Document

Tumkur: ಎಸ್ ಸಿ ಎಸ್ ಪಿ / ಟಿ ಎಸ್ ಪಿ ಕಾಯ್ದೆ ಸೆಕ್ಷನ್- 7(ಸಿ) ರದ್ದುಗೊಳಿಸಿ, ಹಲವು ಬೇಡಿಕೆಗಳೊಂದಿಗೆ ಡಿಎಸ್ಎಸ್ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ. 

JANATAA24 NEWS DESK 

 

 

Tumkur: ಎಸ್ ಸಿ ಎಸ್ ಪಿ / ಟಿ ಎಸ್ ಪಿ ಕಾಯ್ದೆ ಸೆಕ್ಷನ್- 7(ಸಿ) ರದ್ದುಗೊಳಿಸಿ, ಹಲವು ಬೇಡಿಕೆಗಳೊಂದಿಗೆ ಡಿಎಸ್ಎಸ್ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ.

 

ತುಮಕೂರು:  ಜಿಲ್ಲಾಧಿಕಾರಿಯ ಕಚೇರಿಯ ಮುಂಭಾಗ 2026 -27 ನೇ ಸಾಲಿನ ಬಜೆಟ್ ನಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ದ ಜನಸಂಖ್ಯೆಗೆ ಅನುಗುಣವಾಗಿ ಶೇಕಡ 24.1 ರಷ್ಟು ಅನುದಾನ ಮೀಸಲಿರಿಸಿ ಹಾಗೂ ದುರ್ಬಳಿಕೆ ತಡೆಯಲು ಎಸ್‌ ಸಿ ಎಸ್ ಪಿ ಮತ್ತು ಟಿ ಎಸ್ ಪಿ ಕಾಯ್ದೆ ಸೆಕ್ಷನ್- 7 (ಸಿ)ರದ್ದುಪಡಿಸುವಂತೆ.

 

ಹಾಗೂ ವಿವಿಧ ಬೇಡಿಕೆಗಳಿಗೆ ನ್ಯಾಯ ಒದಗಿಸುವಂತೆ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಯವರ ಮುಖಾಂತರ ಮುಖ್ಯಮಂತ್ರಿಗಳಿಗೆ ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ,ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ವತಿಯಿಂದ ಮನವಿಯನ್ನು ಮಾಡಲಾಯಿತು, ಜಿಲ್ಲಾ ಸಂಚಾಲಕ ನಾಗತಿಹಳ್ಳಿ ಕೃಷ್ಣಮೂರ್ತಿ ಮತ್ತು ಜಿಲ್ಲಾ ಸಂಘಟನಾ ಸಂಚಾಲಕ (ಆಂತರಿಕ ಶಿಸ್ತು ಭದ್ರತ) ದಂಡಿನ ಶಿವರ ಕುಮಾರ್ ನೇತೃತ್ವದಲ್ಲಿ ತುಮಕೂರು ಜಿಲ್ಲಾಧಿಕಾರಿಯವರ ಕಚೇರಿಯ ಮುಂಬಾಗ ಜಿಲ್ಲೆಯ 10 ತಾಲೂಕುಗಳ ಸಂಘಟನೆಯ ಸಂಚಾಲಕರಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು ಇದೇ ವೇಳೆ ಪ್ರತಿಭಟನಾಕಾರರು ಘೋಷಣೆ ಕೂಗುತ್ತಾ,

 

ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಭೂ ಪರಬಾರೆ ನಿಷೇಧ ಕಾಯ್ದೆ, ಗೃಹ ಭಾಗ್ಯ ಯೋಜನೆ ಅಡಿ ವಸತಿ ಸೌಲಭ್ಯ, ಚುನಾಯಿತ ಪ್ರತಿನಿಧಿಗಳಿಗೆ ಹೆಚ್ಚಿಸಿದಂತೆ ದೇವದಾಸಿ, ವಿಧವಾ ಮಹಿಳೆಯರಿಗೆ ಮಾಸಿಕ ವೇತನ ಹೆಚ್ಚಳ, ನಿವೇಶನ ರಹಿತರಿಗೆ ನಿವೇಶನ ಒದಗಿಸುವಿಕೆ, ಸಮಾಜ ಕಲ್ಯಾಣ ಇಲಾಖೆ ಅದೀನದಲ್ಲಿನ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಆರ್ಥಿಕ ಅಭಿವೃದ್ಧಿ ಕುರಿತು, ಇನ್ನು ಹಲವು ಹಕ್ಕೋತ್ಹಾಯಗಳೊಂದಿಗೆ ಹಾಗೂ ಎಸ್ ಸಿ ಎಸ್ ಪಿ ಮತ್ತು ಟಿ ಎಸ್ ಪಿ ಅನುದಾನವನ್ನ ನಿಯಮ ಭಾಹಿರವಾಗಿ ಗ್ಯಾರೆಂಟಿ ಯೋಜನೆಗೆ ವರ್ಗಾಯಿಸಿರುವ 25000 ಕೋಟಿ ಹಣವನ್ನು ಹಿಂತಿರುಗಿಸುವಂತೆ,

 

ಹಾಗೂ ಸಂವಿಧಾನದ ರಾಜ್ಯ ನಿರ್ದೇಶೀತ ತತ್ವಗಳ ಪರಿಚ್ಛೇದ 37 ಮತ್ತು 46 ರಲ್ಲಿ ಶೋಷಿತ ಸಮುದಾಯಗಳನ್ನು ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಬಲೀಕರಣ ಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಂಡಿಸುವ ಒಟ್ಟು ಬಜೆಟ್ ಗಾತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡಲು ಸೂಚಿಸಿದೆ ಮೀಸಲಿರಿಸಿದ ಅನುದಾನವನ್ನು ರದ್ದಾಗದಂತೆ ಮತ್ತು ಇತರೆ ಯೋಜನೆಗಳಿಗೆ ವರ್ಗಾಯಿಸದಂತೆ ಉದ್ದೇಶಿತ ಯೋಜನೆಗಳಿಗೆ ಬಳಕೆಯಾಗಬೇಕೆಂದು ನಿರ್ದೇಶನ ನೀಡಿದ್ದು,

 

ಆದರೆ 2023 ರಿಂದ ಈವರೆಗೂ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತದ ಅವಧಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಎಸ್ ಸಿ ಎಸ್ ಪಿ/ ಟಿ ಎಸ್ ಪಿ ಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನವನ್ನು ಏಕ ಪಕ್ಷಿಯವಾಗಿ ಸುಮಾರು 25 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುವ ಮೂಲಕ ಅವಕಾಶ ವಂಚಿತ ಪರಿಶಿಷ್ಟ ಜಾತಿಗಳಿಗೆ ವಂಚನೆ ಮಾಡಿದೆ ಎಂಬ ಮನವಿಯೊಂದಿಗೆ ಒತ್ತಾಯಿಸಿ ಪ್ರತಿಭಟಿಸಿದರು, ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಯವರಿಗೆ ಮನವಿಯ ವಿವರಣೆಯನ್ನು ನೀಡಿ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿ ಮುಖಾಂತರ ಮನವಿಯನ್ನ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕಿ ಲಾವಣ್ಯ ಗುಬ್ಬಿ, ಜಿಲ್ಲಾ ಸಂಘಟನಾ ಸಂಚಾಲಕ ನಾಗರಾಜು ಉಪ್ಪಾರಹಳ್ಳಿ, ಜಿಲ್ಲಾ ಸಂಘಟನಾ ಸಂಚಾಲಕ ನರಸಿಂಹಪ್ಪ ಪಳವಳ್ಳಿ , ಹಾಗೂ ಜಿಲ್ಲೆಯ 10 ತಾಲೂಕಿನ ಎಲ್ಲಾ ಸಂಚಾಲಕರು ಸಂಘಟನಾ ಸಂಚಾಲಕರುಗಳು ಈ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

 

ವರದಿ: ಮಂಜುನಾಥ್ 

K kumar Balaji Seva Trust Janataa24.com
Kn rajanna Madhugiri MLA janataa24.com

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *