Document

Turuvekere: ಮಾಯಸಂದ್ರ ಗ್ರಾ.ಪಂ.ಗೆ ನೂತನ ಅಧ್ಯಕ್ಷರಾಗಿ ಖಾದಿರ್ ಪಾಷ ಅವಿರೋಧ ಆಯ್ಕೆ.

Janataa24 NEWS DESK 

 

Turuvekere: ಮಾಯಸಂದ್ರ ಗ್ರಾ.ಪಂ.ಗೆ ನೂತನ ಅಧ್ಯಕ್ಷರಾಗಿ ಖಾದಿರ್ ಪಾಷ ಅವಿರೋಧ ಆಯ್ಕೆ.

Turuvekere: ಮಾಯಸಂದ್ರ ಗ್ರಾ.ಪಂ.ಗೆ ನೂತನ ಅಧ್ಯಕ್ಷರಾಗಿ ಖಾದಿರ್ ಪಾಷ ಅವಿರೋಧ ಆಯ್ಕೆ.

 

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ಮಾಯಸಂದ್ರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ

“ಖಾದಿರ್ ಪಾಷ” ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 

ಈ ಹಿಂದಿನ ಅಧ್ಯಕ್ಷರಾಗಿದ್ದ ಕಲ್ಲು ನಾಗತಿಹಳ್ಳಿ ಚಂದ್ರ ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. 15 ಸದಸ್ಯ ಬಲವುಳ್ಳ ಪಂಚಾಯತಿಯಲ್ಲಿ, ಖಾದಿರ್ ಪಾಷಾ ರವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾದ ತಹಶೀಲ್ದಾರ್ ಕುಂ.ಇ. ಅಹಮದ್ ರವರು ಅವಿರೋಧ ಆಯ್ಕೆ ಎಂದು ಘೋಷಿಸಿದರು.

 

ಈ ವೇಳೆ ಪತ್ರಕರ್ತರೊಂದಿಗೆ ನೂತನ ಅಧ್ಯಕ್ಷ ಖಾದಿರ್ ಪಾಷಾ ರವರು ಮಾತನಾಡಿ, ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಸರ್ವ‌ ಸದಸ್ಯರಿಗೂ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮತ್ತು ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿನ ಎಲ್ಲಾ ಹಳ್ಳಿಗಳಿಗೂ ಮೂಲಸೌಲಭ್ಯ ಒದಗಿಸುವ ಕಾರ್ಯದಲ್ಲಿ ಪ್ರವೃತ್ತರಾಗಿರುತ್ತೇನೆ. ಹಾಗೂ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ‌ನ ಅಭಿವೃದ್ಧಿಗಾಗಿ ಒತ್ತು ನೀಡುವುದರ ಮೂಲಕ, ಸಾರ್ವಜನಿಕರ ಸಮಸ್ಯೆಗೆ ಸದಾ ಸ್ಪಂದಿಸುವುದಾಗಿ ತಿಳಿಸಿದರು.

 

ನೂತನ ಅಧ್ಯಕ್ಷರ ಆಯ್ಕೆಯ ಘೋಷಣೆಯಾಗುತ್ತಿದ್ದಂತೆ ತಮ್ಮ ಬೆಂಬಲಿಗರು, ಅಭಿಮಾನಿಗಳು, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು ಹಾಗೂ ‌ ಸ್ಥಳೀಯ ಮುಖಂಡರುಗಳು, ಗ್ರಾ.ಪಂ. ಆಡಳಿತ ಮಂಡಳಿ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಶುಭ ಹಾರೈಸಿದರು.

 

ಈ ಸಂದರ್ಭದಲ್ಲಿ ಗ್ರಾ.ಪ್ರಂ. ಉಪಾಧ್ಯಕ್ಷೆ ಕು.ವಿಶಾಲಾಕ್ಷಿ.ಸದಸ್ಯರಾದ ಅಜಿತ್ ಪ್ರಸಾದ್. ಮಂಜುನಾಥ್ ಎಂ.ಜಿ. ಶ್ರೀನಿವಾಸ,ಎಂ.ಎಂ. (ಕಾಳಿ) .ಸವಿತಾ ಶಿವಕುಮಾರ್. ಪಾರ್ಥಸಾರಥಿ.ಉಷಾ ಶ್ರೀನಿವಾಸ್.ಹುಸ್ಮಾಭಾನು ತಬ್ರೇಜ್. ಶಾತಾಜ್ ಏಜಾಸ್ ಪಾಷ.ಸುಜಾತ ಶಿವರಾಜ್ ನಾಯಕ.. ಸೇರಿದಂತೆ ಪಿ.ಡಿ.ಒ ಸುರೇಶ್ ಹೆಚ್.ಬಿ. ಕಾರ್ಯದರ್ಶಿ ಧರ್ಮಪ್ರಕಾಶ್. ಗ್ರಾ.ಪಂ. ಆಡಳಿತ ಮಂಡಳಿ, ಮುಖಂಡರಾದ ರೆಹ್ಮತ್ ಉಲ್ಲಾ ಖಾನ್ .ನಿ.ದೈ.ಶಿ.ಶಿ. ಕಲೀಲ್ ಪಾಶ. ರೆಹಮತ್. ದಿಲ್ದಾರ್ ಪಾಷಾ. ಅಜ್ಗರ್ ಪಾಷ. ಮುಬಾರಕ್.ಮುಸ್ಲಿಂ ಸಮುದಾಯದ ಎಲ್ಲಾ ಮುಖಂಡರುಗಳು ಯುವಕರುಗಳು ಮತ್ತು. ಎಂ.ಎಲ್. ಲೋಕೇಶ್ ಅಧ್ಯಕ್ಷರು ಪಿ.ಎ.ಸಿ.ಎಸ್. ಕಣಕೂರು ಚಂದ್ರಶೇಖರ್.ಪಟೇಲ್ ರಾಜು.ನಾಗೇಶ್. ರಮೇಶ್ ಶಾಮಿಯಾನ. ಮೋಹನ್ ಪೈಂಟ್. ಸ್ಥಳೀಯ ಗ್ರಾಮಸ್ಥರು, ಜನಪ್ರತಿನಿಧಿಗಳು, ಮುಂತಾದವರು ಉಪಸ್ಥಿತರಿದ್ದರು.

 

 

ವರದಿ: ಮಂಜುನಾಥ್ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *