Document

Turuvekere: ಮುಗಳೂರು ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಗ್ರಾಮ ಶಾಖೆ ಉದ್ಘಾಟನೆ.

JANATAA24 NEWS DESK 

 

 

Turuvekere: ಮುಗಳೂರು ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಗ್ರಾಮ ಶಾಖೆ ಉದ್ಘಾಟನೆ.

 

Turuvekere

ತುರುವೇಕೆರೆ:  ತಾಲೂಕಿನ ಮಾಯಸಂದ್ರ ಹೋಬಳಿ ಮುಗಳೂರು ಗ್ರಾಮದಲ್ಲಿ ಡಾ. ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಗ್ರಾಮ ಶಾಖೆಯನ್ನು ಲೋಕಾರ್ಪಣೆಗೊಳಿಸಲಾಯಿತು. ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಮಿತಿ ಸದಸ್ಯರಾದ ಕುಂದೂರು ತಿಮ್ಮಯ್ಯನವರು ಡಾ. ಶಿವಣ್ಣ ತಿಮ್ಲಾಪುರ, ಗುರುಪ್ರಸಾದ್ ಕಂಟಲಗೆರೆ, ಬಿ ಆರ್ ಕೃಷ್ಣಸ್ವಾಮಿ, ಮೂರ್ತಿ ಸಿ ಎಸ್, ಇವರುಗಳು ನೂತನ ಗ್ರಾಮ ಶಾಖೆಯನ್ನು ಉದ್ಘಾಟಿಸಿ ತಮಟೆ ಬಡಿಯುವುದರ ಮೂಲಕ ಜೊತೆಗೆ

ಡಾ. ಬಾಬು ಜಗಜೀವನ್ ರಾಮ್, ಅಂಬೇಡ್ಕರ್, ಪ್ರೊಫೆಸರ್ ಬಿ ಕೃಷ್ಣಪ್ಪ, ಭಗವಾನ್ ಬುದ್ಧ, ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಚಾಲನೆಗೊಳಿಸಿದರು.

 

ಇದೇ ಸಂದರ್ಭದಲ್ಲಿ ಕುಂದೂರು ತಿಮ್ಮಯ್ಯ ಮಾತನಾಡಿ,ಸ್ವಾತಂತ್ರ್ಯ ಹೋರಾಟಗಾರ ಅಸ್ಪೃಶ್ಯತೆಯ ನಿವಾರಣಾ ಹೋರಾಟದ ಮುಂಚೂಣಿ ವಹಿಸಿದ ಧೀಮಂತ ನಾಯಕ ಶೋಷಿತರ ದಮನಿತರ ಧ್ವನಿ. ಡಾ.ಬಾಬು ಜಗಜೀವನರಾಮ್ ಅವರ ಜನ್ಮದಿನ ಆಚರಿಸಿ ಅವರಿಗೆ ಗೌರವದ ನಮನಗಳನ್ನು ಸಲ್ಲಿಸುವುದು ನಮ್ಮ ಕರ್ತವ್ಯ ,ಜಗಜೀವನರಾಮ್ ಸ್ವಾತಂತ್ರ್ಯ ಹೋರಾಟಗಾರರಾಗಿ, ಸ್ವಾತಂತ್ರ್ಯ ನಂತರ ಭಾರತ ಸರ್ಕಾರದ ಸಚಿವರಾಗಿ, ಉಪ ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಮಹಾನ್ ನಾಯಕರು.

 

ಕೃಷಿ ಸಚಿವರಾಗಿದ್ದಾಗ ಸುಧಾರಿತ ಬಿತ್ತನೆ ಬೀಜ ಹಾಗೂ ಸುಧಾರಿತ ತಳಿಗಳನ್ನು ಅನುಷ್ಠಾನಗೊಳಿಸಿ ಆಹಾರ ಧಾನ್ಯಗಳ ಕೊರತೆ ನೀಗಿಸಿದ ಹಸಿರುಕ್ರಾಂತಿಯ ಹರಿಕಾರ ಎನಿಸಿಕೊಂಡರು. ಅವರ ತತ್ವಾದರ್ಶಗಳು ವಿಚಾರಧಾರೆಗಳು ನಮಗೆಲ್ಲರಿಗೂ ದಾರಿದೀಪವಾಗಿವೆ ಜೊತೆಗೆ ನಾನು ಸಹ ತುಮಕೂರು ಜಿಲ್ಲೆಯಲ್ಲಿ ಅನೇಕ ಅಸ್ಪೃಶ್ಯತೆ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದೇನೆ ಎಂದರು.

 

ಇದೆ ವೇಳೆ ಬಾಬೂಜಿ ಜಗಜೀವನರಾಮ್ ಅವರ ಕುರಿತು ಉಪನ್ಯಾಸ ನೀಡಿ ಗುರುಪ್ರಸಾದ್ ಕಂಟಲಗೆರೆ ಮಾತನಾಡಿ, ಬಾಬೂಜಿಯವರು ಶೋಷಿತ ಸಮಾಜದಲ್ಲಿ ಇದ್ದುಕೊಂಡೆ ಶಿಕ್ಷಣ ಪಡೆದ ಹಸಿರು ಕ್ರಾಂತಿ ಹರಿಕಾರರು ಕೃಷಿ ಸಚಿವರಾಗಿದ್ದಾಗ ಯಶಸ್ವಿಯಾಗಿ ಮುನ್ನಡೆಸಿ ಭಾರತವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾನ್ನಾಗಿ ಮಾಡಿ 1971ರ ಯುದ್ಧದ ನಾಯಕತ್ವ ಜೊತೆಗೆ ರಕ್ಷಾ ಸಚಿವರಾಗಿ ಭಾರತ ಪಾಕಿಸ್ತಾನ ಯುದ್ಧದಲ್ಲಿ ಭಾರತ ದೇಶವನ್ನು ಮುನ್ನಡೆಸಿದ ಪರಿಣಾಮ ಬಾಂಗ್ಲಾದೇಶದ ಸೃಷ್ಟಿಗೆ ಕಾರಣಕರ್ತರಾದರು ಇದಲ್ಲದೆ ಕಾರ್ಮಿಕರ ಪರ ಕಾಯ್ದೆಗಳಾದ ಭಾರತದ ಮೊದಲ ಕಾರ್ಮಿಕ ಸಚಿವರಾಗಿ ಕೈಗಾರಿಕಾ ವಿವಾದಗಳ ಕಾಯ್ದೆ, 1947ರಲ್ಲಿ ಕನಿಷ್ಠ ವೇತನ ಕಾಯ್ದೆ, ಮತ್ತು 1948ರಲ್ಲಿ ನೌಕರರ ರಾಜ್ಯ ವಿಮಾ ಕಾಯ್ದೆ,

 

ಇಂತಹ ಅನೇಕ ಐತಿಹಾಸಿಕ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ ಕೇಂದ್ರ ಕೃಷಿ ಸಚಿವರಾಗಿದ್ದ ಅವಧಿಗಳಲ್ಲಿ ಭಾರತದಲ್ಲಿ ಹಸಿರು ಕ್ರಾಂತಿ ಮತ್ತು ಭಾರತೀಯ ಕೃಷಿಯನ್ನು ಆಧುನಿಕರಿಸಲು ಅವರು ನೀಡಿದ ಕೊಡುಗೆಯನ್ನು ಇಂದಿಗೂ ನೆನಪಿಸಿಕೊಳ್ಳಲೇಬೇಕು ವಿಶೇಷವಾಗಿ 1974ರ ಬರಗಾಲದ ಸಮಯದಲ್ಲಿ ಆಹಾರ ಬಿಕ್ಕಟ್ಟನ್ನು ನಿಭಾಯಿಸಲು ಹೆಚ್ಚುವರಿ ಖಾತೆಯನ್ನು ಬಾಬು ಜಗಜೀವನ್ ರಾಮ್ ರವರಿಗೆ ಕೇಳಲಾಯಿತು ತುರ್ತು ಪರಿಸ್ಥಿತಿಯ ಸಮಯದಲ್ಲಿ ಅವರು ಪ್ರಧಾನಿ ಇಂದಿರಾ ಗಾಂಧಿಯನ್ನು ಬೆಂಬಲಿಸಿದರು ನಂತರ 1977ರಲ್ಲಿ ಕಾಂಗ್ರೆಸ್ ತೊರೆದು ಜನತಾ ಪಕ್ಷದ ಮೈತ್ರಿಕೂಟಕ್ಕೆ ಸೇರಿ ಅದಾದ ಬಳಿಕ ಭಾರತದ ಉಪ ಪ್ರಧಾನಮಂತ್ರಿಯಾಗಿ ಸೇವೆ ಕೂಡ ಸಲ್ಲಿಸಿದ್ದಾರೆ.

 

ಇದಲ್ಲದೆ ದೀರ್ಘಾವಧಿ ಸಂಸದೀಯ ಸೇವೆ 1936 ರಿಂದ 1986 ರವರೆಗೆ ನಿರಂತರವಾಗಿ ಸಂಸತ್ ಸದಸ್ಯರಾಗಿ ದಾಖಲೆ ಕೂಡ ನಿರ್ಮಿಸಿದ್ದು ಸುಮಾರು 30 ವರ್ಷಗಳಿಗೂ ಹೆಚ್ಚು ಕಾಲ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿ ಜೊತೆಗೆ ಅಂಚೆ ವ್ಯವಸ್ಥೆಯ ಬಲವರ್ಧನೆಗೂ ಕಾರಣಿಕರ್ತರಾಗಿದ್ದಾರೆ ದೇಶಾದ್ಯಂತ ಪ್ರತಿ ಹಳ್ಳಿಗೂ ಅಂಚೆ ಕಚೇರಿಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ನಮ್ಮ ಬಾಬು ಜಗಜೀವನ್ ರಾಮ್ ರವರದ್ದು, ಎಂದು ತಿಳಿಸಿಕೊಟ್ಟರು ಇನ್ನೂ ಕೆಲ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.

 

 

ನಂತರ ಡಾ. ಶಿವಣ್ಣ ತಿಮ್ಲಾಪುರ ಮಾತನಾಡಿ, ದಲಿತ ಚಳುವಳಿ ನಡೆದುಬಂದ ದಾರಿ ಸವಾಲು ಮತ್ತು ಸಾಧ್ಯತೆಗಳ ಕುರಿತು ಮಾತನಾಡುತ್ತಾ ದಲಿತ ಚಳುವಳಿಗಳು ಭಾರತದಲ್ಲಿ ಅಸ್ಪೃಶ್ಯತೆ ನಿರ್ಮೂಲನೆ ಸಾಮಾಜಿಕ ಸಮಾನತೆ ಮತ್ತು ರಾಜಕೀಯ ಸಬಲೀಕರಣದಲ್ಲಿ ಮಹತ್ವದ ಸಾಧನೆ ಮಾಡಿವೆ ಡಾ. ಬಿ ಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಅನೇಕ ಚಳುವಳಿಗಳು ಸಂವಿಧಾನಾತ್ಮಕ ಹಕ್ಕುಗಳು ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ, ಮತ್ತು ದಲಿತ ಪ್ಯಾಂಥರ್ಸ್ ನಂತಹ ಸಂಘಟನೆಗಳ ಮೂಲಕ ಜಾತಿ ದೌರ್ಜನ್ಯದ ವಿರುದ್ಧ ಹೋರಾಡಿ ಸಮುದಾಯದಲ್ಲಿ ಆತ್ಮ ಗೌರವ ಮತ್ತು ರಾಜಕೀಯ ಪ್ರಜ್ಞೆಯನ್ನು ಮೂಡಿಸಲಾಗಿದೆ ದಲಿತರ ಮೇಲಿನ ಹಿಂಸಾಚಾರವನ್ನು ತಡೆಯುವಲ್ಲಿ ದಲಿತ ಚಳುವಳಿಗಳು ಪ್ರಮುಖ ಪಾತ್ರ ವಹಿಸಿದ್ದು ಧಾರ್ಮಿಕವಾಗಿಯೂ ಸಮಾನತೆಗಾಗಿ 1956ರಲ್ಲಿ ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಡೆದ ಬೌದ್ಧ ಧರ್ಮದ ಅಳವಡಿಕೆಯು ಜಾತಿ ಆಧಾರಿತ ಶ್ರೇಣಿಕರಣವನ್ನು ತಿರಸ್ಕರಿಸಿದ ಒಂದು ದೊಡ್ಡ ಸಾಮಾಜಿಕ ಧಾರ್ಮಿಕ ಕ್ರಾಂತಿ ಕೂಡ ಈ ಚಳುವಳಿಗಳು ಕೇವಲ ರಾಜಕೀಯ ಹಕ್ಕುಗಳಿಗಾಗಿ ಮಾತ್ರವಲ್ಲದೆ ದಲಿತರ ಸಾಮಾಜಿಕ ಸಾಂಸ್ಕೃತಿಕ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕಾಗಿ ನಿರಂತರವಾಗಿ ಹೋರಾಡುತ್ತಿವೆ ಎಂದರು.

 

ನಂತರ ತುರುವೇಕೆರೆ ತಾಲ್ಲೂಕು, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಂಚಾಲಕ ಕೃಷ್ಣ ಸ್ವಾಮಿ ಮಾತನಾಡಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಪ್ರೊಫೆಸರ್ ಬಿ ಕೃಷ್ಣಪ್ಪ ಅವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಡಲು ಸ್ಥಾಪನೆಯಾಯಿತು ಇದು ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಆಧರಿಸಿದ ಸಮೂಹ ಆಧಾರಿತ ಪ್ರಮುಖ ಸಾಮಾಜಿಕ ರಾಜಕೀಯ ಚಳುವಳಿ ಕೂಡ ಜೊತೆಗೆ ಕಾರ್ಖಾನೆಗಳು ಮತ್ತು ಸಮಾಜದಲ್ಲಿ ದಲಿತರ ಮೇಲಿನ ತಾರತಮ್ಯದ ವಿರುದ್ಧ ಧ್ವನಿ ಎತ್ತಲು, ಸಾಮಾಜಿಕ ಸಮಸ್ಯೆಗಳು ಭೂ ವಿವಾದಗಳು ಮತ್ತು ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಹೋರಾಟ ಕರ್ನಾಟಕದ ರಾಜಕೀಯ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ಮಹತ್ವ ಜಾಗೃತಿ ಮೂಡಿಸಿದ ಸಂಘಟನೆ ದಲಿತ ಸಂಘರ್ಷ ಸಮಿತಿ ಪ್ರಮುಖವಾದದ್ದು 1980ರ ದಶಕದ ಆರಂಭದಲ್ಲಿ ಇದು ದಲಿತರ ಮೇಲಿನ ದೌರ್ಜನ್ಯ ತಡೆಯಲು ಶಾಸಕರು ಮತ್ತು ಸಂಸದರ ನಿಷ್ಕ್ರಿಯೆತೆಯ ವಿರುದ್ಧ ಧರಣಿಗಳು ನಡೆದಿದ್ದವು,

 

ಹಾಗಾಗಿ ದಲಿತ ಸಂಘರ್ಷ ಸಮಿತಿ ಕೇವಲ ಒಂದೇ ಸಮುದಾಯ ಸೀಮಿತವಲ್ಲ ಪ್ರತಿಯೊಂದು ಸಮುದಾಯಕ್ಕೂ ಸಂವಿಧಾನಾತ್ಮಕವಾಗಿ ಸಮಾನತೆಯ ದೃಷ್ಟಿಯಿಂದ ಹೋರಾಟವನ್ನು ಮುನ್ನಡೆಸುತ್ತಿದೆ ಎಂದರು.

 

ಇದೇ ಸಂದರ್ಭದಲ್ಲಿ ಮುಗಳೂರು ಗ್ರಾಮದ ಗ್ರಾಮ ಶಾಖೆಯ ಸಂಚಾಲಕರಾದ ಮಹೇಶ್ ಕುಮಾರ್, ಮಹಿಳಾ ಸಂಚಾಲಕಿ ಯಶೋದಮ್ಮ, ಭಾಗ್ಯಮ್ಮ,ಸಂಘಟನಾ ಸಂಚಾಲಕರುಗಳಾದ,ಮಂಜುನಾಥ್ ,ಲೋಕೇಶ್, ಮೂಡ್ಲಯ್ಯ, ಮೂರ್ತಿ, ಸೋಮಶೇಖರ್, ಲಕ್ಷ್ಮಯ್ಯ, ಗೋವಿಂದರಾಜು, ಚೆನ್ನೀರಪ್ಪ, ಚಂದ್ರಶೇಖರ್ ,ರವಿಕುಮಾರ್, ವಿಶ್ವನಾಥ್, ದೇವರಾಜ್, ಸುನಿಲ್, ದಯಾನಂದ್, ಉದಯ್, ಗಿರೀಶ್, ಶಶಾಂಕ್, ಯೋಗರಾಜ್, ಶ್ರೀನಿವಾಸ್, ಇನ್ನು ಅನೇಕರಿಗೆ ಅಭಿನಂದಿಸಲಾಯಿತು, ಈ ಕಾರ್ಯಕ್ರಮದಲ್ಲಿ ತಾಲೂಕು ಸಮಿತಿಯ ಸಂಘಟನಾ ಸಂಚಾಲಕರು, ಮುಖ್ಯ ಅತಿಥಿಗಳು, ಅತಿಥಿಗಳು, ದಲಿತ ಮುಖಂಡರುಗಳು ಗ್ರಾಮಸ್ಥರು ಇನ್ನು ಅನೇಕರು ಉಪಸ್ಥಿತರಿದ್ದರು.

ವರದಿ: ಮಂಜುನಾಥ್ ತುರುವೇಕೆರೆ.

CN Halli: ಮತಕ್ಕೆ ಮಾತ್ರ ಬೆಲೆ, ಬದುಕಿಗಿಲ್ಲ ನೆಲೆ-ಕುಡಿಯಲು ನೀರಿಲ್ಲ,ಇರಲು ಸೂರಿಲ್ಲ ಅಜ್ಜಿಯ ಅನ್ನಭಾಗ್ಯ ಅಧಿಕಾರಿಗಳ ಪಾಲು.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *