್ಪ ಸ್ವಾಮಿ) ನೂತನ ದೇವಾಲಯದ ಉದ್ಘಾಟನೆ ಮತ್ತು ಪ್ರತಿಷ್ಠಾಪನಾ ಕಾರ್ಯಕ್ರಮದ ಜೊತೆಗೆ ಫೆ.6ರ ಸಂಜೆ ಶ್ರೀ ತಿರುಮಲ-ತಿರುಪತಿ, ಕ್ಷೇತ್ರದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯವರ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಶ್ರೀ ಬಾಲಾಜಿ ಸೇವಾ ಟ್ರಸ್ಟ್ (ರಿ)ಸಂಸ್ಥಾಪಕರಾದ ಬಾಲಾಜಿ ಕೆ.ಕುಮಾರ್ ರವರು ಹೇಳಿದರು.

 

 

ಭಾನುವಾರ ಕಣಕೂರು ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ದೇವಾಲಯದ ಆವರಣದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕಣಕೂರು ಗ್ರಾಮವು ನನ್ನ ತಾಯಿಯ ತವರು ಮನೆಯಾಗಿದ್ದು, ನಾನು ಬಾಲ್ಯದಲ್ಲಿ ಹುಟ್ಟಿ ಬೆಳೆದು, ವಿದ್ಯಾಭ್ಯಾಸ ಮಾಡಿದ ಗ್ರಾಮವಾಗಿದೆ. ಒಂದು ಕಾಲದಲ್ಲಿ ನನ್ನ ತಾಯಿಯ ಕನಸಾಗಿದ್ದ, ಕಲ್ಯಾಣೋತ್ಸವವೂ ಇಂದು ನನಸಾಗುತ್ತಿದೆ.

 

ಶ್ರೀ ಸ್ವಾಮಿಯ ಪ್ರೇರಣೆಯಂತೆ ಗ್ರಾಮದಲ್ಲಿ ನೂತನ ದೇವಾಲಯ ನಿರ್ಮಾಣವಾಗುತ್ತಿದ್ದು, ಭಕ್ತಾದಿಗಳ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ,ಟ್ರಸ್ಟಿನ ವತಿಯಿಂದ 1 ಕೋಟಿಗೂ ಅಧಿಕವಾಗಿ ದೇವಾಲಯದ ಜೀರ್ಣೋದ್ಧಾರವಾಗಿದ್ದು,ಫೆ.4 ರಿಂದ 6ರಂದು ಲೋಕಾರ್ಪಣೆಗೊಳ್ಳಲಿದೆ.

 

ಫೆ.4ರಂದು ಗುರು ಪ್ರಾರ್ಥನೆ, ಗೋಪೂಜೆ, ವಿವಿಧ ಹೋಮಗಳು ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮ ಪ್ರಸಾದ ವಿನಿಯೋಗ.

ಫೆ.5ರಂದು ಪ್ರಾತಃ ಕಾಲ. ವೇದಪಾರಾಯಣ. ಪ್ರಧಾನ ಕಳಶ ಆರಾಧನೆ. ನವಗ್ರಹ ಹೋಮ. ಗ್ರಾಮ ದೇವತೆಗಳ ಹೋಮಗಳು ಶಾಂತಿ ಹೋಮಗಳು ಸೇರಿದಂತೆ ಮಹಾಮಂಗಳಾರತಿ ವಿಶೇಷ ಪೂಜಾ ಕಾರ್ಯಕ್ರಮಗಳು ಪ್ರಸಾದ ವಿನಿಯೋಗ.

ಫೆ.6ರಂದು ಪ್ರಾತ:ಕಾಲ ಯೋಗಪೀಠಾರ್ಚನೆ. ಸ್ವಾಮಿಯ ಸ್ಥಿರಬಿಂಬ ಪ್ರತಿಷ್ಠಾಪನೆ. ಪ್ರಾಣ ಪ್ರತಿಷ್ಠಾನ ಹೋಮಗಳು, ವಿಧ ಶಾಂತಿ ಹೋಮಗಳು ಸೇರಿದಂತೆ ಕುಂಭಾಭಿಷೇಕ ವಾದ್ಯ ಸೇವೆ ಹೆಚ್ಚಿನ ಪೂಜಾ ಕಾರ್ಯಕ್ರಮಗಳ ಜೊತೆಗೆ ಬೆಳಗ್ಗೆ 11 ರಿಂದ ಸಂಜೆ 5ರವರೆಗೆ ಹೆಸರಾಂತ ಗಾಯಕರುಗಳಿಂದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮವನ್ನು ನಡೆಯಲಿದೆ.

 

ಫೆ.6ರ ಸಂಜೆ 6ಕ್ಕೆ ವಿಶೇಷವಾದ ಟಿ.ಟಿ.ಡಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯವರ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಟಿ.ಟಿ.ಡಿ,ಯ ಪ್ರಧಾನ ಅರ್ಚಕರು, ಸಿಬ್ಬಂದಿಗಳು, ಭಾಗವಹಿಸಲಿದ್ದಾರೆ. ಸಮಸ್ತ ಭಕ್ತಾದಿಗಳು ತಾಲೂಕಿನ ನಾಗರಿಕ ಬಂಧುಗಳು ಸ್ವಾಮಿಯ ದರ್ಶನ ಪಡೆದು ಪುನೀತರಾಗಿ ಕಾರ್ಯಕ್ರಮದ ಯಶಸ್ವಿಗಾಗಿ ಸಹಕರಿಸಬೇಕೆಂದು ಮನವಿ ಮಾಡಿದರು.

 

 

ಈ ವಿಶೇಷವಾದ ಧಾರ್ಮಿಕ ಕಾರ್ಯಕ್ರಮದಲ್ಲಿ ಯಾವುದೇ ವೇದಿಕೆ ಕಾರ್ಯಕ್ರಮಗಳು ಇರುವುದಿಲ್ಲ. ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಕಲ್ಯಾಣೋತ್ಸವದ ಅಂಗವಾಗಿ ಭಕ್ತಾದಿಗಳ ದರ್ಶನಕ್ಕಾಗಿ ಭವ್ಯ ವೇದಿಕೆಯನ್ನು ನಿರ್ಮಿಸಲಾಗುವುದು. ಸುಮಾರು 60 ರಿಂದ 70, ಸಾವಿರ ಭಕ್ತಾದಿಗಳ ನಿರೀಕ್ಷೆಯನ್ನು ಹೊಂದಿದ್ದು ಇನ್ನು ಹೆಚ್ಚಿನ ಭಕ್ತಾದಿಗಳು ಆಗಮಿಸವ ನಿರೀಕ್ಷೆಯನ್ನು ಸಹಾ ಹೊಂದಿದ್ದೇವೆ.

 

ಭಕ್ತಾದಿಗಳ ಸುಗಮ ದರ್ಶನಕ್ಕೆ ಸುಸಜ್ಜಿತ ವ್ಯವಸ್ಥೆ. ಹಿರಿಯ ನಾಗರೀಕರಿಗೆ ಅಂಗವಿಕರಿಗೆ ಪ್ರತ್ಯೇಕ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳು. 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಯೋಜನೆ. ಅಗ್ನಿಶಾಮಕ ದಳ. ತುರ್ತು ವೈದ್ಯಕೀಯ ಸೇವೆ. ಅಂಬುಲೆನ್ಸ್. ದಾಸೋಹದ ವ್ಯವಸ್ಥೆ. ಕಲ್ಯಾಣೋತ್ಸವ ವೀಕ್ಷಿಸಲು 10, ಸಾವಿರ

ಆಸನದ ವ್ಯವಸ್ಥೆ, ವಿದ್ಯುತ್ ದೀಪ ಅಲಂಕಾರ, ಸೇರಿದಂತೆ 300ಕ್ಕೂ ಹೆಚ್ಚು ಬಾಣಸಿಗರು, ಟಿ ಟಿ ಡಿ ಯಂತೆ ಪ್ರಸಾದ ವಿನಿಯೋಗ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.

 

ಮುಂದುವರೆದು ಮಾತನಾಡಿದ ಅವರು ಪ್ರಾರಂಭದಿಂದಲೂ,ಕಣಕೂರು ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಯುವಕ ಮಿತ್ರರು, ಹಿರಿಯರು, ನನಗೆ ನೆಚ್ಚಿನ ಪ್ರೋತ್ಸಾಹ ,ಸಲಹೆ, ಮಾರ್ಗದರ್ಶನಗಳನ್ನು ನೀಡುತ್ತಿದ್ದು, ನನಗೆ ಇನ್ನಷ್ಟು ಬಲ ನೀಡಿದೆ. ಹಗಲಿರುಳೆನ್ನದೆ ಆಹ್ವಾನ ಪತ್ರಿಕೆ ನೀಡಲು ಮತ್ತು ಪ್ರಚಾರಕ್ಕಾಗಿ ಪ್ರತಿಯೊಬ್ಬರೂ ಸಹ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿಮ್ಮೆಲ್ಲರ ಸಹಕಾರವೇ ನನಗೆ ಶಕ್ತಿ. ಮುಂದಿನ ದಿನಗಳಲ್ಲಿ ತಾವೆಲ್ಲ ಇದೇ ರೀತಿಯ ಸಹಕಾರ ಮಾಡುವುದಾದರೆ ಮುಂಬರುವ ವೈಕುಂಠ ಏಕಾದಶಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು, ಸುಮಾರು 10 ಸಾವಿರ ಲಾಡು ಪ್ರಸಾದವನ್ನು ಟಿ ಟಿ ಡಿ ಕ್ಷೇತ್ರದಿಂದ ತರಿಸಿ ಪ್ರಸಾದ ವಿನಿಯೋಗ ಮಾಡುವ ಆಸೆ ಹೊಂದಿದ್ದೇನೆ, ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು.

 

ಮತ್ತೊಮ್ಮೆ ಪತ್ರಕರ್ತರಲ್ಲಿ ಕಳಕಳಿಯ ಮನವಿ ಏನೆಂದರೆ ನಾನು ತಾಲೂಕಿಗೆ ಆಗಮಿಸಿರುವುದು, ರಾಜಕೀಯ ಉದ್ದೇಶದಿಂದ ಅಲ್ಲ. ಈಗಾಗಲೇ ಗಾಳಿ ಸುದ್ದಿಗಳು ಹರಿದಾಡುತ್ತಿವೆ.ಯಾವುದೇ ಊಹಾಪೋಹಗಳಿಗೆ ಅವಕಾಶ ನೀಡಬಾರದು, “ನಾನು ನನ್ನ ತಾಯಿಗೆ ಮಾತನ್ನು ನೀಡಿರುವೆ ಯಾವುದೇ ಚುನಾವಣೆಗೂ ನಾಮಪತ್ರ ಸಲ್ಲಿಸುವುದಿಲ್ಲ” ಎಂದು.

ಶ್ರೀ ಸ್ವಾಮಿಯ ಸೇವಕನಾಗಿ, ಸೇವೆಗಾಗಿ, ನಿಮ್ಮಲ್ಲಿ ಒಬ್ಬನಾಗಿ, ನನ್ನ ಗ್ರಾಮದ ಒಳಿತಿಗಾಗಿ, ನಾನು ಸಹ ಬಂದಿದ್ದೇನೆ, ಸೇವೆ ಮಾಡುತ್ತೇನೆ. ಹಲವಾರು ದೇವಾಲಯಗಳಿಗೆ, ಪುಣ್ಯಕಾರ್ಯಗಳಿಗೆ, ಬಡವರಿಗೆ, ನನ್ನ ಕೈಲಾದ ಸೇವೆ ಮಾಡಿದ್ದೇನೆ, ಆ ಸ್ವಾಮಿಯ ಮತ್ತು ತಮ್ಮೆಲ್ಲರ ಆಶೀರ್ವಾದವೇ ಸಾಕು ನನಗೆ, ಇದಕ್ಕೆ ಯಾವುದೇ ರಾಜಕೀಯ ಬೆರೆಸುವುದು ಬೇಡ ಎಂದು ಮನವಿ ಮಾಡಿದರು.

 

 

ಪತ್ರಿಕಾಗೋಷ್ಠಿಯಲ್ಲಿ ದೇವರಾಜು ಉದ್ಯಮಿಗಳು.ಕುಮಾರ್ ಯುವ ಮುಖಂಡರು ಗುಬ್ಬಿ. ತಾಲೂಕು ರೈತ ಸಂಘದ ಅಧ್ಯಕ್ಷರಾದ ಕಣಕೂರು ಚಂದ್ರಶೇಖರ್. ಮಾಜಿ ಪ್ರಧಾನರಾದ ಟಿ ಜವರಪ್ಪ. ಗುಡಿ ಗೌಡರಾದ ಕೆ.ಎಸ್. ಗಂಗಯ್ಯ. ಕೆ.ಸಿ. ಸಿದ್ದೇಗೌಡ. ಕೆ.ಟಿ.ತಿಮ್ಮಯ್ಯ.

ಜಿ.ಸಿ.ಶಿವಕುಮಾರ್.ಸತೀಶ್ ಎನ್.

ಕೆ.ಎಲ್. ರಾಜು. ಪಿ.ಎ.ಸಿ.ಎಸ್ ಅಧ್ಯಕ್ಷರಾದ ಶ್ರೀನಿವಾಸ್. ದೇವಾಲಯದ ಅರ್ಚಕರಾದ. ಸುದರ್ಶನ್. ಹುಚ್ಚೇಗೌಡ. ನರಸಿಂಹಮೂರ್ತಿ. ಶ್ರೀನಿವಾಸ್ ಸೇರಿದಂತೆ ಗ್ರಾಮದ ಎಲ್ಲಾ ಯುವ ಮುಖಂಡರುಗಳು, ಯುವಕರು, ಹಿರಿಯರು ಮುಖಂಡರುಗಳು,ಮುಂತಾದವರು ಪಾಲ್ಗೊಂಡಿದ್ದರು.

 

 

ವರದಿ: ಮಂಜುನಾಥ್ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *