Janataa24 NEWS DESK
Turuvekere: ಅವ್ಯವಹಾರ ದೂರಿನ ಹಿನ್ನೆಲೆ ಕಂಪ್ಯೂಟರ್ ಆಪರೇಟರ್ ತಲೆ ದಂಡ.

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟಂತೆ ಕಳೆದ ನಾಲ್ಕೈದು ವರ್ಷಗಳಿಂದಲೂ ಅವ್ಯವಹಾರ ಕುರಿತು ಅನೇಕ ಬಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ವಿರುದ್ಧ ಮೂಲಭೂತ ಸೌಕರ್ಯಗಳು ಸರಿಯಾಗಿ ದೊರಕದೆ ಸಾರ್ವಜನಿಕರು ಅದೆಷ್ಟೋ ಬಾರಿ ಪಂಚಾಯಿತಿ ಎದುರು ಧರಣಿ ಕೂಡ ಮಾಡಿದ್ದು,
ಇಂತಹ ಅದೆಷ್ಟೋ ಅನೇಕ ಅವ್ಯವಹಾರ ದೂರಿನ ಹೆಸರನ್ನು ಹೊತ್ತ ಸೊರವನಹಳ್ಳಿ ಗ್ರಾಮ ಪಂಚಾಯಿತಿ ಇನ್ನೇನು ಗ್ರಾಮ ಪಂಚಾಯಿತಿ ಚುನಾವಣೆಗಳು ಹತ್ತಿರ ಬರುವ ಸಮಯದಲ್ಲೇ ಮತ್ತೊಂದು ಅವ್ಯವಹಾರದ ದೂರಿನ ಹಿನ್ನೆಲೆಯಲ್ಲಿ ಕಂಪ್ಯೂಟರ್ ಆಪರೇಟರ್ ಒಬ್ಬರನ್ನು ಅಮಾನತ್ತುಗೊಳಿಸಿ ತಕ್ಷಣದಿಂದಲೇ ಗ್ರಾಮ ಪಂಚಾಯಿತಿ ಕಚೇರಿಯ ಯಾವುದೇ ಕಾರ್ಯಗಳಲ್ಲಿ ಭಾಗವಹಿಸಲು ಅಥವಾ ಕಚೇರಿಯ ದಾಖಲೆಗಳು ಮತ್ತು ದಾಖಲೆ ಪುಸ್ತಕಗಳು ಅಥವಾ ಕಂಪ್ಯೂಟರ್ ಡೇಟಾವನ್ನು ಬಳಸುವ ಅಧಿಕಾರ ಹೊಂದಿರುವುದಿಲ್ಲ ಎಂದು ಆದೇಶಿಸಿ ಅಮಾನತುಗೊಳಿಸಲಾಗಿದೆ.
ಒಟ್ಟಾರೆ ಸೊರವನಹಳ್ಳಿ ಗ್ರಾಮ ಪಂಚಾಯತಿಗೆ ಸಂಬಂಧಪಟ್ಟಂತೆ ಅನೇಕ ದೂರುಗಳ ಬಂದ ಹಿನ್ನೆಲೆ ಈಗ ಕಂಪ್ಯೂಟರ್ ಆಪರೇಟರ್ ತಲೆದಂಡವಾಗಿದ್ದು ಒಂದು ವೇಳೆ ಇದಕ್ಕೆ ಸಂಬಂಧಪಟ್ಟಂತೆ ಉನ್ನತ ಮಟ್ಟದ ಅಧಿಕಾರಿಗಳು ತನಿಖೆ ಏನಾದರೂ ಆರಂಭಿಸಿದರೆ ಇದೇ ಪಂಚಾಯಿತಿಯಲ್ಲಿ ಅದೆಷ್ಟು ಅವ್ಯವಹಾರಗಳು ಯಾರ್ಯಾರು ಮಾಡಿದ್ದಾರೆ ಎಂಬುದು ತಿಳಿದು ಬರಬೇಕಾಗಿರುವುದು ಕುತೂಹಲಕರ ಪ್ರಶ್ನೆಯಾಗಿದೆ.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.