Document

Tiptur: ಮಕ್ಕಳಲ್ಲಿನ ಪ್ರತಿಭೆಯನ್ನು ಹೊರ ತರಲೆಂದು ವಿಶೇಷವಾದ ಕಾರ್ಯಕ್ರಮವೇ ಠಾಗೂರ್ ವಿಕಿರಣo-2025

JANATAA24 NEWS DESK 

 

 

 

Tiptur: ಮಕ್ಕಳಲ್ಲಿನ ಪ್ರತಿಭೆಯನ್ನು ಹೊರ ತರಲೆಂದು ವಿಶೇಷವಾದ ಕಾರ್ಯಕ್ರಮವೇ ಠಾಗೂರ್ ವಿಕಿರಣo-2025– ಶಶಿಕಲಾ ಅನಿಲ್.

Tiptur: Tagore Radiant-2025 is a special program to bring out the talent in children

03/01 ರಂದು ತಿಪಟೂರಿನ ಠಾಗೂರ್ ಶಾಲಾ ವಾರ್ಷಿಕೋತ್ಸವ.

ತಿಪಟೂರು: ನೂತನ ವರ್ಷದ ಮೊದಲನೇ ವಾರದ ಜನವರಿ 03/01 ರಂದು ಸಂಜೆ 5:30ಕ್ಕೆ ನಗರದ ಕೆ.ಎಚ್‌.ಬಿ ಕಾಲೋನಿಯ ಒಕ್ಕಲಿಗರ ಸಮುದಾಯ ಭವನದ ಸಭಾಂಗಣದಲ್ಲಿ, ಠಾಗೂರ್ ವಿದ್ಯಾ ಸಂಸ್ಥೆ ವತಿಯಿಂದ ಠಾಗೂರ್ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಹಾಗೂ ಠಾಗೂರ್ ವಿಕಿರಣo-2025 ಎಂಬ ವಿಶೇಷ ಕಾರ್ಯಕ್ರಮದೊಂದಿಗೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರುವ ನಿಟ್ಟಿನಲ್ಲಿ ಪ್ರತಿಯೊಂದು ನೃತ್ಯದಲ್ಲಿ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ನಿಟ್ಟಿನಲ್ಲಿ ತೊಡಗಿದ್ದು, ವಿಕಿರಣಂ ಎಂದರೆ ಸಂಸ್ಕೃತ ಭಾಷೆಯ ಪದವಾಗಿದ್ದು, ಸೂರ್ಯನ ಕಿರಣದ ರೀತಿ ಮಕ್ಕಳು ಪ್ರಜ್ವಲಿಸಲಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಠಾಗೂರ್ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಅನಿಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಗರದ ಠಾಗೂರ್ ವಿದ್ಯಾ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಬಾರಿ ಮಕ್ಕಳಿಂದ 22 22ಕ್ಕೂ ಹೆಚ್ಚು ಅಧಿಕ ನೃತ್ಯ
ಕಾರ್ಯಕ್ರಮಗಳು ನಡೆಯಲಿದ್ದು,
ಸಮಾಜಕ್ಕೆ ವಿಶೇಷ ಸಂದೇಶ ಮತ್ತು ಜಾಗೃತಿ ಸಾರುವ ನೃತ್ಯಗಳಾಗಿರುತ್ತವೆ, ಬೆಳಕಿನೆಡೆಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ಠಾಗೂರ್ ಶಾಲೆ ಕಾರ್ಯ ನಿರ್ವಹಿಸುತ್ತಿದೆ. ನಾವುಗಳು ಮತ್ತು ನೀವುಗಳು ಹೆಚ್ಚಿನ ರೀತಿ ಕಾರ್ಯ ನಿರ್ವಹಿಸಬೇಕಾಗಿದೆ. ಆದ್ದರಿಂದ ಈ ವಿಶೇಷ ಕಾರ್ಯಕ್ರಮಕ್ಕೆ
ಪೋಷಕರು,ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸುವಂತೆ ಮತ್ತು ಈ ಕಾರ್ಯಕ್ರಮದ ಕಾರ್ಯಕ್ರಮವನ್ನು ಶಾಸಕ ಕೆ.ಷಡಕ್ಷರಿ ರವರು ಉದ್ಘಾಟಿಸಲಿದ್ದು, ಠಾಗೂರ್ ವಿದ್ಯಾ ಸಂಸ್ಥೆ ಅಧ್ಯಕ್ಷರಾದ ಡಾ.ಆರ್. ಅನಿಲ್ ಅಧ್ಯಕ್ಷತೆ ವಹಿಸಲಿದ್ದು,
ವಿದ್ಯಾರ್ಥಿಗಳ ಕೈ ಬರಹದ ಕಲರವ ಸಂಚಿಕೆಯನ್ನು ಬಿಇಓ ತಾರಾಮಣಿ ಬಿಡುಗಡೆ ಮಾಡಲಿದ್ದಾರೆ.
ಕಾರ್ಯಕ್ರಮಕ್ಕೆ ರಂಗಾಯಣ ನಿರ್ದೇಶಕ ಸತೀಶ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಅಶೋಕ್,ಡಾ.ಚಂದ್ರಮೌಳಿ, ವಿಶೇಷ ಆಹ್ವಾನಿತರಾಗಿ ಆಂಧ್ರಪ್ರದೇಶದ ಪ್ರೊ.ಡಾ.
ಮುರುಗಯ್ಯ,ಹೃದಯ ತಜ್ಞ ಡಾ. ವಿವೇಚನ್,ವೈದ್ಯರಾದ
ರಮೇಶ್ ಬಾಬು, ಶ್ರೀಧರ್, ಮಯೂರ ಹೋಟೆಲ್ ಮಾಲೀಕ ಗುರುರಾಜ್ ಮತ್ತು ದಾವಣಗೆರೆ ಬಾಪೂಜಿ ಡೆಂಟಲ್ ಕಾಲೇಜಿನ ಪ್ರೊ.ಡಾ.ದೀಪಕ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಠಾಗೂರ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ.ಅನಿಲ್ ಸೇರಿದಂತೆ
ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರು ಹಾಜರಿದ್ದರು.

ವರದಿ:ಮಂಜುನಾಥ್ ಡಿ ತಿಪಟೂರು

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Document

Leave a Reply

Your email address will not be published. Required fields are marked *