Document

Bangalore: ಪತ್ನಿ ಕಿರುಕುಳಕ್ಕೆ ಬೇಸತ್ತು ಗೋಡೆ ಮೇಲೆ ಡೆತ್ ನೋಟ್ ಗೀಚಿ ಟೆಕ್ಕಿ ಸಾವು.

Janataa24 NEWS DESK

Bangalore: ಪತ್ನಿ ಕಿರುಕುಳಕ್ಕೆ ಬೇಸತ್ತು ಗೋಡೆ ಮೇಲೆ ಡೆತ್ ನೋಟ್ ಗೀಚಿ ಟೆಕ್ಕಿ ಸಾವು.

Bangalore Govindapura

ಬೆಂಗಳೂರು: ಮಡದಿಯ ಅಕ್ರಮ ಸಂಬಂಧಕ್ಕೆ ರೋಸಿ ಮನೆಯ ಗೋಡೆ ಮೇಲೆ ಡೆತ್‍ ನೋಟ್ ಬರೆದಿಟ್ಟು ಟೆಕ್ಕಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಘಟನೆ ಬೆಂಗಳೂರಿನ ಗೋವಿಂದಪುರ (Govindapuru) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಮೃತ ವ್ಯಕ್ತಿಯನ್ನು ಸೈಯ್ಯದ್ ಅಕ್ಮಲ್ ಅನ್ಸರ್ ಎಂದು ಖಚಿತ ಪಡಿಸಲಾಗಿದೆ. ಈ ಜೋಡಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

ಇಬ್ಬರು ಮಕ್ಕಳಾದ ನಂತರ ಮಹಿಳೆ ಬೇರೆ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ, ಗಂಡನಿಗೆ ನಿರಂತರ ಕಿರುಕುಳ ನೀಡುತ್ತಿದ್ದಳು. ಇದೇ ಕಾರಣಕ್ಕೆ ಮನ ನೊಂದು ಗೋಡೆಯ ಮೇಲೆ ತನ್ನ ಸಾವಿಗೆ ಕಾರಣರಾದವರ ಹೆಸರುಗಳನ್ನ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ. 7 ವರ್ಷಗಳ ಹಿಂದೆಯಷ್ಟೇ ಅಕ್ಮಲ್ ಅನ್ಸರ್‌ಗೆ ಮದುವೆಯಾಗಿತ್ತು.

ಮದುವೆಯಾದ ಹೊಸತನದಿಂದಲೂ ಇಬ್ಬರೂ ಚೆನ್ನಾಗಿಯೇ ಇದ್ದರು. ಮಕ್ಕಳಾದ ಬಳಿಕ, ಮೃತ ಅಕ್ಮಲ್ ಅನ್ಸರ್ ಮೇಲೆ ಅನುಮಾನ ಪಟ್ಟು ಪತ್ನಿ ನಿತ್ಯ ಹಿಂಸೆ ಕೊಡುತ್ತಿದ್ದಳು. ಅಷ್ಟೇ ಅಲ್ಲದೇ ಆಗಾಗ ಪತಿ ಬಳಿ ಹಣಕ್ಕೆ ಬೇಡಿಕೆ ಸಹ ಇಡುತ್ತಿದ್ದಳು. ಒಂದು ತಿಂಗಳ ಹಿಂದೆ ಗಲಾಟೆ ಮಾಡಿಕೊಂಡು ಗೋವಿಂದಪುರದ ಗಂಡನ ಮನೆಯಿಂದ ಬಿಟಿಎಂ ಲೇಔಟ್ ತಾಯಿ ಮನೆಗೆ ಬಂದಿದ್ದಳು ಎಂದು ತಿಳಿದು ಬಂದಿದೆ.

ಇದೇ ತಿಂಗಳು ಮಾ.11 ರಂದು ಅಕ್ಮಲ್ ಅನ್ಸರ್ ‍ನನ್ನು ಮನೆಗೆ ಕರೆಸಿಕೊಂಡು ಪತ್ನಿ ಹಾಗೂ ಪತ್ನಿ ಮನೆಯವರು ಹಲ್ಲೆ ಮಾಡಿದ್ದರು. ಇದರಿಂದ ಬೇಸತ್ತು ಅಕ್ಮಲ್ ಅನ್ಸರ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತನ ಸಹೋದರ ಆರೋಪಿಸಿದ್ದಾನೆ. ಈ ಬಗ್ಗೆ ಮೊಕದ್ದಮೆ ದಾಖಲಿಸಿದ ಪೊಲೀಸರು ತನಿಖೆ ಚಿರುಕುಗೊಳಿಸಿದ್ದಾರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

Madhugiri: ಅಕ್ಕನನ್ನು ಚುಡಾಯಿಸಿದವನನ್ನ ಚಾಕುವಿನಿಂದ ಇರಿದ ತಮ್ಮ

Document

Leave a Reply

Your email address will not be published. Required fields are marked *