Document

Turuvekere: ಡಿಸೆಂಬರ್ 21ಕೆ ರಾಜ್ಯಾದ್ಯಂತ ಪಲ್ಸ್-ಪೋಲಿಯೋ ಲಸಿಕೆ ಕಾರ್ಯಕ್ರಮ

JANATAA24 NEWS DESK

Turuvekere: ಡಿಸೆಂಬರ್ 21ಕೆ ರಾಜ್ಯಾದ್ಯಂತ ಪಲ್ಸ್-ಪೋಲಿಯೋ ಲಸಿಕೆ ಕಾರ್ಯಕ್ರಮ.

 

 

IMG 20251217 WA0026

 

ತುರುವೇಕೆರೆ: ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ದಂಡಾಧಿಕಾರಿ ಕುಂ ಹಿ ಅಹಮದ್ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಟಿ ಹೆಚ್ ಓ ರಂಗನಾಥ್, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶ್ರೀನಾಥ್ ಬಾಬು ಉಪಸ್ಥಿತಿಯಲ್ಲಿ ಪಲ್ಸ್ ಪೋಲಿಯೋ ಕುರಿತು ಪತ್ರಿಕಾ ಮಾಧ್ಯಮಗೋಷ್ಠಿಯನ್ನು ನಡೆಸಲಾಯಿತು, ಇದೆ ವೇಳೆ ಟಿಹೆಚ್ಓ(THO) ರಂಗನಾಥ್ ಮಾತನಾಡಿ ರಾಜ್ಯದ್ಯಂತ ಡಿಸೆಂಬರ್ 21ನೇ ಭಾನುವಾರದಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು,

 

ನಮ್ಮ ತುರುವೇಕೆರೆ ತಾಲೂಕಿನಲ್ಲೂ ಪಲ್ಸ್ ಪೋಲಿಯೋ ನಿಮಿತ್ತ ತಾಲೂಕಿನಲ್ಲಿ ಸುಮಾರು 90 ಬೂತ್ಗಳನ್ನು ನಿರ್ಮಿಸಲಾಗಿದ್ದು ಡಿಸೆಂಬರ್ 21 ಭಾನುವಾರ ಬೆಳಿಗ್ಗೆ 8.00ಗಂಟೆಯಿಂದ ಸಂಜೆ 5:00 ಗಂಟೆಯವರೆಗೂ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆಯಲಿದ್ದು ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಪೋಷಕರು ಪಲ್ಸ್ ಪೋಲಿಯ ಲಸಿಕೆಯನ್ನು ಹಾಕಿಸಿ ಎಂದರು ಜೊತೆಗೆ ತಾಲೂಕಿನಾಧ್ಯಂತ ಎಲ್ಲಾ ಬೂತುಗಳಲ್ಲಿ ನಮ್ಮ ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು,

 

ಮತ್ತು ಸ್ವಯಂ ಪ್ರೇರಿತ ಕಾರ್ಯಕರ್ತರು ಸೇರಿದಂತೆ ಕಾರ್ಯನಿರ್ವಹಿಸಲಿದ್ದು ಜೊತೆಗೆ ಆರೋಗ್ಯ ಇಲಾಖೆಯಿಂದ ದಿನಾಂಕ 22 ರಿಂದ 24 ನೇ ತಾರೀಖಿನವರೆಗೂ ನಮ್ಮ ಆರೋಗ್ಯ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ತಾಲೂಕಿನ ಅತ್ಯಂತ ಪ್ರತಿ ಮನೆಗೂ ಭೇಟಿ ನೀಡಿ 5 ವರ್ಷ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಲಿದ್ದಾರೆ ಇದಲ್ಲದೆ ಟ್ರಾನ್ಸಿಸ್ಟ್ ಕೇಂದ್ರಗಳಲ್ಲಿ ತಾಲೂಕಿನ ವ್ಯಾಪ್ತಿಯಲ್ಲಿರುವ ಅಮ್ಮಸಂದ್ರದ ರೈಲ್ವೆ ಸ್ಟೇಷನ್ ಬಳಿ, ತುರುವೇಕೆರೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಬಳಿ, ಮಲ್ಲಾಗಟ್ಟ ಗಂಗಾಧರೇಶ್ವರ ದೇವಸ್ಥಾನದ ಬಳಿ, ಬಾಣಸಂದ್ರ ರೈಲ್ವೆ ನಿಲ್ದಾಣದ ಬಳಿ, ಸತತ ಮೂರು ದಿನಗಳ ಕಾಲ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಲಾಗುವುದು ಹಾಗಾಗಿ ಐದು ವರ್ಷ ಒಳಗಿನ ಮಕ್ಕಳಿಗೆ ತಾಯಂದಿರುಗಳು ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ ಎಂದು ಮನವಿ ಮಾಡಿದರು.

 

ನಂತರ ತಾಲೂಕು ತಹಶೀಲ್ದಾರ್ ಕುಂ,ಹಿ.ಅಹಮದ್ ಮಾತನಾಡಿ ಈಗಾಗಲೇ 2014 ರಲ್ಲಿ ಪೋಲಿಯೋ ಲಸಿಕೆ ಕುರಿತು ಪೋಲಿಯೋ ಮುಕ್ತ ಭಾರತ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ದೃಢೀಕರಣ ಪಡೆದಿದ್ದು ಹಾಗಾಗಿ ಈ ವರ್ಷವೂ ಕೂಡ ನಮ್ಮ ತಾಲೂಕಿನಲ್ಲಿ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನವನ್ನು ಆರಂಭಿಸುತ್ತಿದ್ದು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ನಮ್ಮ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ನಮ್ಮ ತಾಲೂಕು ಆಡಳಿತ ಸೇರಿದಂತೆ ತುರುವೇಕೆರೆ ತಾಲೂಕಿನಾಧ್ಯಂತ ಇದೇ ತಿಂಗಳು ದಿನಾಂಕ 21 ರಿಂದ 24ರ ವರೆಗೆ ಈ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ ನಡೆಯಲಿದ್ದು ತಾಲೂಕಿನ ಪ್ರತಿ ಹಳ್ಳಿಗಳಲ್ಲೂ ಐದು ವರ್ಷ ಒಳಗಿನ ಮಕ್ಕಳಿಗೆ ಲಸಿಕೆಯನ್ನು ಹಾಕಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಎಂದು ವಿನಂತಿಸಿದರು.

 

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Document

Leave a Reply

Your email address will not be published. Required fields are marked *