JANATAA24 NEWS DESK
Turuvekere: ಪ್ರಾ. ಕೃಷಿ,ಪತ್ತಿನ,ಸ,ಸಂಘದ ಅಧ್ಯಕ್ಷರಾಗಿ ಗಿಡ್ಡಯ್ಯ ಕೆ ಎಂ. ಉಪಾಧ್ಯಕ್ಷರಾಗಿ ಪದ್ಮ ಎಸ್ ಕೆ. ಆಯ್ಕೆ.

ತುರುವೇಕೆರೆ: ತಾಲೂಕಿನ ಪ್ರತಿಷ್ಠಿತ ಹೋಬಳಿಯಂದೇ ಹೆಸರಾದ ಮಾಯಸಂದ್ರ ಹೋಬಳಿಯ, ಮಾಯಸಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಸ್ತುತ ಸಾಲಿನ ಆಡಳಿತ ಮಂಡಳಿಯ ಚುನಾವಣೆಯು ಡಿ.30ರ ಭಾನುವಾರ ಮಾಯಸಂದ್ರದ ಸರ್ಕಾರಿ ಶಾಲೆಯಲ್ಲಿ ಯಶಸ್ವಿಯಾಗಿ ನಡೆದು ಚುನಾವಣೆಯ ಕಣದಲ್ಲಿ ಸುಮಾರು 23 ಮಂದಿ ಸ್ಪರ್ಧಿಗಳು ಸ್ಪರ್ಧಿಸಿದ್ದರು.
ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ ಸ್ಪರ್ಧಿಗಳು ಸಹಾ ವಿಶೇಷವಾದ ತಂಡಗಳಾಗಿ ಮಾರ್ಪಡಾಗಿ ಒಂದೇ ತಂಡದ 12 ಜನ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿ ಗೆಲುವನ್ನು ಸಾಧಿಸಿದ್ದು,10-12-2025 ನೇ ಬುಧವಾರದಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದು ಯಾವುದೇ ಗೊಂದಲಗಳಿಲ್ಲದೆ ಅವಿರೋಧವಾಗಿ ಅಧ್ಯಕ್ಷರಾಗಿ ಸುಮಾರು ಇದೇ ಸಂಘದಲ್ಲಿ 34 ವರ್ಷ ಅನುಭವವುಳ್ಳ ಗಿಡ್ಡಯ್ಯ ಕೆ ಎಂ ಅಧ್ಯಕ್ಷರಾಗಿ ಹಾಗೂ ಇದೆ ಸಂಘದಲ್ಲಿ ಸುಮಾರು 10 ವರ್ಷಗಳ ಕಾಲ ನಿತ್ಯ ನಿಧಿ ಠೇವಣಿ ಸಂಗ್ರಹಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪದ್ಮ ಎಸ್ ಕೆ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಇದೆ ವೇಳೆ ಅಧ್ಯಕ್ಷರಾಗಿ ಆಯ್ಕೆಯಾದ ಗಿಡ್ಡಯ್ಯ ಕೆ ಎಂ ಮಾತನಾಡಿ, ನಮ್ಮ ತಂಡಕ್ಕೆ ಅಭೂತಪೂರ್ವ ಗೆಲುವಿಗೆ ಕಾರಣಿಕರ್ತರಾದ ಸರ್ವ ಮತದಾರರಿಗೂ ಸ್ನೇಹಿತರಿಗೂ ಹಿತೈಷಿಗಳಿಗೂ ಕೃತಜ್ಞತೆ ಸಲ್ಲಿಸುತ್ತಾ ಮುಂದಿನ ದಿನಗಳಲ್ಲಿ ಉತ್ತಮ ಆಡಳಿತವನ್ನು ರಚಿಸಿ ರೈತರಿಗೆ ,ಸಾರ್ವಜನಿಕರಿಗೆ, ಸರ್ಕಾರದ ವತಿಯಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಮೂಲಕ ಉತ್ತಮ ಆಡಳಿತವನ್ನು ನೀಡಿ ತಮ್ಮದೇ ಬಂಡವಾಳ ಹೊಂದಿ ಕೃಷಿ ಸಾಲಗಳಲ್ಲದೆ ಕೃಷಿಯೇತರ ಸಾಲಗಳನ್ನು ವಿತರಿಸಿ ಇನ್ನೂ ಹೆಚ್ಚಿನ ಲಾಭಗಳಿಸುವುದರಲ್ಲಿ ನಾವುಗಳು ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತೇವೆ.
ಜೊತೆಗೆ ರೈತರಿಗೆ ಸರಿಯಾದ ಸಮಯಕ್ಕೆ ರಸಗೊಬ್ಬರ ದೊರಕಿಸಿಕೊಟ್ಟು ರೈತರಿಗೆ ಅನುಕೂಲ ಮಾಡಲು ಹೆಚ್ಚಿನ ಶ್ರಮ ಇದಲ್ಲದೆ ನಮ್ಮ ಸಂಘದಿಂದ ರೈತರಿಗೆ ಯಾವುದೇ ಅನಾನುಕೂಲಗಳಾಗದೆ ಸರಿಯಾದ ಸಮಯಕ್ಕೆ ಬೇಕಾದಂತಹ ಸೌಲಭ್ಯಗಳನ್ನು ಒದಗಿಸಿ ಕೊಡುತ್ತೇವೆ ಎಂದರು,
ನಂತರ ಉಪಾಧ್ಯಕ್ಷರಾದ ಪದ್ಮ ಎಸ್ ಕೆ ಮಾತನಾಡಿ, ನಾನು ಸಹ ಇದೆ ಸಂಘದಲ್ಲಿ ಸುಮಾರು 10 ವರ್ಷಗಳ ಕಾಲ ನಿತ್ಯ ಠೇವಣಿ ಸಂಗ್ರಹ ಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು ನನಗೂ ಸಹ ಈ ಸಂದರ್ಭದಲ್ಲಿ ರೈತರಿಗೆ ಯಾವೆಲ್ಲ ಅನುಕೂಲ ಅನಾನುಕೂಲಗಳು ಆಗಿದೆ ಅವೆಲ್ಲವನ್ನು ಹತ್ತಿರದಿಂದ ನೋಡಿದ್ದು ಈಗ ಇದೆ ಸಂಘದಲ್ಲಿ ನನ್ನನ್ನು ಕಾರ್ಯ ನಿರ್ವಹಿಸಲು ಆಯ್ಕೆ ಮಾಡಿ ಕಳುಹಿಸಿ ಕೊಟ್ಟಿದ್ದಾರೆ.
ನಾನು ಕೂಡ ಅಷ್ಟೇ ನಿಷ್ಠೆಯಿಂದ ಕಾರ್ಯ ನಿರ್ವಹಿಸಿ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ನಮ್ಮ ಸಂಘದಿಂದ ದೊರಕುವಂತೆ ಮಾಡಲು ಸದಾ ಸಿದ್ದಳಿದ್ದು ಅದರಂತೆ ನಮ್ಮ ನೂತನ ನಿರ್ದೇಶಕರುಗಳೊಂದಿಗೆ ಯಾವುದೇ ಗೊಂದಲಗಳಿಲ್ಲದೆ ಚರ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡುತ್ತೇನೆ ಇದರ ಜೊತೆಗೆ ಈಗಾಗಲೇ ನಮ್ಮ ಮಾಯಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಾಲ್ಕನೇ ಸ್ಥಾನದಲ್ಲಿದ್ದು ಇದನ್ನು ಮೊದಲನೇ ಸ್ಥಾನಕ್ಕೆ ಕೊಂಡೊಯ್ಯಲು ಎಲ್ಲರೂ ಜೊತೆಗೂಡಿ ಶ್ರಮಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ನಿರ್ದೇಶಕರುಗಳಾದ ಸುನಿಲ್, ರಘು ಕೆ ,ರಂಗನಾಥ್, ಅಶೋಕ್ ಕುಮಾರ್ ಡಿ ಎಸ್, ಬಾಲರಾಜು, ಲೋಕೇಶ್ ಎಂ ಎಲ್, ನಂದಿನಿ ಬಿ ಆರ್, ಯೋಗೇಶ್, ವೆಂಕಟೇಶ್, ಹಾಗೂ ಮುಖಂಡರುಗಳಾದ ಲೀಲಾವತಿ ಗಿಡ್ಡಯ್ಯ ನಂದೀಶ್ ಮತ್ತು ಸಿಇಒ ಮಮತಾ ಹಾಗೂ ಸಿಬ್ಬಂದಿ ವರ್ಗ ಇನ್ನು ಹಲವರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.