Janataa24 NEWS DESK
Tiptur: ದಲಿತ ಪರ ಸಂಘಟನೆಗಳಿಂದ ತಿಪಟೂರಿನಲ್ಲಿ ಬೃಹತ್ ಪ್ರತಿಭಟನೆ.

ತಿಪಟೂರು: ಭಾರತದ ಸಂವಿಧಾನದ ಸರ್ವೋಚ್ಚ ನ್ಯಾಯಾಲಯ ಸುಪ್ರೀಂ ಕೋರ್ಟ್ ನ 52ನೇ ಮುಖ್ಯ ನ್ಯಾಯಾಧೀಶ ಬಿ.ಆರ್ . ಗವಾಯಿ ಅವರ ಮೇಲೆ ಶೂ ಎಸೆತ ಪ್ರಕರಣಕ್ಕೆ ಗಂಭೀರವಾಗಿ ಪರಿಗಣಿಸಿ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಕರ್ನಾಟಕ ರಾಜ್ಯದ ತಿಪಟೂರು ತಾಲ್ಲೂಕು ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದರು. ನಗರದ ನಗರಸಭೆ ವೃತ್ತದ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಹಾಗೂ ಕಾಲ್ನಡಿಗೆಯಲ್ಲಿ ಪ್ರತಿಭಟನಾಕಾರರು ಶೂ ಎಸೆದ ರಾಕೇಶ್ ವಕೀಲನ ವಿರುದ್ಧ ಮೆರವಣಿಗೆಯಲ್ಲಿ ಧಿಕ್ಕಾರ ಕೂಗಿದರು.
ನಗರದ ನಗರ ಸಭೆ ವೃತ್ತದಿಂದ ತಾಲೂಕು ಆಡಳಿತ ಸೌಧ ಕಚೇರಿ ಮುಂದೆ ತಮಟೆ ಬಡಿಯುವ ಮೂಲಕ ಪ್ರತಿಭಟನೆ ನಡೆಸಿ ಗ್ರೇಡ್ ಟು ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿಪತ್ರ ಸಲ್ಲಿಸಿ ಮಾತನಾಡಿದ ಅವರು, ಮತಾಂಧ ಮನಸ್ಥಿತಿಯ ವಕೀಲ ಕಿಶೋರ ರಾಕೇಶ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಅಗ್ರಹಪಡಿಸುತ್ತ. ಭಾರತದ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಬಿ.ಆರ್ . ಗವಾಯಿಯವರು ಧಮ್ಮ ಮಾರ್ಗದಲ್ಲಿನಡೆಯುತ್ತಿರುವ ಡಾ.ಅಂಬೇಡ್ಕರ್ ಅನುಯಾಯಿಯಾಗಿದ್ದು, ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿಸುವ ಸಂದರ್ಭದಲ್ಲಿನಾನು ಈ ಮಟ್ಟಕ್ಕೆ ಬೆಳೆಯಲು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಮೂಲಕ ಪಡೆದ ಶಿಕ್ಷಣ ಕಾರಣ ಎಂದು ಪ್ರಭಲವಾಗಿ ಪ್ರತಿಪಾದಿಸಿದ್ದರು. ಇದನ್ನು ಮನುವಾದಿ ಮನಸ್ಥಿತಿಯ ಜಾತಿವಾದಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿಮೊದಲ ಬಾರಿಗೆ ಕೇವಲ 6 ತಿಂಗಳ ಕಾಲ ಅಷ್ಟೇ ಇಒಐ ಆಗುತ್ತಿರುವುದಕ್ಕೆ ಮನವಾದಿಗಳು ಇಷ್ಟೊಂದು ವಿಷ ಖಾರುತ್ತಿರುವುದು ದುರದೃಷ್ಟಕರ.
ಇದು ಸಂಪೂರ್ಣ ದೇಶದ್ರೋಹ ಕೃತ್ಯವಾಗಿದ್ದು ಅವನಿಗೆ ಕಠಿಣ ಶಿಕ್ಷೆ ಕೊಡುವ ಜಾತಿವಾದಿಗಳಿಗೆ ಕಠಿಣ ಸಂದೇಶ ರವಾನಿಸಬೇಕು. ಜತೆಗೆ ಮುಂದೆ ಇಂತಹ ಘಟನೆ ಮರುಕಳಿಸದಂತೆ ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದೇ ವೇಳೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೊಪ್ಪ ಶಾಂತಪ್ಪ ಮಾತನಾಡಿ ಭಾರತದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಅವರ ಮೇಲೆ ನ್ಯಾಯಾಲಯದ ಕಲಾಪದ ವೇಳೆ ಶೂ ದೇಶದ ಕ್ರೌರ್ಯ ಮೆರೆದಿದ್ದ ವಕೀಲನಿಂದ ದೇಶದ ನ್ಯಾಯಾಂಗದ ಗೌರವಕ್ಕೆ ಧಕ್ಕೆಯಾಗಿದೆ ಇದು ಸಂವಿಧಾನಕ್ಕೆ ಮಾಡಿದ ಅಪಪ್ರಚಾರ ಜೊತೆಗೆ ಸಮಾಜ ತಲೆತಗ್ಗಿಸುವಂತಹ ಭಾರತೀಯರ ಮೇಲೆ ಆದಂತಹ ಅವಮಾನವಾಗಿದೆ ಇಂಥವನ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ದೇಶದ್ರೋಹದ ಪ್ರಕರಣ ದಾಖಲಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಜಿಲ್ಲಾ ಸಂಚಾಲಕರಾದ ನಾಗತಿಹಳ್ಳಿ ಕೃಷ್ಣಮೂರ್ತಿ ಮಾತನಾಡಿ ಸಂವಿಧಾನ ವಿರೋಧಿ ಮತ್ತು ಜಾತಿವಾದಿ ಮನೋಭಾವದ ಹಿರಿಯ ವಕೀಲ ರಾಕೇಶ್ ಕಿಶೋರ್ ಕುಮಾರ್ ಅವರನ್ನು ತಕ್ಷಣ ಬಂಧಿಸಿ ಜೈಲಿಗೆ ಕಳಿಸಬೇಕು ನ್ಯಾಯಾಂಗದ ಸ್ವಾತಂತ್ರವನ್ನು ಧಿಕ್ಕರಿಸುವಂತಿವೆ ಮತ್ತು ಸಂವಿಧಾನವನ್ನು ದಿಕ್ಕು ತಪ್ಪಿಸಲು ಉದ್ದೇಶಿತವಾದ ಷಡ್ಯಂತರದ ಭಾಗವಾಗಿದೆ ಕೂಡಲೇ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟದ ಬಿಸಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಂತರ ಬಜಗೂರು ಮಂಜುನಾಥ್ ಮಾತನಾಡಿ ಈ ವಕೀಲನ ಹಿಂದಿರುವ ಶಕ್ತಿ ಕೇಂದ್ರಗಳು ಯಾರು, ಸಂವಿಧಾನದ ವಿರೋಧಿಗಳು ಹಾಗೂ ದೇಶದ ದ್ರೋಹಿಗಳು ಯಾರ್ಯಾರು ಎಂಬುದರ ಕುರಿತು ಕೇಂದ್ರ ತನಿಕಾ ಸಂಸ್ಥೆಗಳ ಮೂಲಕ ನಿಖರ ತನಿಖೆ ನಡೆಸಬೇಕು ಹಾಗೂ ಆರೋಪಿಗೆ ಬೆಂಬಲ ವ್ಯಕ್ತಪಡಿಸುತ್ತಿರುವವರ ಮೇಲೂ ಪ್ರಕರಣ ದಾಖಲಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಈ ವೇಳೆ ಹಿರಿಯ ದಲಿತ ಮುಖಂಡ ಕೊಪ್ಪಾಳ ರಂಗಸ್ವಾಮಿ ಮಾತನಾಡಿ ಕೇಂದ್ರ ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳದಿದ್ದರೆ ದೆಹಲಿಯಲ್ಲಿ ಜಂತರ್ ಮಂತರ್ ನಲ್ಲಿ ರಾಷ್ಟ್ರಮಟ್ಟದ ಸಂಘಟನೆಗಳೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ನ್ಯಾಯದ ಮೇಲೆ ದಾಳಿ ಅಂದರೆ ಸಂವಿಧಾನದ ಹೃದಯದ ಮೇಲೆ ಅಲ್ಲೇ ನಡೆಸಿದಂತೆ ಹಾಗಾಗಿ ಕೂಡಲೇ ಮನುವಾದಿ ಮನಸ್ಥಿತಿ ಇರುವ ರಾಕೇಶ್ ಪುಷ್ಪ ವಕೀಲನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದುರು. ಪ್ರತಿಭಟನೆಯಲ್ಲಿ ದಲಿತ ಹಿರಿಯ ಮುಖಂಡರಾದ ಕುಪ್ಪಾಳು ರಂಗಸ್ವಾಮಿ, ಬಿಳಿಗೆರೆ ಚಂದ್ರಶೇಖರ್, ಪೆದ್ದಿಹಳ್ಳಿ ನರಸಿಂಹಯ್ಯ, ಸುರೇಶ್ ಕಂಚಘಟ್ಟ, ಎನ್ಎಂ ಮೈಲಾರಯ್ಯ ನಾಗತಿಹಳ್ಳಿ, ಪುಟ್ಟಸ್ವಾಮಿ, ಮತ್ತಿಘಟ್ಟ ಶಿವಕುಮಾರ್, ರಾಘು ಯಗಚಿಗಟ್ಟೆ, ಹರೀಶ್ ಮತ್ತಿಹಳ್ಳಿ, ಮಂಜುನಾಥ್ ಹರಚನಹಳ್ಳಿ, ಮೋಹನ್ ಜಕ್ಕನಹಳ್ಳಿ, ಮಹದೇವ್ ಬಿಳಿಗೆರೆ, ಲಕ್ಷ್ಮಮ್ಮ ಬಿಳಿಗೆರೆ, ರಮೇಶ್ ಮಾರನಗೆರೆ, ಬಾಗುವಾಳ ನಿಂಗರಾಜು, ರಂಗರಾಜು, ರಂಗಸ್ವಾಮಿ, ಚಂದ್ರೇಗೌಡ, ಮನು, ಶಂಕ್ರಪ್ಪ, ರವಿ, ಸೇರಿದಂತೆ ಇನ್ನು ಅನೇಕ ಹಲವು ವಿವಿಧ ದಲಿತ ಪರ ಒಕ್ಕೂಟದ ಸಂಘಟನೆಗಳು, ಮುಖಂಡರು, ಅಂಬೇಡ್ಕರ್ ಅಭಿಮಾನಿಗಳು ಅನೇಕರು ಉಪಸ್ಥಿತಿಯಲ್ಲಿದ್ದರೂ.
ವರದಿ: ಮಂಜುನಾಥ್ ಡಿ ತಿಪಟೂರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.