Document

Turuvekere: ಮಾಜಿ ಶಾಸಕ ಮಸಾಲ ಜಯರಾಮ್ ಫಾರಂ ಹೌಸ್ನಲ್ಲಿ ಗೋವುಗಳಟ್ಟಿಗೆ ಸಂಕ್ರಾಂತಿ ಹಬ್ಬದ ಸಡಗರ.

JANATAA24 NEWS DESK

 

 

Turuvekere: ಮಾಜಿ ಶಾಸಕ ಮಸಾಲ ಜಯರಾಮ್ ಫಾರಂ ಹೌಸ್ನಲ್ಲಿ ಗೋವುಗಳಟ್ಟಿಗೆ ಸಂಕ್ರಾಂತಿ ಹಬ್ಬದ ಸಡಗರ.

Turuvekere: Former MLA Masala Jayaram's farm house is bustling with cows for the Sankranti festival.

ತುರುವೇಕೆರೆ: ತಾಲೂಕಿನಾದ್ಯಂತ ಪ್ರಾಣಿ ಪ್ರಿಯ, ಬಡವರ ಆಶಾಕಿರಣ, ಸ್ನೇಹಜೀವಿ, ರೈತ ಕಾಳಜಿ ಹೊಂದಿರುವ ತುರುವೇಕೆರೆ ತಾಲೂಕಿನ ನಿಕಟಪೂರ್ವ ಶಾಸಕ ಮಸಾಲ ಜಯರಾಮ್ ರವರ ತುರುವೇಕೆರೆ ಮಾಯಸಂದ್ರ ರಸ್ತೆ ಮಧ್ಯೆ ಬರುವ ಚಿಕ್ಕೋನಹಳ್ಳಿ ಗೇಟ್ ಬಳಿ ಇರುವ ಫಾರಂ ಹೌಸ್ ನಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಸಾಲ ಜಯರಾಮ್ ರವರು ಕುಟುಂಬ ಸಮೇತ ಅತ್ಯಂತ ಶ್ರದ್ಧಾಭಕ್ತಿ, ಸಂಭ್ರಮ ಸಡಗರದೊಂದಿಗೆ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು.

ಇದೇ ಸಂದರ್ಭದಲ್ಲಿ ತಮ್ಮ ತೋಟದಲ್ಲಿ ಇರುವ ವಿವಿಧ ಕುರಿ ಮೇಕೆಗಳು ಸೇರಿದಂತೆ ವಿವಿಧ ತಳಿಯ ಅದರಲ್ಲೂ ಹೆಚ್ಚು ಹಳ್ಳಿಕಾರ್ ತಳಿಯ ರಾಸುಗಳಿಗೆ ಬಹಳ ವಿಶೇಷವಾಗಿ ಅಲಂಕರಿಸಿ ಕಿಚ್ಚು ಹಾಯಿಸುವ ಮೂಲಕ ಕುಟುಂಬ ಸಮೇತರಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸಿ ಸಿಹಿ ಹಂಚಿದರು ವಿಶೇಷವಾಗಿ ಮಸಾಲ ಜೈರಾಮ್ ರವರ ಪುತ್ರ ತೇಜು ಜೈರಾಮ್ ರವರು ಬೆಂಕಿಯಲ್ಲಿ ರಾಸು ಹಿಡಿದು ಕಿಚ್ಚಾಯ್ಸಿದ್ದು ಮತ್ತು ಮಾಜಿ ಶಾಸಕ ಮಸಾಲ ಜಯರಾಮ್ ರವರು ಎತ್ತಿನ ಬಂಡಿ ಓಡಿಸುವುದರ ಮೂಲಕ ಹಬ್ಬಕ್ಕೆ ಮೆರುಗು ನೀಡಿ ಎಲ್ಲರ ಕಣ್ಮನ ಸೆಳೆದರು.

ಜೊತೆಗೆ ಕುಟುಂಬದವರಿಂದ ರಾಸುಗಳಿಗೆ ಪೂಜೆ ಮಾಡಿ ಸಂಕ್ರಾಂತಿ ಹಬ್ಬದ ವಿಶೇಷತೆಯಾಗಿರುವ ಎಳ್ಳು ಬೆಲ್ಲವನ್ನು ಪರಸ್ಪರ ವಿನಿಮಯ ಮಾಡಿಕೊಂಡು ಹಬ್ಬ ಆಚರಿಸಿದರು, ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಮೊದಲಿಗೆ ತಾಲೂಕಿನ ಜನತೆಗೆ ಮಕರ ಸಂಕ್ರಾಂತಿಯ ಶುಭಾಶಯಗಳು ಕೋರಿ, ತಾತ ಮುತ್ತಾತನ ಕಾಲದಿಂದಲೂ ನಾವು ರೈತಾಪಿ ಕುಟುಂಬದ ವರ್ಗದಿಂದ ಬಂದಿದ್ದು ಮಕರ ಸಂಕ್ರಾಂತಿ ಹಬ್ಬವನ್ನು ನಮ್ಮ ಭಾಗದಲ್ಲಿ ಸುಗ್ಗಿ ಹಬ್ಬ ಎಂಬುದರ ಮೂಲಕ ನಮ್ಮಲ್ಲಿ ಧಾನ್ಯಗಳನ್ನು ರಾಶಿ ಮಾಡಿ ಪೂಜೆ ನೆರವೇರಿಸಿ, ಕ್ರಿಮಿ ಕೀಟಗಳನ್ನು ಹೋಗಲಾಡಿಸಿ ವರ್ಷಪೂರ್ತಿ ಒಳ್ಳೆಯ ಮಳೆ ಬೆಳೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಪ್ರತಿ ವರ್ಷ ಸಂಕ್ರಾಂತಿ ಹಬ್ಬದಂದು ರಾಸುಗಳನ್ನು ಕಿಚ್ಚಾಯಿಸುತ್ತೇವೆ ಹಾಗೂ ರಾಸುಗಳಿಗೆ ಸಿಂಗರಿಸಿ ಮೆರವಣಿಗೆ ಮಾಡಿ ಬೆಂಕಿಯಲ್ಲಿ ಕಿಚಾಯಿಸುವುದು ವಾಡಿಕೆಯಾಗಿದೆ

ಆದ್ದರಿಂದ ನಾವುಗಳು ಅದೇ ರೀತಿ ಈ ಹಬ್ಬವನ್ನು ವಿಶೇಷವಾಗಿ ಬಹಳ ಅದ್ದೂರಿಯಿಂದ ನಡೆಸುತ್ತೇವೆ ಎಂದು ಹೇಳುತ್ತಾ ಮುಂದುವರೆದು ಮಾತನಾಡಿ ರೈತರನ್ನು ಉದ್ದೇಶಿಸಿ ಹಳ್ಳಿಕಾರ್ ತಳಿಯ ಹಸುಗಳನ್ನು ಹೆಚ್ಚು ಹೆಚ್ಚು ಸಾಕಿ ನಶಿಸಿ ಹೋಗುತ್ತಿರುವ ಹಳ್ಳಿಕಾರ್ ತಳಿಯನ್ನು ಉಳಿಸಿ ಎಂದರು ಈಗಾಗಲೇ ನನ್ನ ಬಳಿ ಇದ್ದ ಹಳ್ಳಿಕಾರ್ ಏಕಲವ್ಯ ಹೋರಿಯನ್ನು ಸುಮಾರು 30 ಲಕ್ಷಕ್ಕೆ ವರ್ತೂರು ಸಂತೋಷ್ ರವರಿಗೆ ಮಾರಾಟ ಮಾಡಿದ್ದು ಸಪ್ಲಮ್ಮ ಜಾತ್ರೆಯಿಂದ 20 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಎರಡು ಜೋಡಿ ಎತ್ತುಗಳನ್ನು ಖರೀದಿ ಮಾಡಿದ್ದು ನಮ್ಮ ತೋಟದಲ್ಲಿ ಅನೇಕ ವಿವಿಧ ತಳಿಯ ಹಸುಗಳನ್ನು ಸಾಕುತ್ತಿದ್ದೇವೆ ಎಂದು ಹೇಳುತ್ತಾ ಪತ್ರಕರ್ತರೊಂದಿಗೆ ಕುಳಿತು ಅವರೆಕಾಯಿ, ಕಡಲೆಕಾಯಿ, ಸಿಹಿ ಗೆಣಸು, ಸವಿಯುತ್ತಾ ಸಂಕ್ರಾಂತಿ ಹಬ್ಬದ ವಿಶೇಷತೆ ಬಗ್ಗೆ ಮೆಲುಕು ಹಾಕಿ ಹಬ್ಬದ ಶುಭಾಶಯ ಹೇಳಿ ಮತ್ತೊಮ್ಮೆ ತಾಲೂಕಿನ ಜನತೆಗೆ ಮಕರ ಸಂಕ್ರಾಂತಿಯ ಶುಭಾಶಯ ಕೋರಿದರು.

 

ಇದೆ ವೇಳೆ,ಮಸಾಲ ಜಯರಾಮ್ ರವರ ಪೂರ್ಣ ಕುಟುಂಬ, ಹಾಗೂ ಫಾರಂ ಹೌಸ್ ನಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳು, ಬಂದು ಹಿತೈಷಿಗಳು ಹಲವರು ಉಪಸ್ಥಿತರಿದ್ದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *