JANATAA24 NEWS DESK
Turuvekere: ಡಾ| ಬಿ ಆರ್ ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಣಾ ದಿನ ಆಚರಣೆ.

ತುರುವೇಕೆರೆ: ಬಸವಣ್ಣ, ಬುದ್ಧನ ನಂತರ ಸಮಾನತೆಗಾಗಿ ಹೋರಾಡಿದ ಮಹಾಚೇತನ ಬಿ.ಆರ್. ಅಂಬೇಡ್ಕರ್ ಎಂದು ದಲಿತ ಮುಖಂಡ ಬಿ ಆರ್ ಕೃಷ್ಣಸ್ವಾಮಿ ಬಣ್ಣಿಸಿದರು.
ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ತಿಪಟೂರು ರಸ್ತೆಯಲ್ಲಿರುವ ಬಿಮೋತ್ಸವ ಆಚರಣೆ ಸಮಿತಿ ಕಚೇರಿಯಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆಚರಣೆ ನಡೆಸಿ ನಂತರ ಅವರು ಮಾತನಾಡಿದರು.ಅಂಬೇಡ್ಕರ್ ಅವರು ಜಗತ್ತಿನಲ್ಲಿಯೇ ಶ್ರೇಷ್ಠ ಲಿಖಿತ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ.
ಸಮಾಜ ಪರಿವರ್ತನೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಸಂವಿಧಾನದ ಶ್ರೇಷ್ಠತೆ ಉಳಿಯಲು ಒಳ್ಳೆಯವರ ಕೈಯಲ್ಲಿ ಆಡಳಿತ ಇರಬೇಕು. ಕೆಟ್ಟವರ ಕೈಗೆ ಹೋದರೆ ಕೆಟ್ಟದಾಗುತ್ತದೆ ಎಂದು ಅಂದೇ ದೇಶದ ಜನರಿಗೆ ಎಚ್ಚರಿಕೆ ಕೊಟ್ಟಿದ್ದರು ಅಂಬೇಡ್ಕರ್ ಅವರು ಕೇವಲ ದಲಿತರಿಗಷ್ಟೇ ಅಲ್ಲ, ಸಮಾಜದ ಎಲ್ಲ ಶೋಷಿತ ವರ್ಗಗಳಿಗೂ ಸಾಮಾಜಿಕ ಅವಕಾಶ ದೊರಕಿಸಲು ಶ್ರಮಿಸಿದರು. ಅವಕಾಶ ವಂಚಿತರು, ಶೋಷಿತರು, ಅನ್ಯಾಯ, ಅವಮಾನ, ದೌರ್ಜನ್ಯಕ್ಕೆ ಒಳಪಟ್ಟ ಎಲ್ಲಾ ಜನರ ಪರವಾಗಿ ಕೆಲಸ ಮಾಡಿದರು ಎಂದು ಸ್ಮರಿಸಿದರು.
ಡೋಂಕಿಹಳ್ಳಿ ರಾಮಣ್ಣ ಮಾತನಾಡಿ ಭಾರತ ಬಹುಸಂಸ್ಕೃತಿಯ, ಬಹುತ್ವದ ದೇಶ. ಹಲವು ಜಾತಿ, ಧರ್ಮ, ಭಾಷೆಗಳಿವೆ. ಅದಕ್ಕೆ ಪೂರಕವಾಗಿ ಸಂವಿಧಾನ ರಚಿಸಲಾಗಿದೆ. ಅವರು ರೂಪಿಸಿದ ಸಂವಿಧಾನದ ಹಾಗೂ ಹೋರಾಟದ ದಾರಿಯಲ್ಲಿ ನಡೆಯುವುದೇ ಅಂಬೇಡ್ಕರ್ ಅವರಿಗೆ ದೇಶದ ಜನರು ನೀಡುವ ನಿಜವಾದ ಗೌರವ ಎಂದರು.
ಇದೇ ಸಂದರ್ಭದಲ್ಲಿ , ದಲಿತ ಪರ ಸಂಘಟನೆಗಳ ಮುಖಂಡರುಗಳು ವಿವಿಧ ಪರ ಸಂಘಟನೆಗಳ ಮುಖಂಡರು ಮತ್ತು ಹಲವರು ಉಪಸ್ಥಿತಿಯಲ್ಲಿದ್ದರೂ.
ವರದಿ:ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.