Document

Turuvekere:ದುಡಿಮೆಯೇ ದೇವರೆಂಬ ಮಾತಿಗೆ ಸಾಕ್ಷಿಯಾದ ಮನೋಜ್ ಟೂರ್ಸ್ ಅಂಡ್ ಟ್ರಾವೆಲ್ಸ್ ನ ಮಾಲೀಕ ಎನ್ ಲೋಕೇಶ್.

Janataa24 NEWS DESK

Turuvekere:ದುಡಿಮೆಯೇ ದೇವರೆಂಬ ಮಾತಿಗೆ ಸಾಕ್ಷಿಯಾದ ಮನೋಜ್ ಟೂರ್ಸ್ ಅಂಡ್ ಟ್ರಾವೆಲ್ಸ್ ನ ಮಾಲೀಕ ಎನ್ ಲೋಕೇಶ್.

Turuvekere:ದುಡಿಮೆಯೇ ದೇವರೆಂಬ ಮಾತಿಗೆ ಸಾಕ್ಷಿಯಾದ ಮನೋಜ್ ಟೂರ್ಸ್ ಅಂಡ್ ಟ್ರಾವೆಲ್ಸ್ ನ ಮಾಲೀಕ ಎನ್ ಲೋಕೇಶ್.

ತುರುವೇಕೆರೆ: ತಾಲೂಕಿನ ಟಿ ಬಿ ಕ್ರಾಸ್ ನಲ್ಲಿ ಇರುವ ಮನೋಜ್ ಟೂರ್ಸ್ ಅಂಡ್ ಟ್ರಾವೆಲ್ಸ್ ಇಂದು ದಸರಾ ಹಬ್ಬದ ಪ್ರಯುಕ್ತ ಆಯುಧ ಪೂಜಾವನ್ನು ಮಾಲೀಕರಾದ ಎನ್ ಲೋಕೇಶ್ ಅವರ ನೇತೃತ್ವದಲ್ಲಿ ಸುಮಾರು 14 ಬಸ್ಸುಗಳಿಗೆ ತಮ್ಮ ಕುಟುಂಬ ಮತ್ತು ಸಿಬ್ಬಂದಿಗಳೊಂದಿಗೆ ಅದ್ದೂರಿಯಾಗಿ ನಡೆಸಲಾಯಿತು.

ಹಾಗೂ ಮಾಲೀಕರಾದ ಎನ್ ಲೋಕೇಶ್ ದುಡಿಮೆಯೇ ದೇವರು ಎಂದು ನಂಬಿ ಶ್ರಮಜೀವಿಯಾಗಿ ಸುಮಾರು 21 ವರ್ಷಗಳ ಕಾಲ ಖಾಸಗಿ ಬಸ್ಸುಗಳಲ್ಲಿ ಶ್ರಮಿಸಿ 18 ವರ್ಷಗಳ ಕಾಲ ಲೈನ್ ಬಸ್ ಕಂಡಕ್ಟರ್ ಆಗಿ, ಕ್ಲೀನರ್ ಆಗಿ, ಡ್ರೈವರ್ ಆಗಿ ಸೇವೆ ಸಲ್ಲಿಸಿ ನಂತರ ತಮ್ಮ ಸ್ವಂತಕ್ಕಾಗಿ ಒಂದು ಬಸ್ಸನ್ನು ಖರೀದಿ ಮಾಡಿ ಇಂದು ಸುಮಾರು 14 ಬಸ್ಸುಗಳ ಮಾಲೀಕನಾಗಿ ಹೊರಹೊಮ್ಮಿದ್ದು ಮನೋಜ್ ಟೂರ್ಸ್ ಅಂಡ್ ಟ್ರಾವೆಲ್ಸ್ ಎಂಬ ಸಂಸ್ಥೆಯನ್ನ ಕಟ್ಟಿ ಈ ಸಂಸ್ಥೆಯಲ್ಲಿ 15 ಡ್ರೈವರ್ಸ್, 16 ಕ್ಲೀನರ್ಸ್, 16 ಜನ ಅಡುಗೆ ಸಿಬ್ಬಂದಿಯನ್ನಿಟ್ಟು ಒಬ್ಬೊಬ್ಬ ಡ್ರೈವರ್ ಗಳಿಗೆ ಮತ್ತು ಕ್ಲೀನರ್ ಸೇರಿದಂತೆ ಒಂದು ತಿಂಗಳಿಗೆ ರೂ.30000 ನೊಳಗೊಂಡಂತೆ ಊಟ ತಿಂಡಿಗಳನ್ನು ನೀಡಿ ಇಲ್ಲಿಯವರೆಗೆ ಸುಮಾರು 15 ವರ್ಷದಿಂದ ಮಾಲೀಕರಾಗಿ ಉತ್ತಮವಾದ ಸರ್ವಿಸ್ ನೀಡಿ ಮನೋಜ್ ಟೂರ್ಸ್ ಅಂಡ್ ಟ್ರಾವೆಲ್ಸ್ ಎಂಬ ಸಂಸ್ಥೆ ಹಾಲ್ ಇಂಡಿಯಾ ವಿಮಾನ ಮತ್ತು ರೈಲ್ವೆ ಪ್ಯಾಕೇಜ್ ಟೂರ್ ಗಳಲ್ಲಿ ಉತ್ತಮವಾದ ಸೇವೆಗಳನ್ನು ನೀಡಿ ರಾಜ್ಯದಲ್ಲಿ ಒಳ್ಳೆ ಹೆಸರನ್ನು ಪಡೆದುಕೊಂಡಿದೆ.

ಜೊತೆಗೆ ಲೇಟ್// ನಂಜಯ್ಯ ವೈಫ್ ಆಫ್ ಲೇಟ್// ಜಯಮ್ಮ ಎಂಬುವರ ಮಗನಾಗಿ ಜನಿಸಿರುವ ಈ ಸಂಸ್ಥೆಯ ಮಾಲೀಕರಾದ ಎನ್ ಲೋಕೇಶ್ ರವರು ನಮ್ಮ ತುರುವೇಕೆರೆ ತಾಲೂಕಿನಾದ್ಯಂತ ಸಾಮಾಜಿಕ ಕಳಕಳಿಯುಳ್ಳ ಉತ್ತಮವಾದ ಸೇವೆಗಳನ್ನು ಸಲ್ಲಿಸುತ್ತಾ ತಾಲೂಕಿನಲ್ಲಿ ಕಟ್ಟ ಕಡೆಯ ವ್ಯಕ್ತಿಗಳಲ್ಲೂ ತನ್ನ ಹೆಸರನ್ನು ಹಚ್ಚ ಹಸಿರಿನ ಹಾಗೆ ಹಚ್ಚೆಯಂತೆ ಉಳಿದು ತಾಲೂಕಿನ ಜನರಲ್ಲಿ ಮನೆ ಮಗನಾಗಿ ಹೊರಹೊಮ್ಮಿದ್ದು ಮನೋಜ್ ಟೂರ್ಸ್ ಅಂಡ್ ಟ್ರಾವೆಲ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಸಿಬ್ಬಂದಿಯವರ ಕುಟುಂಬಕ್ಕೆ ಆಸರೆಯಾಗಿ ನಿಂತಿರುವುದು ಪ್ರತಿಯೊಬ್ಬರಲ್ಲೂ ಪ್ರಶಂಸೆಯ ಮಾತುಗಳು ಹರಿದಾಡುತ್ತಲೇ ಇದೆ ಎಂಬುದರಲ್ಲಿ ಮೇಲ್ನೋಟಕ್ಕೆ ಯಾವುದೇ ಅನುಮಾನವಿಲ್ಲ, ಇನ್ನು ಈ ಮನೋಜ್ ಟೂರ್ಸ್ ಅಂಡ್ ಟ್ರಾವೆಲ್ಸ್, ಕರ್ನಾಟಕ, ಕೇರಳ, ತಮಿಳ್ ನಾಡು, ಆಂಧ್ರ ಪ್ರದೇಶ್, ಮಹಾರಾಷ್ಟ್ರ, ಉತ್ತರ ಭಾರತ, ಹೀಗೆ ಅನೇಕ ನಮ್ಮ ದೇಶಾದ್ಯಂತ ಸಂಚರಿಸಲು ಅಂತರಾಷ್ಟ್ರೀಯ ಪ್ಯಾಕೇಜುಗಳು ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಲಭ್ಯವಿದೆ ಆದರೂ ಖಾಸಗಿ ಬಸ್ನ ಮಾಲೀಕರು ಸಹ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾದಂತಹ ಸಮಯ ಬಂದಿದೆ ಎನ್ನಬಹುದು.

ಯಾಕೆಂದರೆ ಕರ್ನಾಟಕ ರಾಜ್ಯದಂತೆ 10,000ಕ್ಕೂ ಹೆಚ್ಚು ಖಾಸಾಗಿ ಬಸ್ ಗಳಿದ್ದು ಈ ಬಸ್ ಗಳನ್ನು ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ ರಾಜ್ಯ ಸರ್ಕಾರದ ಉಚಿತ ಬಸ್ ಸೇವೆಯಿಂದಾಗಿ ಖಾಸಗಿ ಬಸ್ ಮಾಲೀಕರು ಅದೆಷ್ಟು ಸಮಸ್ಯೆಗಳನ್ನು ಎದುರಿಸುತ್ತಾ ಇದ್ದು ಖಾಸಗಿ ಬಸ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕರು ಕ್ಲೀನರ್ಗಳು ಸೇರಿದಂತೆ ಹಲವು ಸಿಬ್ಬಂದಿಗೆ ಸಂಬಳ ನೀಡಲು ಮಾಲೀಕರ ಬಳಿ ಹಣವಿಲ್ಲದೆ ಇನ್ನು ಇದನ್ನೇ ನಂಬಿಕೊಂಡು ಬಂದಿರುವ ಸಿಬ್ಬಂದಿಗಳಿಗೆ ಮತ್ತು ಅವರ ಕುಟುಂಬಗಳ ನಿರ್ವಹಣೆ ಮಾಡಲು ಆರ್ಥಿಕ ಸಮಸ್ಯೆ ಎದುರಾದಂತಹ ಸಂದರ್ಭದಲ್ಲಿ ಬಸ್ಗಳಿಗೆ ಟ್ರಿಪ್ ಗೆ ಡೀಸೆಲ್ ಖರೀದಿಸಬೇಕು ಅಂದ್ರೆ ಮಾಲೀಕರ ಸ್ಥಿತಿ ತೀರ ಶೋಚನೀಯವಾಗಿರುವುದು ಇದಲ್ಲದೆ ಖಾಸಗಿ ಬಸ್ಸುಗಳಿಂದ ಬರುವ ಆದಾಯ ದೂರದ ಮಾತಾಗಿದ್ದು ದಿಕ್ಕೆ ಕಾಣದ ಪರಿಸ್ಥಿತಿಯಲ್ಲಿ ಈ ಖಾಸಗಿ ಬಸ್ ಮಾಲೀಕರು ಅನೇಕ ಸಮಸ್ಯೆಗಳನ್ನು ಈಗಲೂ ಸಹ ಎದುರಿಸುವಂತಹ ಪರಿಸ್ಥಿತಿ ಇದ್ದರು ಇರಬಹುದು.

ಆದರೂ ಒಟ್ಟಾರೆ ಎಂತಹ ಸಮಸ್ಯೆ ಬಂದರೂ ಎದೆಗುಂದದೆ ಖಾಸಾಗಿ ಬಸ್ ಮಾಲೀಕರು ತಮ್ಮ ವೃತ್ತಿ ಕಾರ್ಯ ಚಟುವಟಿಕೆಯಲ್ಲಿ ಭಾಗಿಯಾಗಲೇಬೇಕು ಆದರೂ ಇಂತಹ ಸಮಯದಲ್ಲೂ ಮನೋಜ್ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕರಾದ ಲೋಕೇಶ್ ರವರು ಅದೇನೇ ಆಗಲಿ ತಮ್ಮನ್ನು ನಂಬಿ ಬಂದ ಚಾಲಕರು ಕ್ಲೀನರ್ಗಳು ಅಡುಗೆ ಸಿಬ್ಬಂದಿಗಳನ್ನು ಮತ್ತು ಅವರ ಕುಟುಂಬಗಳಿಗೆ ಜೀವನ ನಡೆಸಲು ದಾರಿ ದೀಪವಾಗಲೇಬೇಕು ಎಂಬ ಮಾತಿನಿಂದ ತಾವುಗಳು ಶ್ರಮಿಸಿ ಬೆಳೆದು ಬಂದಿರುವ ನಿಟ್ಟಿನಲ್ಲಿ ದುಡಿಯಲೆ ಬೇಕು ಎಂಬ ಛಲವನ್ನು ಇಂದಿಗೂ ಸಹ ಬಿಟ್ಟಿಲ್ಲ.

ಜೊತೆಗೆ ತಾಲೂಕಿನಾದ್ಯಂತ ರಾಜ್ಯಾದ್ಯಂತ ತನ್ನ ಮಾಲೀಕತ್ವದ ಬಸ್ ಗಳು ಉತ್ತಮವಾದ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆ ಯಾವುದಕ್ಕೂ ಎದೆಗುಂದದೆ ಮುಂದಿನ ದಿನಗಳಲ್ಲಿ ಇನ್ನು ಉನ್ನತ ಮಟ್ಟಕ್ಕೆ ಈ ಟೂರ್ಸ್ ಅಂಡ್ ಟ್ರಾವೆಲ್ಸ್ ಪ್ರಯಾಣವನ್ನು ಸಾಗಿಸಲು ಸನ್ನದ್ಧರಾಗಿದ್ದಾರೆ ಎಂದರೆ ತಪ್ಪಾಗಲಾರದು ಇಂತಹ ಸಾಮಾಜಿಕ ಕಳಕಳಿಯುಳ್ಳ ಬಸ್ ಮಾಲೀಕ ಲೋಕೇಶ್ ಹಾಗೂ ಅವರ ಸಂಸ್ಥೆಗೆ ದಸರಾ ಹಬ್ಬದ ಶುಭಾಶಯಗಳು ನಾವು ಕೂಡ ಹೇಳೋಣ.

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *