JANATAA24 NEWS DESK
Tiptur: PSI ಯತೀಶ್ ನಿಂದ ದಲಿತ ಯುವಕನ ಮೇಲೆ ಹಲ್ಲೆ– ತಾಲೂಕು ಆಡಳಿತ ಮುಂಭಾಗ ದಲಿತ ಮುಖಂಡರ ಪ್ರತಿಭಟನೆ.

ತಿಪಟೂರು : ತಿಪಟೂರು ನಗರದ ಠಾಣೆ ಸಬ್ ಇನ್ಸ್ಪೆಕ್ಟರ್ ಯತೀಶ್ ರವರು ದಲಿತ ಮುಖಂಡ ಕಂಚಾಘಟ್ಟ ಸುರೇಶ ಅವರ ಮಗನನ್ನ ಮನಸ್ಸ ಇಚ್ಛೆ ದಳಿಸಿ ಗೂoಡ ರೀತಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ತಿಪಟೂರು ತಾಲೂಕು ಆಡಳಿತ ಮುಂಭಾಗ ಪ್ರತಿಭಟನೆ ನಡೆಸಿದರು.
ನಂತರ ಮಾನ್ಯ ಗೃಹ ಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್ ರವರಿಗೆ ತಿಪಟೂರು ತಾಲೂಕು ಉಪ ವಿಭಾಧಿಕಾರಿಗಳಾದ ಸಪ್ತ ಶ್ರೀ ರವರ ಮೂಲಕ ಮನವಿ ಸಲ್ಲಿಸಿದರು.
ತಿಪಟೂರು ನಗರದ ಹಾಸನ ಸರ್ಕಲ್ ಅರಸಿಕೆರೆ ರೋಡ್ (206)ರಲ್ಲಿ ದಿನಾಂಕ 22/01/ 2026ನೇ ತಾರೀಕು ಗುರುವಾರ ರಾತ್ರಿ 11:10ರ ಸರಿಸುಮಾರು ಸಮಯದಲ್ಲಿ ಸುಮಾ ಬಾರ್ ಎದುರಿಗೆ ಮುಂದಿನ ರಸ್ತೆಯಲ್ಲಿ ನಿಂತಿದ್ದ ದಲಿತ ಜನಾಂಗದ ಸೇರಿದ ಸುಪ್ರೀಂ ಸೂರ್ಯ ಫೋನಿನಲ್ಲಿ ಮಾತನಾಡುತ್ತಿರುವಾಗ ತಿಪಟೂರು ನಗರದ ಸಬ್ ಇನ್ಸ್ಪೆಕ್ಟರ್ ಯತೀಶ್ ರವರು ಜೀಪಿನಲ್ಲಿ ಆಗಮಿಸಿದ್ದು. ಈ ಯುವಕನಿಗೆ ಗುದ್ದುವ ರೀತಿ ಪಕ್ಕಕ್ಕೆ ಬಂದು ನಿಂತು ಏನು ಮಾಡುತ್ತೀಯಾ ಇಲ್ಲಿ ಎಂದಾಗ, ಅದಕ್ಕೆ ಅವನು ನನ್ನ ಚಿಕ್ಕಪ್ಪ ಡ್ರಿಂಕ್ಸ್ ತರಲು ಹೋಗಿದ್ದಾರೆ ಅದಕ್ಕೆ ಅವರನ್ನು ಕಾಯುತ್ತಿದ್ದದ್ದೇನೆ ಎಂದು ಉತ್ತರಿಸಿದಾಗ ನನ್ನ ಜೀಪ್ ಬಂದಿದ್ದು ನಿನ್ನ ಕಣ್ಣಿಗೆ ಕಾಣಲಿಲ್ಲವೇ ಎಂದು ನಿಂದಿಸುತ್ತಾ ಯಾವೂರು ನಿಂದು ಎಂದಾಗ ಕಂಚಾಘಟ್ಟ ಸುರೇಶ ರವರ ಮಗ ಎಂದಿದ್ದಾನೆ.
ಅದಕ್ಕೆ ನೀನು ಜೀಪ್ ಬಂದರು ಎಕ್ಷೆ ಮಾದಿಗನಂತೆ ನಿಂತಿರುವುರು ಎಂದಿದ್ದಾರೆ. ಆಗ ಅವನು ಯಾಕೆ ಸರ್ ಈ ರೀತಿ ಮಾತನಾಡುತ್ತೀರಾ ಎಂದಾಗ, ಸಬ್ ಇನ್ಸ್ಪೆಕ್ಟರ್ ಆದ ಯತೀಶ್ ರವರು ಜೀಪಿನಿಂದ ಕೆಳಗಿಳಿದು ಸುಪ್ರೀಂ ಸೂರ್ಯ ನನ್ನು ಮನಸ್ಸು ಇಚ್ಛೆ ದಳಿಸಿ ಗುಂಡಾ ರೀತಿ ವರ್ತಿಸಿದ್ದಾರೆ. ಆ ಸಮಯದಲ್ಲಿ ಅಲ್ಲಿಂದ ಅವನು ಭಯ ಭೀತನಾಗಿ ಹೋಗುತ್ತಿರುವಾಗ ಪುನಃ ಹಿಂಬಾಲಿಸಿ ಆತನನ್ನ ಅವರ ಜೊತೆಯಲ್ಲಿದ್ದ ಪಿ.ಸಿ. ಮತ್ತು ಯತೀಶ್ ರವರು ಪ್ರಾಣಿಯಂತೆ ಆತನಿಗೆ ಪುನಃ ದಳಿಸುತ್ತಾ ಅವರ ಜೀಪಿನ ಕಡೆ ಕೊರಳು ಪಟ್ಟಿ ಹಿಡಿದು ಹೊಡೆದುಕೊಂಡು ಜೀಪ್ ಗೆ ಹತ್ತು ಎಂದು ಕಾಲಿನಿಂದ ಒದೆಯುತ್ತಾ ಜೀಪಿಗೆ ನೂಕಿ ಹತ್ತಿಸಿದ್ದಾರೆ.
ನಂತರ ಸುಮಾರು 10ನಿಮಿಷ ಚೀಪ್ ನಲ್ಲಿ ಇರಿಸಿ ಹಾಗೂ ಆತನನ್ನು ಠಾಣೆಗೆ ಕರೆದುಕೊಂಡು ಹೋಗಿ ಮೊಬೈಲ್ ಕಿತ್ತುಕೊಂಡು ಯಾರಿಗೂ ಫೋನ್ ಮಾಡದೆ ರಾತ್ರಿ ಎಲ್ಲಾ ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡಿದ್ದ ರಂತೆ ನಂತರ ಈ ವಿಚಾರ ತಂದೆಗೆ ತಿಳಿದಾಗ ಠಾಣೆ ಬಳಿ ಹೋಗಿ ನೋಡಿದಾಗ ಅವನನ್ನು ಯಾವುದೋ ಸ್ಮಗ್ಲರ ಮಾಡಿರುವ ತರ ಕೂರಿಸಿದ್ದನ್ನು ನೋಡಿ ಅಲ್ಲಿನ ಠಾಣೆಯಲ್ಲಿರುವ ಪಿ.ಸಿ.ಯನ್ನು ಕೇಳಿದಾಗ ಎಸ್.ಐ. ಅವರು ಕರೆದುಕೊಂಡು ಬಂದಿತ್ತಾರೆ ಎಂದು ತಿಳಿಸಿದ್ದಾರೆ. ನಂತರ ಎಸ್.ಐ. ರವರಿಗೆ ಫೋನ್ ಮಾಡಿದಾಗ ಫೋನ್ ಸಹ ಉತ್ತರಿಸದೆ ಹಾಗೂ ಯಾವುದೇ ಡ್ರಿಂಕ್ ಮಾಡಿ ಗಾಡಿ ಓಡಿಸದೆ ಇದ್ದರೂ ಈತನ ಮೇಲೆ ಕೇಸ್ ದಾಖಲಿಸಿರುತ್ತಾರೆ. ನನ್ನ ಮಗನ ಮೇಲೆ ಯಾವುದೇ ದೂರು ಇಲ್ಲದಿದ್ದರೂ ಅಮಾನೀಯವಾಗಿ ಗೂಂಡಾ ರೀತಿ ವರ್ತಿಸುತ್ತಿರುವ ಸಬ್ ಇನ್ಸ್ಪೆಕ್ಟರ್ ಯತೀಶ್ ರವರ ಮೇಲೆ ಸೂಕ್ತವಾದ ತನಿಖೆ ನಡೆಸಿ ಬೇಕೆಂದು ಕಂಚಾಘಟ್ಟ ಸುರೇಶ ರವರು ತಿಳಿಸಿದ್ದಾರೆ.
ಹಾಗೂ ಎಸ್. ಸಿ. ಎಸ್. ಟಿ. ಕಾಯ್ದೆ ಅಡಿ ಹಾಗೂ ಗೂಂಡಾ ಕಾಯ್ದೆ ಅಡಿ ಕೇಸ್ ದಾಖಲಿಸಿ ನೊಂದ ದಲಿತ ಯುವಕನಿಗೆ ನ್ಯಾಯ ಕೊಡಿಸಬೇಕೆಂದು ಕಂಚಾಘಟ್ಟ ಸುರೇಶ್ ರವರು ಹಾಗೂ ದಲಿತ ಪರ ಮುಖಂಡರುಗಳು ಪ್ರತಿಭಟನೆಯಲ್ಲಿ ಸಬ್ ಇನ್ಸ್ಪೆಕ್ಟರ್ ಯತೀಶ್ ಅವರ ನಡವಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯ ನಡೆದಿದ್ದು ಸುಮ ಬಾರ್ ಸಿ.ಸಿ. ಟಿವಿ ದೃಶ್ಯವನ್ನು ಸಂಘಟನೆಗಳು ಪಡೆದುಕೊಂಡಿದ್ದು. ಸೂಕ್ತ ದಾಖಲೆಯನ್ನು ನೀಡಿದ್ದು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ನ್ಯಾಯಯುತವಾದ ಕಾನೂನು ಕ್ರಮ ಜರುಗಿಸಿ ಬೇಕೆಂದು ದಲಿತ ಪರ ಮುಖಂಡರು ಒತ್ತಾಯಿಸಿದರು.
ವರದಿ :ಮಂಜುನಾಥ್ ಡಿ, ತಿಪಟೂರು
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.