Document

Turuvekere: ದಲಿತ ಹೋರಾಟಗಾರ ಬಂದಕುಂಟೆ ನಾಗರಾಜುರವರ ನುಡಿ ನಮನ.

JANATAA24 NEWS DESK 

 

 

Turuvekere: ದಲಿತ ಹೋರಾಟಗಾರ ಬಂದಕುಂಟೆ ನಾಗರಾಜುರವರ ನುಡಿ ನಮನ.

Turuvekere: A tribute to Dalit activist Bandakunte Nagaraju.

ತುರುವೇಕೆರೆ: ಪಟ್ಟಣದ ಹೃದಯ ಭಾಗದಲ್ಲಿರುವ ಕನ್ನಡ ಭವನದಲ್ಲಿ ಇತ್ತೀಚೆಗಷ್ಟೇ ದೈವಾಧೀನರಾದ ತುಮಕೂರು ಜಿಲ್ಲೆಯ ಹಿರಿಯ ದಲಿತ ಸಂಘರ್ಷ ಸಮಿತಿಯ ಸಂಚಾಲಕರು, ಹೋರಾಟಗಾರರು, ಶಿಕ್ಷಕರಾಗಿದ್ದ ಬಂದಕುಂಟೆ ನಾಗರಾಜುರವರ ನುಡಿ ನಮನ ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊಫೆಸರ್ ಬಿ ಕೃಷ್ಣಪ್ಪನವರ ಸ್ಥಾಪಿತ ಮತ್ತು ಆದಿ ಜಾಂಬವ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಲಾಗಿತ್ತು, ಇದೇ ವೇಳೆ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನ ಶಿವರ ಕುಮಾರ್ ಮಾತನಾಡಿ ಬಂದಕುಂಟೆ ನಾಗರಾಜಯ್ಯನವರು ಡಾ. ಬಿಆರ್ ಅಂಬೇಡ್ಕರ್ ರವರ ಹೋರಾಟದ ರಥವನ್ನು ತುಮಕೂರು ಜಿಲ್ಲೆಯಲ್ಲಿ ಮುಂದಕ್ಕೆ ಎಳೆದ ಅನೇಕ ಸಾಮಾಜಿಕ ಹೋರಾಟಗಾರರ ಸಾಲಿನಲ್ಲಿ ಅಗ್ರಸ್ಥಾನದಲ್ಲಿದ್ದರು ತುಮಕೂರು ಜಿಲ್ಲೆಯಲ್ಲಿ ಅನೇಕ ಚಳುವಳಿಗಳನ್ನು ರೂಪಿಸಿದ ಅವರು ತಮ್ಮ ಬದುಕಿನ ಅನುಭವದ ಕಥನವನ್ನು ಬಿತ್ತನೆ ಬೀಜ ಎಂಬ ಕೃತಿಯನ್ನು ಬರೆದು ಪ್ರಕಟಿಸುವ ಮೂಲಕ ದಲಿತ ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ.

 

 

ದಿವಂಗತರು ಅಗಲಿಕೆಯಿಂದ ಪ್ರಗತಿಪರ ಹೋರಾಟದ ಒಂದು ಪ್ರಮುಖ ಕೊಂಡಿ ಕಳಚಿದಂತಹಾಗಿದೆ, ಅದು 70ರ ದಶಕದ ತಳ ಸಮುದಾಯಗಳು ಸಾಮಾಜಿಕ ದಬ್ಬಾಳಿಕೆಗೆ ಸಿಲುಕಿ ನರಳುತ್ತಿದ್ದ ಸಂಕಟದ ದಿನಗಳಲ್ಲಿ ಅಂಗೈಯಲ್ಲಿ ಹೋರಾಟ ದೀಪ ಹಿಡಿದು ಉರಿಯುವ ತೇಜೋಮಯ ಬೆಳಕಿನಲ್ಲಿ ಅಂಬೇಡ್ಕರ್ ಅವರ ಹೋರಾಟದ ರಥವನ್ನು ಕರ್ನಾಟಕದಲ್ಲಿ ಮುನ್ನಡೆಸುವ ಹೊಣೆ ಹೊತ್ತಿದ್ದು ಹೌದು. ದಲಿತ ಸಂಘರ್ಷ ಸಮಿತಿ ಬಾಬಾ ಸಾಹೇಬರ ಸಾಮಾಜಿಕ ನ್ಯಾಯದ ಹೋರಾಟದ ಮುಂದುವರೆದ ಭಾಗವಾಗಿ ಹುಟ್ಟಿದ ದಲಿತ ಸಂಘರ್ಷ ಸಮಿತಿ ಬುದ್ಧ ಗುರುವಿನ ದಮ್ಮ ಮತ್ತು ವಚನ ಚಳುವಳಿಯ ಸಮಾನತ ತತ್ವದ ಆಶಯಗಳನ್ನು ಧಾರಣೆ ಮಾಡಿಕೊಂಡು ಮುನ್ನಡೆಸಿದ್ದರು ಇದರ ಜೊತೆಗೆ ಅಂಬೇಡ್ಕರ್ ಅವರ ಹೋರಾಟದ ರಥದ ದಾರಿಗೆ ಕಣ್ ಬೆಳಕು ನೀಡುವ ದಾರಿ ದೀಪವನ್ನು ಮೊಟ್ಟ ಮೊದಲಿಗೆ ದಲಿತರ ಜೋಪಡಿಗಳಲ್ಲಿ ತನ್ನದೇ ನರದ ಬತ್ತಿ ಹೊಸದು ನೆತ್ತರಣ್ಣೆ ಎರೆದು ಹಚ್ಚಿಟ್ಟ ತಾಯಿಯಾಗಿ ಪ್ರೊಫೆಸರ್ ಬಿ ಕೃಷ್ಣಪ್ಪ ರವರು ಕೂಡ ಕಾಣಿಸುತ್ತಾರೆ.

 

 

ಇದಲ್ಲದೆ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಾದ ಬಿ ಕೃಷ್ಣಪ್ಪನವರ ಎಗಲಿನೊಂದಿಗೆ ಹೆಗಲುಕೊಟ್ಟು ಬಾಬಾ ಸಾಹೇಬರ ಹೋರಾಟದ ರಥವನ್ನು ದೇವನೂರು ಮಹಾದೇವ, ದೇವಯ್ಯ ಹರವೇ, ಹೆಚ್ ಗೋವಿಂದಯ್ಯ, ಕೋಟಿಗಾನಹಳ್ಳಿ ರಾಮಯ್ಯ, ಹಿಂದೂದರ ಹೊನ್ನಾಪುರ, ಕವಿ ಡಾ, ಸಿದ್ದಲಿಂಗಯ್ಯ, ಎನ್ ವೆಂಕಟೇಶ್, ಎನ್ ಮುನಿಸ್ವಾಮಿ, ಕೆ ನಾರಾಯಣಸ್ವಾಮಿ, ಕೆಬಿ ಸಿದ್ದಯ್ಯ ಇನ್ನು ಮುಂತಾದ ಅಸಂಖ್ಯಾತ ಕಾರ್ಯಕರ್ತರು ಕರ್ನಾಟಕ ರಾಜ್ಯಾದ್ಯಂತ ಮುಂದಕ್ಕೆ ರಥವನ್ನು ಎಳಿಯುತ್ತಿದ್ದರು ಇಂತಹ ಹೊತ್ತಿನಲ್ಲಿ ಆ ರಥವನ್ನು ತುಮಕೂರು ಜಿಲ್ಲೆಗೆ ಎಳೆದು ತರುವ ಸಾರಥ್ಯ ವಹಿಸಿದ ಅನೇಕ ಹೋರಾಟಗಾರರ ಪೈಕಿ ಬಂದ ಕುಂಟೆ ನಾಗರಾಜಯ್ಯನವರು ಅಗ್ರಸ್ಥಾನದಲ್ಲಿದ್ದರು ಎಂದು ನೆನಪಿಸಿದರು. ಇದಾದ ಬಳಿಕ ತುರುವೇಕೆರೆ ತಾಲೂಕಿನ ಹಿರಿಯ ದಲಿತ ಹೋರಾಟಗಾರ ವಿ ಟಿ ವೆಂಕಟರಾಮು ಮಾತನಾಡಿ,

 

ಕರ್ನಾಟಕದಲ್ಲಿ ದಲಿತ ಎಂಬ ಪದ 1970ರ ಮೊದಲಿಗೆ ಅಷ್ಟಾಗಿ ಚಾಲ್ತಿಯಲ್ಲಿ ಇರಲಿಲ್ಲ ದಲಿತ ಸಂಘರ್ಷ ಸಮಿತಿಯ ಹುಟ್ಟಿನೊಂದಿಗೆ ದಲಿತ ಎಂಬ ಪದ ನಮಗೆ ಪರಿಚಯವಾಗತೊಡಗಿತು ಮರಾಠಿ ಭಾಷೆಯ ಈ ಶಬ್ದದ ಅರ್ಥವನ್ನು ಎಲ್ಲಾ ಧರ್ಮೀಯ ಎಲ್ಲಾ ಜಾತಿಗಳ ಶೋಷಿತರ ಸಂಕಟವನ್ನು ಪರಿಭಾವಿಸಲು ಹೋಲಿಸ್ಟಿಕ್ ಗತಿತಾರ್ಕಿಕತೆಯಲ್ಲಿ ವಿಸ್ತರಿಸಿ ವಿವರಿಸಿಕೊಳ್ಳಬೇಕಾಗಿದ್ಧ ಸನ್ನಿವೇಶವಿದ್ದ ಆ ದಿನಗಳಲ್ಲಿ ಪ್ರೊಫೆಸರ್ ಬಿ ಕೃಷ್ಣಪ್ಪನವರ ಅಂಬೇಡ್ಕರ್ ಪ್ರಣಿತ ವೈಚಾರಿಕ ಚಿಂತನೆಗಳು, ಕಾಲೇಜು ವಿದ್ಯಾರ್ಥಿಯಾಗಿದ್ದ ಬಂದ ಕುಂಟೆ ನಾಗರಾಜಯ್ಯನವರ ಎದೆಯಲ್ಲಿಯೂ ಪ್ರಾಣ ಸಂಚಾರಗೊಂಡವು, ಇದರ ಜೊತೆಗೆ ಬುದ್ಧಗುರು, ಬಸವಣ್ಣ, ಪೆರಿಯಾರ್, ಜ್ಯೋತಿಬಾಪುಲೆ, ಅಂಬೇಡ್ಕರ್ ಮುಂತಾದ ದಾರ್ಶನಿಕರ ವಿಚಾರಧಾರೆಗಳ ಪ್ರಾಣ ಪ್ರಜ್ಞೆಯನ್ನು ಉಸಿರಾಗಿಸಿಕೊಂಡು ಸಾಗಿದ ದಸಂಸದ ಪ್ರಗತಿಪರ ಚಿಂತನೆಗಳು ಯುವ ವಿದ್ಯಾರ್ಥಿಯಾಗಿದ್ದ ನಾಗರಾಜಯ್ಯನವರ ಕೊರಳಿಗೆ ಶೋಷಣೆಯ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡುವಂತಾಗಿ ದಸಂಸದ ಸಾಮಾಜಿಕ ಬದ್ಧತೆ ಮತ್ತು ಕಾಳಜಿಗಳು ಬಂದ ಕುಂಟೆ ನಾಗರಾಜಯ್ಯನವರ ಎದೆಗೆ ಧೈರ್ಯ ತುಂಬಿದವು ಇದರ ಫಲಿತವಾಗಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬಂದಕುಂಟೆ ಗ್ರಾಮದಲ್ಲಿ ನಾಗರಾಜಯ ಎಂಬ ಹೋರಾಟಗಾರನೊಬ್ಬ ರೂಪಗೊಂಡನು ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಪರ ಸಂಘಟನೆಗಳ ಹೋರಾಟಗಾರರು ದಲಿತಪರ ಸಂಘಟನೆಗಳ ಹೋರಾಟಗಾರರು ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ವರದಿ: ಮಂಜುನಾಥ್ ತುರುವೇಕೆರೆ.

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

 

Document

Leave a Reply

Your email address will not be published. Required fields are marked *