Tumkur: ಧಾರಾಕಾರ ಮಳೆ, ವಾಹನ ಸವಾರರ ಪರದಾಟ.
ಗುಬ್ಬಿ : ಧಾರಾಕಾರ ಮಳೆಗೆ ರಸ್ತೆಯ ಬದಿಯ ಚರಂಡಿ ನೀರು ರಸ್ತೆಗೆ ನುಗ್ಗಿ ವಾಹನ ಸವಾರರು ವಾಹನ ಚಲಾಯಿಸಲು ಹರಸಹಾಸ ಪಟ್ಟು ದ್ವಿಚಕ್ರ ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ಘಟನೆ ನಡೆಯಿತು.
ತಾಲೂಕಿನ ಹೃದಯ ಭಾಗವಾದ ನಿಟ್ಟೂರಿನಲ್ಲಿ ಮಧ್ಯಾಹ್ನ ಸುರಿದ ಬಾರಿ ಮಳೆಗೆ ಬೆಂಗಳೂರು ಮತ್ತು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206 ಕ್ಕೆ ಹೊಂದಿಕೊಂಡಂತೆ ಇರುವ ಬೆಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದ್ದು ಸರ್ವಿಸ್ ರಸ್ತೆ(Service Road)ಯು ಸಹ ತುಂಬಾ ಕಿರಿದಾಗಿದ್ದು ಸರ್ವಿಸ್ ರಸ್ತೆಯ ಚರಂಡಿ ನೀರು ರಸ್ತೆಗೆ ನುಗ್ಗುತ್ತಿದ್ದು ವಾಹನ ಸವಾರರು ವಾಹನ ಚಲಾಯಿಸಲು ಅರಸಹಸ ಪಡುವಂತಾಯಿತು.
ನಿಟ್ಟೂರು ಬಸ್ ನಿಲ್ದಾಣವು(Bus Stand) ಸಹ ತುಂಬಾ ಕಿರಿದಾಗಿದ್ದು ಬೆಂಗಳೂರು ಮತ್ತು ಶಿವಮೊಗ್ಗ ಮಾರ್ಗವಾಗಿ ಹಾಗೂ ರಾಷ್ಟ್ರೀಯ ಹೆದ್ದಾರಿ 04 ರಿಂದ ಮೈಸೂರು ಮಾರ್ಗವಾಗಿ ಸಂಚರಿಸುವ ಈ ಭಾಗವು ಕೇಂದ್ರಬಿಂದುವಾಗಿದೆ.
ಈ ಮಾರ್ಗವಾಗಿ ದಿನನಿತ್ಯ ಸಾವಿರಾರು ಬೃಹತ್ ವಾಹನಗಳು ಸಂಚರಿಸುತ್ತಿದ್ದು ಪಾದಾಚಾರಿಗಳು ಸಹ ರಸ್ತೆ ದಾಟಲು ಪರದಾಟ ನಡೆಸುತ್ತಿರುವ ಪರಿಸ್ಥಿತಿ ಉಂಟಾಗಿದೆ.
ಸಂಬಂಧಪಟ್ಟ ಇಲಾಖೆಯು ಕೂಡಲೇ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ರಸ್ತೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಗೆ ಇಡೀ ಶಾಪ ಹಾಕಿದ ಘಟನೆ ನಡೆಯಿತು.
ಸರ್ವಿಸ್ ರಸ್ತೆ ಮತ್ತು ಮೇಲ್ ಸೇತುವೆ ಕಾಮಗಾರಿಯು ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ಕೂಡಿದ್ದು ವಾಹನ ಸವಾರರಿಗೆ ಶಾಪವಾಗಿ ಕಾಡುತ್ತಿದೆ.
ಹೇಳಿಕೆ: ನಿಟ್ಟೂರು ಜಗನ್ನಾಥ್ ಸ್ಥಳಿಯರು.
ನಿಟ್ಟೂರು ಮೇಲ್ ಸೇತುವೆ ಕಾಮಗಾರಿಯು ಕಳೆದ ಎರಡು ವರ್ಷಗಳಿಂದ ನಿರ್ಮಾಣ ಮಾಡುತ್ತಿದ್ದು ಸಂಬಂಧಪಟ್ಟ ಇಂಜಿನಿಯರ್ ಮತ್ತು ಗುತ್ತಿಗೆದಾರರು ಕಳಪೆ ಕಾಮಗಾರಿ ನಿರ್ಮಾಣ ಮಾಡುತ್ತಿದ್ದಾರೆ.
ಹೇಳಿಕೆ: ಸಾಗರನಹಳ್ಳಿ ವಿಜಯಕುಮಾರ್ ಸ್ಥಳೀಯ ಮುಖಂಡರು.
ರಾಷ್ಟ್ರೀಯ ಹೆದ್ದಾರಿ 206ರ(NH 206) ರಸ್ತೆಯ ಚರಂಡಿಯು ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ಕೂಡಿದ್ದು ಚರಂಡಿಯ ನೀರು ರಸ್ತೆಗೆ ಹರಿಯುತ್ತಿರುವುದು ಇಂಜಿನಿಯರ್(Engineer) ಮತ್ತು ಗುತ್ತಿಗೆದಾರರ ಅವೈಜ್ಞಾನಿಕ ಕೆಲಸವು ಸಾರ್ವಜನಿಕರ ಮುಂದೆ ಎದ್ದು ಕಾಣುತ್ತಿದೆ.
ಹೇಳಿಕೆ: ನಿಟ್ಟೂರು ಪಾಪಣ್ಣ ಸ್ಥಳಿಯರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://www.janataa24.com/turuvekere-jds-leader-turuvekere-challenged-the-gubb