Document

Turuvekere: DSS ನೇತೃತ್ವದಲ್ಲಿ ವಿವಿಧಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ, ಚೇತನ್ ಅಹಿಂಸ ಬಾಗಿ.

Janataa24 NEWS DESK 

 

Turuvekere: DSS ನೇತೃತ್ವದಲ್ಲಿ ವಿವಿಧಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ, ಚೇತನ್ ಅಹಿಂಸ ಬಾಗಿ.

Turuvekere: DSS ನೇತೃತ್ವದಲ್ಲಿ ವಿವಿಧಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ, ಚೇತನ್ ಅಹಿಂಸ ಬಾಗಿ.

ತುರುವೇಕೆರೆ: ಪಟ್ಟಣದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಗವಾಯಿ ರವರಿಗೆ ಶೂ ಎಸೆದ ರಾಕೇಶ್ ಕಿಶೋರ್ ವಕೀಲನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಇಂದು ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮತ್ತು ಭೀಮೋತ್ಸವ ಆಚರಣೆ ಸಮಿತಿ ಇವರ ನೇತೃತ್ವದಲ್ಲಿ ತುರುವೇಕೆರೆ ತಾಲೂಕಿನ ವಿವಿಧಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು,

 

ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಆಡಳಿತ ಕಚೇರಿವರೆಗೆ ತೆರೆದ ವಾಹನದಲ್ಲಿ ಮೂರ್ತಿ ಸಿಎಸ್, ಹಿರಿಯ ದಲಿತ ಮುಖಂಡರಾದ ಕುಂದೂರು ತಿಮ್ಮಯ್ಯ, ಅಹಿಂಸಾ ಚೇತನ್, ಗುಬ್ಬಿ ತಾಲೂಕು ಸಂಚಾಲಕರಾದ ಶಿವಲಿಂಗಣ್ಣ, ತುರುವೇಕೆರೆ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ರವರು ಸಂಚರಿಸಿ, ಕಾಲ್ನಡಿಗೆಯಲ್ಲಿ ಪ್ರತಿಭಟನಾಕಾರರು ವಕೀಲನ ವಿರುದ್ಧ ದಿಕ್ಕಾರ ಕೂಗುತ್ತಾ ವಕೀಲನ ಪ್ರತಿ ಕೃತಿ ಹೊತ್ತು ಮೆರವಣಿಗೆ ನಡೆಸಿ ಪಟ್ಟಣದ ಬಾಣಸಂದ್ರ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ವಕೀಲನ ಪ್ರತಿ ಕೃತಿಯನ್ನು ದಹನ ಮಾಡಲಾಯಿತು.

 

 

ಇದೆ ವೇಳೆ ಅಹಿಂಸ ಚೇತನ್ ಮಾತನಾಡಿ ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರ ಮೇಲೆ ನ್ಯಾಯಾಲಯದ ಕಲಾಪದ ವೇಳೆ ಶೂ ದೇಶದ ಕ್ರೌರ್ಯ ಮೆರೆದಿದ್ದ ವಕೀಲನಿಂದ ದೇಶದ ನ್ಯಾಯಾಂಗದ ಗೌರವಕ್ಕೆ ಧಕ್ಕೆಯಾಗಿದೆ ಇದು ಸಂವಿಧಾನಕ್ಕೆ ಮಾಡಿದ ಅಪಚಾರ ಜೊತೆಗೆ ಸಮಾಜ ತಲೆತಗ್ಗಿಸುವಂತಹ ಭಾರತೀಯರ ಮೇಲೆ ಆದಂತಹ ಅಪಮಾನವಾಗಿದೆ ಇಂತವನ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು,

 

ಇದೆ ವೇಳೆ ಹಿರಿಯ ಹೋರಾಟಗಾರ ದಲಿತ ಮುಖಂಡ ಕುಂದೂರು ತಿಮ್ಮಯ್ಯ ಮಾತನಾಡಿ “ಸಂವಿಧಾನ ವಿರೋಧಿ ಮತ್ತು ಜಾತಿವಾದಿ ಮನೋಭಾವದ ಹಿರಿಯ ವಕೀಲ ಕಿಶೋರ್ ಕುಮಾರ್ ಅವರನ್ನು ತಕ್ಷಣ ಬಂಧಿಸಿ ಜೈಲಿಗೆ ಕಳುಹಿಸಬೇಕು ಇಂತಹ ಕೃತ್ಯಗಳು ನ್ಯಾಯಾಂಗದ ಸ್ವಾತಂತ್ರ್ಯವನ್ನು ಧಿಕ್ಕರಿಸುವಂತಿವೆ ಮತ್ತು ಸಂವಿಧಾನವನ್ನು ದಿಕ್ಕು ತಪ್ಪಿಸಲು ಉದ್ದೇಶಿತವಾದ ಷಡ್ಯಂತ್ರದ ಭಾಗವಾಗಿವೆ ಕೂಡಲೇ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟದ ಬಿಸಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು,

 

ಬಿಮೋತ್ಸವ ಆಚರಣೆ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಮೂರ್ತಿ ಸಿ ಎಸ್ ಮಾತನಾಡಿ ಈ ವಕೀಲನ ಹಿಂದಿರುವ ಶಕ್ತಿ ಕೇಂದ್ರಗಳು ಯಾರು, ಸಂವಿಧಾನದ ವಿರೋಧಿಗಳು ಹಾಗೂ ದೇಶದ ದ್ರೋಹಿಗಳು ಯಾರ್ಯಾರು ಎಂಬುದರ ಕುರಿತು ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ನಿಖರ ತನಿಖೆ ನಡೆಸಬೇಕು ಕೆಲವು ಯೂಟ್ಯೂಬ್ ಮಾಧ್ಯಮಗಳಲ್ಲಿ ಜಾತಿವಾದಿ ಕಾಮೆಂಟ್‌ಗಳು ಮಾಡುತ್ತಿರುವವರ ಹಾಗೂ ಆರೋಪಿಗೆ ಬೆಂಬಲ ವ್ಯಕ್ತಪಡಿಸುತ್ತಿರುವವರ ಮೇಲೂ ಪ್ರಕರಣ ದಾಖಲಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

 

ತಾಲ್ಲೂಕು ಸಂಚಾಲಕ ಕೃಷ್ಣಸ್ವಾಮಿ ಬಿ ಆರ್ ಮಾತನಾಡಿ ಕೇಂದ್ರ ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳದಿದ್ದರೆ, ದೆಹಲಿಯ ಜಂತರ್ ಮಂತರ್‌ನಲ್ಲಿ ರಾಷ್ಟ್ರಮಟ್ಟದ ಸಂಘಟನೆಗಳೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು

ನ್ಯಾಯದ ಮೇಲೆ ದಾಳಿ ಅಂದರೆ ಸಂವಿಧಾನದ ಹೃದಯದ ಮೇಲೆ ಹಲ್ಲೆ ನಡೆಸಿದಂತೆ ಹಾಗಾಗಿ ಕೂಡಲೇ ವಕೀಲರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದರು. ಮುಂದುವರೆದು ಡೊಂಕಿಹಳ್ಳಿ ರಾಮಣ್ಣ ಮಾತನಾಡಿ, ರಾಷ್ಟ್ರದಲ್ಲಿ ಎಲ್ಲಾ ಜಾತಿ ವರ್ಗಗಳಲ್ಲಿಯೂ ಇರುವಂತಹ ತುಂಬಾ ಬಡ ಕುಟುಂಬಗಳು ಇದ್ದು ಸಂವಿಧಾನದಿಂದಾಗಿ ಎಲ್ಲಾ ವರ್ಗದ ಜನರಿಗೂ ರಕ್ಷಣೆ ಸಿಗುತ್ತಿದೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದಂತಹ ಸಂವಿಧಾನದಿಂದ ಮಾತ್ರ ,ವಿಪರ್ಯಾಸವೆಂದರೆ ದೇಶದಲ್ಲಿ ಸಂವಿಧಾನಕ್ಕೆ ಅಪಾಯ ಬಂದಿದೆ ಎಂದು ಕಣ್ಮುಂದೆ ಇದ್ದರು ಸಹ ಹೋರಾಟಕ್ಕೆ ಕೆಲವರು ಮಾತ್ರ ಬೆಂಬಲ ನೀಡುತ್ತಾರೆ ಮುಂದಿನ ದಿನಗಳಲ್ಲಿ ಈಗಾಗಬಾರದು ಸಂವಿಧಾನದ ರಕ್ಷಣೆಗೆ ಎಲ್ಲ ಭಾರತೀಯರು ಮುಂದಾಗಬೇಕು ಎಂದು ಮನವಿ ಮಾಡಿದರು. ನಂತರ ಪ್ರತಿಭಟನಾಕಾರರು ಮುಖಂಡರೊಂದಿಗೆ ತಾಲೂಕು ಕಚೇರಿಗೆ ಆಗಮಿಸಿ ರಾಷ್ಟ್ರಪತಿಯವರಿಗೆ ತುರುವೇಕೆರೆ ತಾಲೂಕು ಗ್ರೇಡ್ 2 ತಹಸಿಲ್ದಾರ್ ಮೂಲಕ ಮನವಿಯನ್ನು ನೀಡಲಾಯಿತು.

 

 

ಇದೇ ಸಂದರ್ಭದಲ್ಲಿ, ತಾಲೂಕಿನ ವಿವಿಧಪರ ಸಂಘಟನೆಗಳಾದ, ಛಲವಾದಿ ಮಹಾಸಭಾ, ಅಂಬೇಡ್ಕರ್ ಸೇನೆ, ಅಂಬೇಡ್ಕರ್ ಸೇವಾ ಸಮಿತಿ, ಒಕ್ಕಲಿಗ ಸಮಾಜ, ಕುರುಬ ಸಮಾಜ, ಕಾಡುಗೊಲ್ಲ ಯಾದವ ಸಮಾಜ, ಕನ್ನಡಪರ ಸಂಘಟನೆ, ಅಲ್ಪಸಂಖ್ಯಾತರ ಘಟಕ, ಮಹಿಳಾ ಸಂಘಟನೆ, ಇನ್ನು ಅನೇಕರು ಉಪಸ್ಥಿತರಿದ್ದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *