Document

Tiptur: ಪತ್ರಕರ್ತರ ಸಂಘಕ್ಕೆ ತಾತ್ಕಾಲಿಕ ಕಚೇರಿ–ಶಾಸಕ ಕೆ.ಷಡಕ್ಷರಿ ಭರವಸೆ

JANATAA24 NEWS DESK 

 

 

Tiptur: ಪತ್ರಕರ್ತರ ಸಂಘಕ್ಕೆ ತಾತ್ಕಾಲಿಕ ಕಚೇರಿ–ಶಾಸಕ ಕೆ.ಷಡಕ್ಷರಿ ಭರವಸೆ.

Tiptur: MLA K. Shadakshari promises temporary office for Journalists' Association

Tiptur: ಎರಡು ಬಣಗಳು ಒಗ್ಗಟ್ಟಾಗಿ ಬಂದಾಗ ಕಚೇರಿ ನೀಡಲು ಸಾಧ್ಯವಾಗುತ್ತದೆ.

 

ತಿಪಟೂರು:  ಕರ್ನಾಟಕ ವರದಿಗಾರರ ಹಾಗೂ ಸಂಪಾದಕ ಪತ್ರಕರ್ತರ ಸಂಘಕ್ಕೆ ತಾತ್ಕಾಲಿಕವಾಗಿ ಕಚೇರಿ ಹಾಗೂ ನಿವೇಷನ ನೀಡುವಂತೆ ನಗರದ ನಗರಸಭೆಯ ಶಾಸಕರ ಕಚೇರಿಯಲ್ಲಿ, ಶಾಸಕ ಕೆ.ಷಡಕ್ಷರಿರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

 

ಕರ್ನಾಟಕ ವರದಿಗಾರರ ಹಾಗೂ ಸಂಪಾದಕ ಪತ್ರಕರ್ತರ ಸಂಘದ ಗೌರವಾಧ್ಯಕ್ಷ, ಹಿರಿಯ ಪತ್ರಕರ್ತ ಡಾ.ಭಾಸ್ಕರ್ ಮಾತನಾಡಿ, ತಾತ್ಕಾಲಿಕವಾಗಿ ಕಚೇರಿಗಾಗಿ ಯಾವುದಾದರೊಂದು ಸರ್ಕಾರಿ ಕಟ್ಟಡ ನೀಡಲು ಮನವಿ ಸಲ್ಲಿಸುತ್ತಾ ಬಂದಿದ್ದೇವೆ.ಪತ್ರಕರ್ತರ ಬಗ್ಗೆ ನಿಜವಾದ ಕಾಳಜಿಯುಳ್ಳ ವ್ಯಕ್ತಿತ್ವ ಹೊಂದಿರುವ ನೀವು,ಪತ್ರಕರ್ತರ ಸಮಸ್ಯೆ ಅರಿತು ನಮ್ಮ ಮನವಿಗೆ ಸ್ಪಂದಿಸಿ,ತಾತ್ಕಾಲಿಕವಾಗಿ ಕಚೇರಿ ನೀಡಿದರೆ, ದಿನನಿತ್ಯದ ವರದಿ ಹಾಗೂ ನಮ್ಮ ಸಂಘದ ಕಾರ್ಯಚಟುವಟಿಕೆಗಳಿಗೆ ಸಹಾಯವಾಗುತ್ತದೆ ಎಂದು ಮನವಿ ಮಾಡಿದರು.

 

ಮನವಿ ಪತ್ರ ಸ್ವೀಕರಿಸಿದ ಶಾಸಕ ಕೆ.ಷಡಕ್ಷರಿಯವರು, ನಾವು ನಿಜವಾಗಿ ವಸ್ತು ನಿಷ್ಠವಾಗಿ ಕೆಲಸ ಮಾಡುತ್ತೇನೆ.ಪತ್ರಕರ್ತರಲ್ಲಿಯೇ ಎರಡು ಮೂರು ಬಣಗಳಾದರೆ,ಯಾರಿಗೆ ಕಚೇರಿ ಕೊಡಲು ಸಾಧ್ಯ.ಪತ್ರಕರ್ತರಿಗೆ ತಾತ್ಕಾಲಿಕ ಕಚೇರಿ ನೀಡಬೇಕು ಎಂದು ಕೊಂಡಿದ್ದೇನೆ.ತಾತ್ಕಾಲಿಕವಾಗಿ ಕಚೇರಿ ಪಡೆಯಬೇಕೆಂದರೆ ಎಲ್ಲಾ ಪತ್ರಕರ್ತರ ಬಣಗಳು ಒಂದಾಗಿ ಬನ್ನಿ ಆಗ ಮಾತ್ರ ಕಚೇರಿ ನೀಡುತ್ತೇನೆ ಎಂದು ಭರವಸೆ ನೀಡಿದರು.

 

ಇದೇ ಸಂದರ್ಭದಲ್ಲಿ ಶಾಸಕ ಕೆ. ಷಡಕ್ಷರಿರವರು ಹಿರಿಯ ಪತ್ರಕರ್ತ ಡಾ.ಭಾಸ್ಕರ್ ರವರನ್ನು ಸನ್ಮಾನಿಸಿ, ಗೌರವಿಸಿದರು.

 

ಶಾಸಕರಾದ ಕೆ.ಷಡಕ್ಷರಿರವರಿಗೆ ಮನವಿ ಪತ್ರ ಸಲ್ಲಿಸಿದ ನಂತರ, ಉಪ ವಿಭಾಗಾಧಿಕಾರಿ ಬಿ.ಕೆ.ಸಪ್ತ ಶ್ರೀ ರವರಿಗೆ ಕೂಡ ಮನವಿ ಪತ್ರ ಸಲ್ಲಿಸಿದ್ದು,ಉಪ ವಿಭಾಗಾಧಿಕಾರಿಗಳು ಮಾತನಾಡಿ, ಶಾಸಕರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುವುದಾಗಿ, ಭರವಸೆ ನೀಡಿದರು.

 

ಕರ್ನಾಟಕ ವರದಿಗಾರರ ಹಾಗೂ ಸಂಪಾದಕ ಪತ್ರಕರ್ತರ ಸಂಘದ ತಾ.ಅಧ್ಯಕ್ಷ ರಾಜು ಬೆಣ್ಣೆನಹಳ್ಳಿ,ಉಪಾಧ್ಯಕ್ಷರಾದ ಶುಭ, ಸರ್ವೇಶಾಚಾರ್ ಮತ್ತು ಕಾರ್ಯದರ್ಶಿ ಡಿ.ಮಂಜುನಾಥ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ವರದಿ: ಮಂಜುನಾಥ್ ಡಿ ತಿಪಟೂರು.

 

 

 


ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *