Document

Turuvekere: ದತ್ತು ಮಾಸಾಚರಣಿ ಜಾಥಾ ಗೆ ಉಪ ವಿಭಾಧಿಕಾರಿ ಶ್ರೀಮತಿ ಸಪ್ತಶ್ರೀ ಚಾಲನೆ.

JANATAA24 NEWS DESK 

 

 

Turuvekere: ದತ್ತು ಮಾಸಾಚರಣಿ ಜಾಥಾ ಗೆ ಉಪ ವಿಭಾಧಿಕಾರಿ ಶ್ರೀಮತಿ ಸಪ್ತಶ್ರೀ ಚಾಲನೆ– ತಹಸಿಲ್ದಾರ್ ಕುಂ ಹಿ ಅಹ್ಮದ್ ಉಪಸ್ಥಿತಿ.

Turuvekere: Deputy Commissioner Smt. Saptasree drives for Dattu Masacharani Jatha.

ತುರುವೇಕೆರೆ: ಪಟ್ಟಣದ ಹೃದಯ ಭಾಗದಲ್ಲಿರುವ ತಾಲೂಕು ಆಡಳಿತ ಕಚೇರಿಯ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತುಮಕೂರು ಇದರ ವತಿಯಿಂದ 2025 ನೇ ಸಾಲಿನ ದತ್ತು ಮಾಸಾಚರಣೆ ನಿಮಿತ್ತ, ಸಮಗ್ರ ಮಕ್ಕಳ ಪಾಲನೆ, ಪೋಷಣೆ, ಮತ್ತು ರಕ್ಷಣೆಗಾಗಿ ಎಲ್ಲರೂ ಕೈಜೋಡಿಸೋಣ ಬನ್ನಿ ಎಂಬ ಕಾಲ್ನಡಿಗೆ ಜಾಥಾಗೆ ತಿಪಟೂರು ಉಪ ವಿಭಾಗಾಧಿಕಾರಿ ಸಪ್ತಶ್ರೀ ಹಸಿರು ನಿಶಾನೆ ತೋರಿಸುವ ಮೂಲಕ ಜಾಥಾಗೆ ಚಾಲನೆ ನೀಡಿದರು, ಇದೇ ವೇಳೆ ಮಾತನಾಡಿದ ಅವರು,

ದತ್ತು ತೆಗೆದು ಕೊಳ್ಳುವವರು ಅದರ ಪ್ರಕ್ರಿಯೆಯನ್ನು ಪಾಲಿಸಬೇಕು ಯಾವುದೇ ಅನಾಥ ಅಥವಾ ಪರಿತ್ಯಜಿಸಲ್ಪಟ್ಟ, ಒಪ್ಪಿಸಲ್ಪಟ್ಟ, ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯವರು ದತ್ತು ಮುಕ್ತ ಎಂದು ಘೋಷಿಸಿ ಆದೇಶ ನೀಡಿದ ನಂತರ ಆ ಮಕ್ಕಳು ದತ್ತುವಿಗೆ ಅರ್ಹರಾಗಿರುತ್ತಾರೆ.

ಮಕ್ಕಳು ಇಲ್ಲದ ಹಾಗೂ ಈಗಾಗಲೇ ಮಕ್ಕಳು ಇರುವ ಪೋಷಕರು ದತ್ತು ಪಡೆಯಬಹುದು, ಅವಿವಾಹಿತ, ವಿವಾಹ ವಿಚ್ಛೇದಿತ, ವಿಧವಾ ಮಹಿಳೆಯರು ಗಂಡು ಅಥವಾ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಳ್ಳಬಹುದು ಹೀಗೆ ಹಲವು ಸ್ವದೇಶಿ ದತ್ತು ಪ್ರಕ್ರಿಯೆಗೆ ದತ್ತು ಪಡೆಯುವ ಪೋಷಕರು ಬರಿಸಬೇಕಾದ ವೆಚ್ಚಗಳು ಕೂಡ ಒಳಗೊಂಡಿರುತ್ತದೆ ಮತ್ತು ಮಕ್ಕಳ ಪಾಲನಾ ಸಂಸ್ಥೆಗಳನ್ನು ಬಾಲ ನ್ಯಾಯ (ಪಾಲನೆ ಮತ್ತು ರಕ್ಷಣೆ)ಕಾಯ್ದೆಯಡಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿರುತ್ತದೆ ಇದಲ್ಲದೆ ನಾವುಗಳು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ತಮ್ಮ ಆಸು ಪಾಸಿನಲ್ಲಿ ಮಕ್ಕಳ ಪಾಲನ ಸಂಸ್ಥೆಗಳು ಹಾಗೂ ಮನೆಗಳಲ್ಲಿ ಎಂಟರಿಂದ ಹತ್ತು ಮಕ್ಕಳನ್ನು ಅನಧಿಕೃತವಾಗಿ ವ್ಯಕ್ತಿಗಳು ಪಾಲನೆ ಮಾಡುತ್ತಿರುವುದು ಏನಾದರೂ ಕಂಡುಬಂದಲ್ಲಿ ತಕ್ಷಣ ಮಾಹಿತಿಯನ್ನು ಹತ್ತಿರದ ಅಂಗನವಾಡಿ ಕಾರ್ಯಕರ್ತೆಯರನ್ನು ಅಥವಾ ಪೊಲೀಸ್ ಠಾಣೆ ಅಥವಾ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಹಾಗಾಗಿ 2025 ದತ್ತು ಮಾಸಾಚರಣೆಯನ್ನು ಎಲ್ಲಾ ಜಿಲ್ಲಾ ಮಟ್ಟದಲ್ಲೂ ಚಾಲನೆ ನೀಡಲಿದ್ದು ಮೊದಲಿಗೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಿಂದ ಇಂದು ಚಾಲನೆ ದೊರಕುತ್ತಿದೆ, ಈಗಾಗಲೇ ಅನೇಕ ಸುದ್ದಿವಾಹಿನಿಗಳಲ್ಲಿ ನೀವುಗಳು ಗಮನಿಸುತ್ತಿರುತ್ತೀರಾ ಒಂದು ಮಗುವನ್ನು ದತ್ತು ಪಡೆಯಬೇಕಾದರೆ ಅಕ್ರಮವಾಗಿ ಪಡೆಯುತ್ತಿರುವುದು ಅನೇಕ ಸುದ್ದಿಗಳಲ್ಲಿ ಬರುತ್ತಿರುವುದು ನೀವುಗಳು ಸಹ ಗಮನಿಸಿರುತ್ತೀರಾ ಆದರೆ ಒಂದು ಮಗುವನ್ನು ದತ್ತು ಪಡೆಯಬೇಕಾದರೆ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎಂಬುದು ಕೆಲವು ನಿಯಮಗಳು ಇದ್ದು ಅದೇ ಪ್ರಕಾರವಾಗಿ ಮಕ್ಕಳನ್ನು ದತ್ತು ಪಡೆಯಬಹುದು ಅಂತಹ ನಿಯಮಗಳನ್ನು ಕಡ್ಡಾಯವಾಗಿ ದತ್ತು ಪಡೆಯುವವರು ಪಾಲಿಸಲೇಬೇಕು, ಜೊತೆಗೆ ದತ್ತು ಪಡೆದ ಮಕ್ಕಳನ್ನು ತಮ್ಮ ಸ್ವಾರ್ಥಕ್ಕಾಗಿ ಬೇರೆ ರೀತಿ ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ, ಹಾಗಾಗಿ ದತ್ತು ಪಡೆಯುವವರು ಸರ್ಕಾರದ ನಿಯಮಗಳನ್ನು ಪಾಲಿಸಲೇಬೇಕು ನಿಯಮದಂತೆ ಸಂಬಂಧಪಟ್ಟ ಇಲಾಖೆಯಿಂದ ಮಕ್ಕಳನ್ನು ದತ್ತು ಪಡೆಯಬೇಕಾಗುತ್ತದೆ ಇದು ಕಡ್ಡಾಯವಾಗಿರುತ್ತದೆ ಎಂದರು.

 

ಇದೇ ಸಂದರ್ಭದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಕ್ಷಣಾಧಿಕಾರಿ ಗೌತಮ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿ ಪಲ್ಲವಿ, ಮಕ್ಕಳ ಸಹಾಯವಾಣಿ ಮೇಲ್ವಿಚಾರಕಿ ಸಿಂಧು. ಹಾಗೂ ಶಿಶು ಅಭಿವೃದ್ಧಿ ಯೋಜನೆಯ ಅಧಿಕಾರಿಗಳು, ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು ಹಲವರು ಉಪಸ್ಥಿತರಿದ್ದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Document

Leave a Reply

Your email address will not be published. Required fields are marked *