Document

Turuvekere: ಗಣಪತಿ ಜಾತ್ರಾ ಮಹೋತ್ಸವದ ಹಿನ್ನೆಲೆ, ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ.

JANATAA24 NEWS DESK 

 

Turuvekere: ಗಣಪತಿ ಜಾತ್ರಾ ಮಹೋತ್ಸವದ ಹಿನ್ನೆಲೆ, ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ.

Turuvekere: In the backdrop of the Ganapati Jatra festival, a peace meeting was held by the police department.

ತುರುವೇಕೆರೆ: ಪಟ್ಟಣದ ತಿಪಟೂರು ರಸ್ತೆಯಲ್ಲಿರುವ ಶ್ರೀ ಗಣಪತಿ ಆಸ್ಥಾನ ಮಂಟಪದಲ್ಲಿ ಈಗಾಗಲೇ ತುರುವೇಕೆರೆಯಲ್ಲಿ ನಡೆಯುತ್ತಿರುವ ಗಣಪತಿ ಜಾತ್ರಾ ಮಹೋತ್ಸವ ದಿನಾಂಕ 23.11.2025 ರಿಂದಲೇ ಆರಂಭವಾಗಿದ್ದು ತುರುವೇಕೆರೆಯ ಪ್ರಸಿದ್ಧ ಶ್ರೀ ಸತ್ಯ ಗಣಪತಿಯ ಸ್ವಾಮಿಯವರ ಜಾತ್ರಾ ಮಹೋತ್ಸವವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ.

ದಿನಾಂಕ 4.12.2025 ರಿಂದ ಜಾತ್ರಾ ಮಹೋತ್ಸವವು ಕೂಡ ಆರಂಭವಾಗಿದೆ ಈ ಜಾತ್ರಾ ಮಹೋತ್ಸವವು ದಿನಾಂಕ 9.12.2025 ನೆ ಮಂಗಳವಾರದಂದು ಅಂತ್ಯಗೊಳ್ಳಲಿದ್ದು ಇದರ ನಡುವೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈಗಾಗಲೇ ಪೊಲೀಸ್ ಇಲಾಖೆ ಕಟ್ಟೆಚ್ಚರವನ್ನು ಸಹ ವಹಿಸಿದೆ.

ಜೊತೆಗೆ ಪಟ್ಟಣದ ಹಿಂದೂ ಮುಸಲ್ಮಾನ್ ಮುಖಂಡರೊಂದಿಗೆ ಪೊಲೀಸ್ ಇಲಾಖೆ ಶುಕ್ರವಾರದಂದು ಶಾಂತಿ ಸಭೆಯನ್ನು ಸಹ ಆಯೋಜನೆ ಮಾಡಲಾಗಿತ್ತು ಈ ಸಭೆಯನ್ನು ಶ್ರೀ ಸತ್ಯ ಗಣಪತಿ ಸೇವಾ ಸಮಾಜದ ಅಧ್ಯಕ್ಷರಾದ ಆರ್ ಮಲ್ಲಿಕಾರ್ಜುನ್, (ರಾಜು)ಪೊಲೀಸ್ ಇಲಾಖೆಯ ತಾಲ್ಲೂಕು ಸಿ ಪಿ ಐ ಲೋಹಿತ್, ಪಿಎಸ್ಐ ಮೂರ್ತಿ,ಟಿ ಇವರ ನೇತೃತ್ವದಲ್ಲಿ ಶಾಂತಿ ಸಭೆಯನ್ನು ನಡೆಸಲಾಯಿತು, ಇದೇ ವೇಳೆ ಸಭೆಯನ್ನು ಕುರಿತು ಮಾತನಾಡಿದ ಸಿಪಿಐ ಲೋಹಿತ್, ಜಾತ್ರಾ ಮಹೋತ್ಸವದಲ್ಲಿ ಅಕ್ರಮ ಚಟುವಟಿಕೆಗಳು ಏನಾದರೂ ಕಂಡು ಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

ಜೊತೆಗೆ ಜಾತ್ರಾ ಮಹೋತ್ಸವದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಜಾತ್ರಾ ಮಹೋತ್ಸವದ ಮೇಲ್ವಿಚಾರಣೆ ಜವಾಬ್ದಾರಿಯ ಮುಖಂಡರು, ಮತ್ತು ಆಯೋಜಕರು ಕ್ರಮ ವಹಿಸಬೇಕು, ಹಾಗೂ ಶ್ರೀ ಸತ್ಯ ಗಣಪತಿ ಜಾತ್ರಾ ಮಹೋತ್ಸವದ ಕಾರ್ಯಕಾರಿ ಮಂಡಳಿಯ ಎಲ್ಲಾ ಪದಾಧಿಕಾರಿಗಳಿಗೆ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಮತ್ತು ಅವಘಡಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮದೊಂದಿಗೆ ಜಾತ್ರಾ ಮಹೋತ್ಸವವನ್ನು ನಡೆಸಬೇಕೆಂದು ಅಧ್ಯಕ್ಷರು ಸೂಚಿಸಬೇಕೆಂದು ಹೇಳಿದರು.

ಇದಲ್ಲದೆ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಆಕ್ರಮ ಚಟುವಟಿಕೆಗಳು ಸೇರಿದಂತೆ ಶಾಂತಿ ಕದಡುವ ಚಟುವಟಿಕೆಗಳು ಏನಾದರೂ ಕಂಡುಬಂದಲ್ಲಿ ಅಂತಹ ಅವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆಯನ್ನು ಸಹ ನೀಡಿದರು. ಜೊತೆಗೆ ಜಾತ್ರಾ ಮಹೋತ್ಸವದಲ್ಲಿ ವಿವಿಧ ಬಗೆಯ ಆಟೋಟ ಉಪಕರಣಗಳಿಂದ ಏನಾದರೂ ಅನಾಹುತ ಸಂಭವಿಸಿದರೆ ಅದರ ಆಯೋಜಕರೇ ನೇರ ಹೊಣೆ, ಇದಲ್ಲದೆ ಗಣಪತಿ ಉತ್ಸವ ಮಸೀದಿ ಮಂದಿರಗಳ ಮುಂದೆ ಸಂಚರಿಸುವ ವೇಳೆ ಯಾವುದೇ ರೀತಿಯ ಗೊಂದಲಗಳಿಲ್ಲದೆ ಸಂಘರ್ಷಗಳಿಲ್ಲದೆ ಉತ್ಸವ ನಡೆಯುವಂತೆ ಆಯಾ ಸಮುದಾಯದ ಮುಖಂಡರುಗಳು ಕ್ರಮ ವಹಿಸಬೇಕು.

ಪಟಾಕಿ ಸಿಡಿಮದ್ದು ಸಿಡಿಸುವಾಗ ಯಾವುದೇ ರೀತಿಯ ಬೆಂಕಿ ಅವಘಡಗಳು ಸಂಭವಿಸದಂತೆ ಎಚ್ಚರಿಕೆಯಿಂದ ಇರಬೇಕು, ಗಣೇಶ ವಿಸರ್ಜನಾ ವೇಳೆ ತೆಪ್ಪೋತ್ಸವ ಸಂದರ್ಭದಲ್ಲಿ ಅನುಭವವುಳ್ಳ ಈಜುಗಾರರನ್ನು ಒಳಗೊಂಡಿರಬೇಕು ಜೊತೆಗೆ ಅಗ್ನಿಶಾಮಕದಳ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗವನ್ನು ಕೂಡ ನಿಯೋಜನೆಗೊಳಿಸಿದ್ಧು ಅವರ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

 

ಇದೇ ಸಂದರ್ಭದಲ್ಲಿ, ಪಟ್ಟಣದ ಟೌನ್ ಬ್ಯಾಂಕ್ ನಿರ್ದೇಶಕ ಬಡಾವಣೆ ಶಿವರಾಜು, ಮಸೀದಿಯ ಮುಖಂಡರಾದ ಇಮ್ತಿಯಾಜ್, ತಾಲೂಕು ಅಲ್ಪಸಂಖ್ಯಾತ ಅಧ್ಯಕ್ಷರಾದ ನೂರುಲ್ಲಾ, ಮುಖಂಡರುಗಳಾದ ಮೈಕ್ ಮೋಹನ್, ಮಲ್ಲೇಶ್, ಪಾತ್ರೆ ಮಂಜು ಶಬ್ಬೀರ್, ಪಟ್ಟಣದ ಇನ್ನು ಹಲವು ಮುಖಂಡರುಗಳು ಉಪಸ್ಥಿತರಿದ್ದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.


ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *