JANATAA24 NEWS DESK
Trekking: ಚಾರಣಕ್ಕೆ ಹೋಗಿದ್ದ ಕೇರಳ ಮೂಲದ ಮಹಿಳೆ ನಾಪತ್ತೆ.

ಮಡಿಕೇರಿ: ಕೊಡಗು ಜಿಲ್ಲೆಯ ಅತ್ಯಂತ ಎತ್ತರದ ಶಿಖರ ಎಂದೇ ಪ್ರಸಿದ್ಧವಾಗಿರೋ ತಡಿಯಾಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಕೇರಳದ ಶರಣ್ಯ (36) ನಾಪತ್ತೆಯಾದ ದುರ್ದೈವಿ. ಗುರುವಾರ ಬೆಳಿಗ್ಗೆಯಿಂದಲೇ ಕಾಣೆಯಾಗಿರುವ ಇವರ ಪತ್ತೆಗಾಗಿ ಈಗ ಜಿಲ್ಲಾ ಪೊಲೀಸ್ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಬೃಹತ್ ಶೋಧ ಕಾರ್ಯಾಚರಣೆ ಕೈಗೊಂಡಿವೆ.
ಗುರುವಾರ ಬೆಳಿಗ್ಗೆ ಅರಣ್ಯ ಇಲಾಖೆಯ ಅನುಮತಿ ಪಡೆದ ನಂತರ ಶರಣ್ಯ ಅವರು ಚಾರಣ ಆರಂಭಿಸಿದ್ದರು. ಅವರು ಏಕಾಂಗಿಯಾಗಿ ಬಂದಿದ್ದರಿಂದ, ಆ ಪ್ರದೇಶದಲ್ಲಿ ಕಾಡಾನೆಗಳ ಹಾವಳಿಯ ಬಗ್ಗೆ ಎಚ್ಚರಿಸಿದ್ದ ಅರಣ್ಯಾಧಿಕಾರಿಗಳು, ಇತರ ಚಾರಣಿಗರ ತಂಡದೊಂದಿಗೆ ಹೋಗುವಂತೆ ಸೂಚಿಸಿದ್ದರು. ಅದರಂತೆ ಅವರು ಇತರರೊಂದಿಗೆ ಬೆಟ್ಟ ಏರಿದ್ದರು. ಆದರೆ ಸಂಜೆ ಹೊತ್ತಿಗೆ ಎಲ್ಲ ಚಾರಣಿಗರು ಶಿಖರದಿಂದ ಕೆಳಗೆ ಹಿಂತಿರುಗಿದರೂ ಶರಣ್ಯ ಮಾತ್ರ ಬರಲಿಲ್ಲ. ಇದರಿಂದ ಆತಂಕಗೊಂಡ ಅಧಿಕಾರಿಗಳು ತಕ್ಷಣವೇ ಹುಡುಕಾಟ ಆರಂಭಿಸಿದರು.
ಚೆಕ್ ಪೋಸ್ಟ್‌ನಲ್ಲಿದ್ದ ಅರಣ್ಯ ಸಿಬ್ಬಂದಿ ಗುರುವಾರ ಸಂಜೆಯೇ ಕಾರ್ಯಪ್ರವೃತ್ತರಾಗಿ ಮಧ್ಯರಾತ್ರಿಯವರೆಗೂ ಬೆಟ್ಟದ ತಪ್ಪಲು ಮತ್ತು ಕಾಡಿನೊಳಗೆ ಹುಡುಕಾಟ ನಡೆಸಿದರು. ಆದಾಗ್ಯೂ, ಮಹಿಳೆಯ ಯಾವುದೇ ಸುಳಿವು ಪತ್ತೆಯಾಗಿಲ್ಲ. ಪ್ರದೇಶವು ದಟ್ಟ ಅರಣ್ಯದಿಂದ ಕೂಡಿದ್ದು, ಕಾಡು ಪ್ರಾಣಿಗಳ ಭೀತಿಯೂ ಇರುವುದರಿಂದ ರಾತ್ರಿಯ ಶೋಧ ಕಾರ್ಯವು ಅರಣ್ಯ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿತ್ತು.
ಶುಕ್ರವಾರ ಮುಂಜಾನೆಯೇ ಶೋಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಮಡಿಕೇರಿ ಡಿಸಿಎಫ್ ಅಭಿಷೇಕ್ ಮಾಹಿತಿ ನೀಡಿದಂತೆ, ಒಟ್ಟು ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ. ಇದರಲ್ಲಿ ಎರಡು ಪೊಲೀಸ್ ತಂಡಗಳು ಮತ್ತು ಅರಣ್ಯ ಇಲಾಖೆಯ ಮೂರು ತಂಡಗಳು ಸ್ಥಳೀಯರ ನೆರವಿನೊಂದಿಗೆ ಬೆಟ್ಟದ ಮೂಲೆ ಮೂಲೆಯನ್ನು ಜಾಲಾಡುತ್ತಿವೆ. ಶೋಧ ಕಾರ್ಯಕ್ಕಾಗಿ ಆಧುನಿಕ ಡ್ರೋನ್ ಕೆಮೆರಾಗಳು ಮತ್ತು ಶ್ವಾನ ದಳವನ್ನೂ ಬಳಸಲಾಗುತ್ತಿದೆ.
ಕೊಡಗು ಎಸ್ಪಿ ಬಿಂದು ಮಣಿ ಆರ್‌ಎನ್ ಅವರು ಮಾತನಾಡಿ, “ತಡಿಯಾಂಡಮೋಳ್ ಚಾರಣ ಮಾರ್ಗವು ಅಷ್ಟೊಂದು ಕಠಿಣವಾದುದಲ್ಲ, ಸಾಮಾನ್ಯವಾಗಿ 2-3 ಗಂಟೆಗಳಲ್ಲಿ ಯಾರೇ ಆದರೂ ಹಿಂತಿರುಗಬಹುದು. ಹೀಗಿದ್ದರೂ ಮಹಿಳೆ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಪಹರಣ ಸೇರಿದಂತೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಮಹಿಳೆಯ ಕುಟುಂಬದವರನ್ನು ಪತ್ತೆಹಚ್ಚಿ ಮಾಹಿತಿ ನೀಡಲಾಗಿದೆ,” ಎಂದು ತಿಳಿಸಿದ್ದಾರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.