Document

Tiptur: 2026 ನೇ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಶ್ರೀ ರುದ್ರಮುನಿ ಸ್ವಾಮೀಜಿ. 

JANATAA24 NEWS DESK 

 

 

Tiptur: 2026 ನೇ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಶ್ರೀ ರುದ್ರಮುನಿ ಸ್ವಾಮೀಜಿ.

Tiptur: Sri Rudramuni Swamiji released the 2026th New Year Calendar.

Tiptur: ಜಯಕರ್ನಾಟಕ ಜನಪರ ವೇದಿಕೆಯ ವಾರ್ಷಿಕ ದಿನದರ್ಶಿಕೆ (ಕ್ಯಾಲೆಂಡರ್) ಬಿಡುಗಡೆ.

 

ತಿಪಟೂರು: ಕ್ಯಾಲೆಂಡರ್ ಬಿಡುಗಡೆ ಒಂದು ವರ್ಷದ ಪ್ರತಿಕವಾಗಿದ್ದು, ಸಮಾಜದಲ್ಲಿನ ವಿವಿಧ ಸಂಘ- ಸಂಸ್ಥೆಗಳು ತಮ್ಮ ವಾರ್ಷಿಕ ಕ್ಯಾಲೆಂಡರ್ ಗಳನ್ನು ಹೊಸ ವರ್ಷದ ಮುನ್ನ ಬಿಡುಗಡೆ ಮಾಡುವ ಪದ್ಧತಿ. ಪ್ರತಿ ವರ್ಷ ಜಯಕರ್ನಾಟಕ ಜನಪರ ವೇದಿಕೆ ರೂಡಿಸಿಕೊಂಡು ಬಂದಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಅಭಿಪ್ರಾಯಪಟ್ಟರು.

 

ನಗರದ ಕಂಚಾಘಟ್ಟ ಬಡಾವಣೆಯಲ್ಲಿರುವ ಶ್ರೀ ಷಡಕ್ಷರ ಮಠದ ಸಭಾಂಗಣದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಹೊರ ತಂದಿರುವ 2026 ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಶ್ರೀಗಳು, ಸುಮಾರು 18 ವರ್ಷಗಳಿಂದ ಸಂಘಟನೆಯ ಅಧ್ಯಕ್ಷ ಬಿ.ಟಿ.ಕುಮಾರ್ ಕ್ಯಾಲೆಂಡರ್ ಗಳನ್ನು ತಾಲೂಕು ಸೇರಿದಂತೆ ಸುತ್ತಮುತ್ತಲ ತಾಲೂಕುಗಳಿಗೆ ವಿತರಿಸುತ್ತಿರುವುದು ಸಮಾಜಮುಖಿ ಕೆಲಸವಾಗಿದೆ. ಈಗಾಗಲೇ ಜಯಕರ್ನಾಟಕ ಜನಪರ ವೇದಿಕೆ ಸಂಘಟನೆಯು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡೆ ಚಟುವಟಿಕೆ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ಹಮ್ಮಿಕೊಳ್ಳುವುದರ ಮೂಲಕ ತಾಲೂಕಿನಲ್ಲಿ ಪ್ರತಿಯೊಬ್ಬರ ನಾಡಿ ಮಿಡಿತದಲ್ಲಿ ಹಚ್ಚ ಹಸಿರಾಗಿದೆ. ಸಂಘಟನೆಯು ಇನ್ನು ಹೆಚ್ಚಿನ ರೀತಿಯಲ್ಲಿ ಕಾರ್ಯ ನಿರ್ವಹಿಸಲಿ ಎಂದು ತಿಳಿಸುತ್ತಾ, ಶುಭ ಹಾರೈಸಿದರು.

 

ನಗರಸಭಾ ಮಾಜಿ ಸದಸ್ಯ ಲೋಕನಾಥ ಸಿಂಗ್ ಮಾತನಾಡಿ, ಕ್ಯಾಲೆಂಡರ್ ಗಳಿಂದ ಹಬ್ಬಗಳು, ವಿಶೇಷ ದಿನಗಳು ಮತ್ತು ಮಹಾನ್ ದಾರ್ಶನಿಕರ ಜಯಂತಿ ಸೇರಿದಂತೆ ಹಲವಾರು ಉಪಯುಕ್ತ ಮಾಹಿತಿಗಳು ಸಿಗುತ್ತವೆ ಆದ್ದರಿಂದ ಪ್ರತಿಯೊಬ್ಬರೂ ಕ್ಯಾಲೆಂಡರ್ ಅನ್ನು ಬಳಕೆ ಮಾಡಿಕೊಳ್ಳಬೇಕು. ಸಂಘಟನೆಯು ಪ್ರತಿ ವರ್ಷ ಬಹಳ ವಿಶಿಷ್ಟ ಹಾಗೂ ವಿಶೇಷವಾಗಿ ಪುಟಗಳನ್ನು ಮುದ್ರಿಸಿ, ಕ್ಯಾಲೆಂಡರ್ ಗಳನ್ನು ವಿತರಿಸುತ್ತಿದ್ದಾರೆ ಎಂದು ತಿಳಿಸಿದರು.

 

ಕರವೇ ಅಧ್ಯಕ್ಷ ಸತೀಶ್ ಮಾರನಗೆರೆ ಮಾತನಾಡಿ, ಜಯಕರ್ನಾಟಕ ಜನಪರ ವೇದಿಕೆ ಈಗಾಗಲೇ ತಾಲೂಕಿನಲ್ಲಿ ಸಮಾಜಮುಖಿಯಲ್ಲಿ ಹೆಸರುವಾಸಿಯಾಗಿದ್ದು, ಪ್ರತಿಯೊಂದು ಕಾರ್ಯಕ್ರಮಕ್ಕೂ ನಮ್ಮನ್ನು ಆಹ್ವಾನಿಸುತ್ತಾ, ಕನ್ನಡಿಗರು ಎಲ್ಲರೂ ಒಂದೇ ಎಂಬ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಪ್ರತಿ ವರ್ಷ ವಿಶೇಷವಾಗಿ ಕ್ಯಾಲೆಂಡರ್ ಗಳನ್ನು ಪ್ರತಿಯೊಂದು ಕಚೇರಿ ಸೇರಿದಂತೆ ಗ್ರಾಮ ಮಟ್ಟಕ್ಕೂ ವಿತರಿಸುತ್ತಿರುವುದು ಅವರ ಕಾರ್ಯ ನಮಗೆ ಸ್ಪೂರ್ತಿಯಾಗಿದೆ ಎಂದು ತಿಳಿಸಿದರು.

 

ಜಯಕರ್ನಾಟಕ ಜನಪರ ವೇದಿಕೆ ತಾ.ಅಧ್ಯಕ್ಷ ಬಿ.ಟಿ.ಕುಮಾರ್, ಉಪಾಧ್ಯಕ್ಷ ರೇಣುಕಾಮೂರ್ತಿ, ನಗರ ಕಾರ್ಯದರ್ಶಿ ಲೋಕೇಶ್, ಸಂಚಾಲಕ ರೋಹನ್ ರಾಜ್, ಮಹಿಳಾ ಘಟಕದ ಶುಭ, ಅಲ್ಪಸಂಖ್ಯಾತರ ಘಟಕದ ನವೀದ್, ಕರವೇ ಪ್ರಧಾನ ಕಾರ್ಯದರ್ಶಿ ಕಿರಣ್, ಮುಖಂಡರಾದ ಶಾಂತಪ್ಪ ಮತ್ತು ಹುಚ್ಚವೀರಪ್ಪ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.

ವರದಿ :ಮಂಜುನಾಥ್ ಡಿ, ತಿಪಟೂರು.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.


Document

Leave a Reply

Your email address will not be published. Required fields are marked *