Document

Turuvekere: ಗಂಧದ ಮರ ಕದಿಯುತ್ತಿದ್ದ ಕಳ್ಳರ ಬಂಧನ.

JANATAA24 NEWS DESK 

 

 

Turuvekere: ಗಂಧದ ಮರ ಕದಿಯುತ್ತಿದ್ದ ಕಳ್ಳರ ಬಂಧನ.
Turuvekere: Thieves who were stealing sandalwood trees arrested.

ತುರುವೇಕೆರೆ: ತಾಲೂಕಿನ ವಾಸಿಯಾದ ರವಿಕುಮಾರ್ ಬಿ ಎಸ್ ಬಿನ್ ಸಿದ್ದೇಗೌಡ ಎಂಬುವರ ಜಮೀನಿನಲ್ಲಿದ್ದ ಸುಮಾರು ಮೂರು ಸಾವಿರ ರೂ ಬೆಲೆ ಬಾಳುವ ಗಂಧದ ಮರಗಳ ಕಳ್ಳತನವಾಗಿದ್ದು ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಆಕ್ಟ್ ಕಲಂ 303(2) ಪ್ರಕಾರ ಪ್ರಕರಣ ದಾಖಲಾಗಿದ್ದು, ಪ್ರಕರಣದ ಬೆನ್ನೆಟ್ಟಿದ ಪೊಲೀಸರು ಕೊನೆಗೂ ಗಂಧದ ಮರ ಕಳ್ಳರನ್ನು ತಾಲೂಕಿನ ಗೋಣಿ ತುಮಕೂರು ಗ್ರಾಮದಲ್ಲಿ ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

 

ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಗಂಧದ ಮರ ಕಳ್ಳತನ ಮಾಡುವವರ ಬಂಧನಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಕುಣಿಗಲ್ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕರಾದ ಓಂ ಪ್ರಕಾಶ್ ರವರ ಮಾರ್ಗಸೂಚನೆ ಮೇರೆಗೆ ತುರುವೇಕೆರೆ ಸಿ ಪಿ ಐ ಲೋಹಿತ್, ಪಿಎಸ್ಐ ಮೂರ್ತಿ ಟಿ. ಪಿಎಸ್ಐ ಮೂರ್ತಿ ಕೆ ವಿ. ಹಾಗೂ ಸಿಬ್ಬಂದಿಗಳಾದ ರಾಜಕುಮಾರ ವಗ್ಗೇರಿ, ನವೀನ್ ಕುಮಾರ್ ಡಿವಿ, ಒಳಗೊಂಡಂತೆ ಅಪರಾಧ ಪತ್ತೆ ತಂಡವನ್ನು ರಚಿಸಿ ಪ್ರಕರಣದಲ್ಲಿ ಭಾಗಿಯಾಗಿದ್ದ ಗಂಧದ ಮರ ಕಳ್ಳರಾದ ತುರುವೇಕೆರೆ ತಾಲೂಕಿನ,

 

 

ಹೊಸಹಳ್ಳಿ ಗ್ರಾಮದ ಹನುಮಂತಯ್ಯ ಬಿನ್ ಸಿದ್ದಯ್ಯ (50) ,ಹೇಮಂತ್ ಬಿನ್ ಲೇಟ್ ತಿಮ್ಮಯ್ಯ (40) ಹಾಗೂ ಕುಣಿಗಲ್ ತಾಲೂಕಿನ ಯಡಿಯೂರು ಹೋಬಳಿ ಚಾಕೇನಹಳ್ಳಿ ಗ್ರಾಮದ ಮಂಜುನಾಥ ಬಿನ್ ಲೇಟ್ ಕಾಳಶೆಟ್ಟಿ(41) ಮತ್ತು ಶಿರಾ ತಾಲೂಕಿನ ಶಿರಾ ಟೌನ್ ಮೇಗಳಪೇಟೆ ವಾಸಿ ಚಾದ್ರಿ ರುಹುಲ್ಲ ಬಿನ್ ಲೇಟ್ ಚಾದ್ರಿ ಬಸೀರ್ ಸಾಬ್ (57) ವರ್ಷ ದ ನಾಲ್ಕು ಜನರನ್ನು ಮಾಲು ಸಮೇತ ವಶ ಪಡಿಸಿಕೊಂಡಿದ್ದು, ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಸಿಬ್ಬಂದಿ ವರ್ಗಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ ವಿ ರವರು ಪ್ರಶಂಸಿದ್ದಾರೆ.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.


ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *