Document

Turuvekere: ಬಿಜೆಪಿಯಿಂದ ನಾನೇ ಅಭ್ಯರ್ಥಿ ಮಸಾಲಾ ಜಯರಾಮ್ ಸ್ಪಷ್ಟನೆ. 

JANATAA24 NEWS DESK 

 

Turuvekere: ಬಿಜೆಪಿಯಿಂದ ನಾನೇ ಅಭ್ಯರ್ಥಿ ಮಸಾಲಾ ಜಯರಾಮ್ ಸ್ಪಷ್ಟನೆ.

Turuvekere ex mla masala jayaram janataa24

K kumar Balaji Seva Trust Janataa24.com

ತುರುವೇಕೆರೆ: ತಾಲೂಕಿನ ಮಾಯಸಂದ್ರ ರಸ್ತೆಯಲ್ಲಿರುವ ಚಿಕ್ಕೋನಹಳ್ಳಿ ಗೇಟ್ ಬಳಿ ಮಸಾಲ ಜೈರಾಮ್ ಫಾರಂ ಹೌಸ್ ನಲ್ಲಿ ನಿಕಟ ಪೂರ್ವ ಶಾಸಕ ಮಸಾಲ ಜಯರಾಮ್ ಪತ್ರಿಕಾ ಮಾಧ್ಯಮಗೋಷ್ಠಿ ನಡೆಸಿದರು.

 

ಇದೇ ವೇಳೆ ಮಾತನಾಡಿದ ಅವರು ಎಲ್ಲರಿಗೂ ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಎಲ್ಲರಿಗೂ ತಿಳಿದಿರುವ ವಿಚಾರ, ಆದರೆ ಕೆಲವರು ತಾಲೂಕಿನಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಎಂದು ಸ್ವಯಂ ಘೋಷಿತ ಹೇಳಿಕೆಯನ್ನು ನೀಡುತ್ತಿದ್ದಾರೆ, ನಾನು ಕೂಡ ಈಗಾಗಲೇ ಈ ಹಿಂದೆ ನಡೆದ ಚುನಾವಣೆಯಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದೇನೆ.

 

ತಾಲೂಕಿನಲ್ಲಿ ನಾನು ಸಹ ರಾಜಕಾರಣ ಮಾಡಲು ಇರುವುದು ಭಾರತೀಯ ಜನತಾ ಪಾರ್ಟಿಯಲ್ಲಿ ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದೇನೆ ಜೊತೆಗೆ ಒಂದು ಬಾರಿ ಶಾಸಕನಾಗಿಯೂ ಸಹ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಈ ಬಾರಿ ಕೆಲವು ಅಡಚಣೆಯಿಂದಾಗಿ ಕಡಿಮೆ ಅಂತರದಲ್ಲಿ ಸೋತಿರಬಹುದು ಆದರೆ ನಾನು ನನ್ನ ಪಕ್ಷದಲ್ಲಿ ನಿಷ್ಠೆಯಿಂದ ಈಗಲೂ ಸಹ ಪಕ್ಷ ಸಂಘಟನೆ ಮಾಡುತ್ತಿದ್ದು ಮೊದಲಿಗಿಂತಲೂ ನನ್ನ ಕಾರ್ಯಕರ್ತರು ಈ ಬಾರಿ ಹೆಚ್ಚಾಗಿದ್ದು ಕಾರ್ಯಕರ್ತರು ಸಹ ಪಕ್ಷ ಸಂಘಟನೆಯಲ್ಲಿ ನಿಷ್ಠೆಯಿಂದ ತೊಡಗಿದ್ದಾರೆ.

 

ಜೊತೆಗೆ ಈಗಾಗಲೇ ಕೇಂದ್ರದ ಹಿರಿಯ ನಾಯಕರು ಹೆಚ್ಚಿನ ಪಕ್ಷ ಸಂಘಟನೆಯನ್ನು ಮಾಡಲು ಸೂಚಿಸಿದ್ದು ಮುಂದೆಯೂ ಸಹ ಸಂಘಟನೆಯಲ್ಲಿ ತೊಡಗಲಿದ್ದೇನೆ ಯಾವುದೇ ಕಾರಣಕ್ಕೂ ಹಿಂಜರಿಯುವ ಮಾತೇ ಇಲ್ಲ ಮುಂಬರುವ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ನಾನೇ ಅಭ್ಯರ್ಥಿ ಇದನ್ನು ಯಾರು ತಡೆಯಲು ಸಾಧ್ಯವಿಲ್ಲ.

 

ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯ ನಾನು ಕೂಡ ಬಿಜೆಪಿಯಿಂದ ಅಭ್ಯರ್ಥಿಯಾಗುವುದು ಅಷ್ಟೇ ಸತ್ಯ ಈಗಾಗಲೇ ನನ್ನ ಪಕ್ಷದ ಹಿರಿಯ ನಾಯಕರು ಸಹ ನನಗೆ ಟಿಕೆಟ್ ಭರವಸೆ ನೀಡಿದ್ದು ಎನ್ ಡಿ ಎ ಮೈತ್ರಿಯಿಂದ ಮುಂದಿನ ಅಭ್ಯರ್ಥಿ ನಾನೇ ಎಂದು ಸ್ಪಷ್ಟನೆ ನೀಡಿದರು, ಮುಂದುವರೆದು ಮಾತನಾಡಿ ತಾಲೂಕಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಮತ್ತು ಕಾರ್ಯಕರ್ತರು ಸಹ ಮುಂದಿನ ಅಭ್ಯರ್ಥಿ ನೀವೇ ಹಾಗೆ ನಿಮ್ಮ ಪರವಾಗಿ ನಾವುಗಳು ಸದಾ ಜೊತೆ ಇರುತ್ತೇವೆ ಎಂದು ಹೆಚ್ಚಿನ ಭರವಸೆ ನೀಡಿದ್ದು, ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತಿಲ್ಲ, ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಹಾಲಿ ಶಾಸಕರಾದ ಎಂಟಿ ಕೃಷ್ಣಪ್ಪ ಮುಂದಿನ ಅಭ್ಯರ್ಥಿ ನಾನೇ ಎಂದು ಹೇಳಿಕೆ ನೀಡಿರುವುದು ಕೆಲವು ಮಾಧ್ಯಮದ ಮೂಲಕ ತಿಳಿದಿದ್ದೇನೆ.

 

ಬಹುಶಹ ಜೆಡಿಎಸ್ ಬಿಜೆಪಿ ಮೈತ್ರಿ ಇರುವುದರಿಂದ ಮುಂಬರುವ ಚುನಾವಣೆಯಲ್ಲಿ ಹಾಲಿ ಶಾಸಕರು ನನ್ನನ್ನೇ ಅಭ್ಯರ್ಥಿಯನ್ನಾಗಿಸಿ ಗೆಲ್ಲಿಸಬಹುದೇನೋ ಎಂದರು ಕಾರ್ಯಕರ್ತರು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಒಳಗಾಗದೆ ನೀವುಗಳು ನಿಷ್ಠೆಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿ ಟಿಕೆಟ್ ತರುವುದು ನನಗೆ ಬಿಡಿ ಎಂದರು,

 

ಇದೇ ಸಂದರ್ಭದಲ್ಲಿ ತಾಲೂಕಿನ ಬಿಜೆಪಿ ಅಧ್ಯಕ್ಷ ಪ್ರಕಾಶ್ ಯಾದವ್, ಪ್ರಧಾನ ಕಾರ್ಯದರ್ಶಿ ಮಹೇಶ್, ಜಿಪಂ ಮಾಜಿ ಸದಸ್ಯ ಉಗ್ರಯ್ಯ, ಮುಖಂಡರಾದ ಕಡೆಹಳ್ಳಿ ಸಿದ್ದಯ್ಯ, ಅಂಜನ್ ಕುಮಾರ್, ಸೋಮೇನಹಳ್ಳಿ ಜಗದೀಶ್, ಚಿದಾನಂದ್, ಭುಗುಡನಹಳ್ಳಿ ಕೃಷ್ಣಮೂರ್ತಿ, ಮಂಜಣ್ಣ, ಇನ್ನು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

 

 

 

ವರದಿ: ಮಂಜುನಾಥ್ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *