Tumkur: ನಕಲಿ & ಕಳಪೆ ನರೇಗಾ ಕಾಮಗಾರಿ ವಿರುದ್ಧ ಸಿಡಿದೆದ್ದ ಮಾಜಿ ಶಾಸಕ ಗೌರಿ ಶಂಕರ್.

ತುಮಕೂರು ತಾಲ್ಲೂಕು, ಊರ್ಡಿಗೆರೆ ಹೋಬಳಿ, ಸೀತಕಲ್ಲು ಗ್ರಾಮಪಂಚಾಯಿತಿ ವ್ಯಾಪ್ತಿಗೆ ಸೇರಿದ ಕಾಳೇನಹಳ್ಳಿ ಗ್ರಾಮ ಸ.ನಂ. 31 ಮತ್ತು ದ್ಯಾಪೇನಹಳ್ಳಿ ಗ್ರಾಮದ ಸ.ನಂ. 42ರ ಗಡಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ
ಈ ಕಾಮಗಾರಿಯು ನರೇಗಾ ಯೋಜನೆಯಡಿಯಲ್ಲಿ ಅನುಷ್ಟಾನಗೊಂಡಿದ್ದು, ಇದಕ್ಕೆ ಬಳಿಸಿದ ಕೂಲಿ ಕಾರ್ಮಿಕರ ವಿವರಗಳು ಸುಳ್ಳಾಗಿದ್ದು, ಕಾಮಗಾರಿಯನ್ನು ಯಂತ್ರದ ಸಹಾಯಕ ನೇರವೇರಿಸಿರುತ್ತಾರೆ. ಯಾವುದೇ ಕೂಲಿ ಕಾರ್ಮಿಕರನ್ನು ಬಳಕೆ ಮಾಡಿರುವುದಿಲ್ಲ. ಜಾಬ್ ಕಾರ್ಡ್‌ನಲ್ಲಿ ತೋರಿಸಿರುವ ಕೂಲಿ ಕಾರ್ಮಿಕರ ದಾಖಲಾತಿಗಳನ್ನು ಅಕ್ರಮವಾಗಿ ಸೃಷ್ಟಿಸಲಾಗಿದೆ.
ತುಮಕೂರು ತಾಲ್ಲೂಕು, ಊರ್ಡಿಗೆರೆ ಹೋಬಳಿ, ಸೀತಕಲ್ಲು ಗ್ರಾಮಪಂಚಾಯಿತಿ ವ್ಯಾಪ್ತಿಗೆ ಸೇರಿದ ಕಾಳೇನಹಳ್ಳಿ ಗ್ರಾಮದಲ್ಲಿ ಸ್ಮಶಾನ ನಿರ್ಮಾಣ ಕಾಮಗಾರಿ.
ಈ ಕಾಮಗಾರಿಯು ನರೇಗಾ ಯೋಜನೆಯಡಿಯಲ್ಲಿ ಅನುಷ್ಟಾನಗೊಂಡಿದ್ದು, ಇದಕ್ಕೆ ಬಳಿಸಿದ ಕೂಲಿ ಕಾರ್ಮಿಕರ ವಿವರಗಳು ಸುಳ್ಳಾಗಿದ್ದು, ಕಾಮಗಾರಿಯನ್ನು ಯಂತ್ರದ ಸಹಾಯಕ ನೇರವೇರಿಸಿರುತ್ತಾರೆ. ಯಾವುದೇ ಕೂಲಿ ಕಾರ್ಮಿಕರನ್ನು ಬಳಕೆ ಮಾಡಿರುವುದಿಲ್ಲ. ಜಾಬ್ ಕಾರ್ಡ್ ನಲ್ಲಿ ತೋರಿಸಿರುವ ಕೂಲಿ ದಾಖಲಾತಿಗಳನ್ನು ಅಕ್ರಮವಾಗಿ ಸೃಷ್ಟಿಸಲಾಗಿದೆ.
ತುಮಕೂರು ತಾಲ್ಲೂಕು, ಊರ್ಡಿಗೆರೆ ಹೋಬಳಿ, ಸೀತಕಲ್ಲು ಗ್ರಾಮಪಂಚಾಯಿತಿ ವ್ಯಾಪ್ತಿಗೆ ಸೇರಿದ ದ್ಯಾಪೇನಹಳ್ಳಿ ಗ್ರಾಮದ ಸ್ಮಶಾನದ ಕಾಮಗಾರಿ
ಈ ಕಾಮಗಾರಿಯನ್ನು ನರೇಗಾ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿದ್ದು, ಈ ಕಾಮಗಾರಿಯು ನರೇಗಾ ಯೋಜನೆಯಡಿಯಲ್ಲಿ ಅನುಷ್ಟಾನಗೊಂಡಿದ್ದು, ಇದಕ್ಕೆ ಬಳಿಸಿದ ಕೂಲಿ ಕಾರ್ಮಿಕರ ವಿವರಗಳು ಸುಳ್ಳಾಗಿದ್ದು, ಕಾಮಗಾರಿಯನ್ನು ಯಂತ್ರದ ಸಹಾಯಕ ನೇರವೇರಿಸಿರುತ್ತಾರೆ. ಯಾವುದೇ ಕೂಲಿ ಕಾರ್ಮಿಕರನ್ನು ಬಳಕೆ ಮಾಡಿರುವುದಿಲ್ಲ. ಜಾಬ್ ಕಾರ್ಡ್‌ನಲ್ಲಿ ತೋರಿಸಿರುವ ಕೂಲಿ ಕಾರ್ಮಿಕರ ದಾಖಲಾತಿಗಳನ್ನು ಅಕ್ರಮವಾಗಿ ಸೃಷ್ಠಿಸಲಾಗಿದೆ. ಈ ಕಾಮಗಾರಿಯನ್ನು ಮಾಡುವ ಜಾಗವನ್ನು ಈ ಹಿಂದೆ ಗುರುತಿಸಲಾಗಿದ್ದು, ಗುರುತಿಸುವ ಜಾಗದಲ್ಲಿ ಕಾಮಗಾರಿಯನ್ನು ಅನುಷ್ಠಾನಗೊಳಿಸದೇ ಬೇರೆ ಜಾಗದಲ್ಲಿ ಅನುಷ್ಠಾನಗೊಳಿಸಿರುತ್ತಾರೆ.
ಆದ್ದರಿಂದ ದಯಮಾಡಿ ತಾವುಗಳು ಖುದ್ದು ಸ್ಥಳ ತನಿಖೆ ಮಾಡಿಸಿ, ದಾಖಲಾತಿಗಳನ್ನು ಪರಿಶೀಲಿಸಿ, ಮೇಲ್ಕಂಡ ಮೂರು ಕಾಮಗಾರಿಗಳಲ್ಲಿ ಆಗಿರುವ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳ ಮತ್ತು ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಕಾಮಗಾರಿಗೆ ಸರ್ಕಾರದ ವತಿಯಿಂದ ನೀಡಲಾಗಿರುವ ಕಾಮಗಾರಿ ಮೊತ್ತವನ್ನು ಸರ್ಕಾರದ ವಶಕ್ಕೆ ಪಡೆಯಲು ಹಾಗೂ ಕಾಮಗಾರಿಗೆ ನೀಡಬೇಕಾದ ಹಣ ಬಾಕಿ ಇದ್ದಲ್ಲಿ ಕಾಮಗಾರಿ ಮೊತ್ತವನ್ನು ಮಂಜೂರು ಬಾರದಾಗಿ ತಮ್ಮಲ್ಲಿ ಪ್ರಾರ್ಥನೆ. ಹಾಗೂ ಕಾಮಗಾರಿಗಳ ಛಾಯಚಿತ್ರ, ಹಾಗೂ ಸಂಬಂಧಪಟ್ಟ ದಾಖಲಾತಿಗಳನ್ನು ಲಗತ್ತಿಸಿ ತಮ್ಮ ಅವಗಾಹನೆಗೆ ಸಲ್ಲಿಸಿದೆ.
ಎಂದು ಮಾಜಿ ಶಾಸಕ ಗೌರಿಶಂಕರ್ ರವರು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ದೂರನ್ನು ನೀಡಿರುತ್ತಾರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.