Document

Tiptur: ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ DSS ನಿಂದ ಬೃಹತ್ ಪ್ರತಿಭಟನೆ

JANATAA24 NEWS DESK 

 

Tiptur: ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ DSS ನಿಂದ ಬೃಹತ್ ಪ್ರತಿಭಟನೆ.

Tiptur: Massive protest by DSS demanding land for the landless

 

ತಿಪಟೂರು:  ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ತಿಪಟೂರು ಶಾಖೆಯಲ್ಲಿ ರಾಜ್ಯಧ್ಯಕ್ಷರಾದ ಎಂ ಗುರುಮೂರ್ತಿಯವರ ಮಾರ್ಗದರ್ಶನದಲ್ಲಿ ಜಿಲ್ಲಾಧ್ಯಕ್ಷರಾದ ನಾಗತಿಹಳ್ಳಿ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕ್ ಆಡಳಿತದ ವಿರುದ್ಧ ನಿವೇಶನ ಇಲ್ಲದವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ನಾಗತೀಹಳ್ಳಿ ಕೃಷ್ಣಮೂರ್ತಿ ಮಾತನಾಡಿ ನಿವೇಶನ ಇಲ್ಲದವರಿಗೆ ನಿವೇಶನ ಕೊಡಿ ಭೂಮಿ ಇಲ್ಲದವರಿಗೆ ಭೂಮಿ ಕೊಡಿ ತುಂಬಾ ಜನರು ನಿವೇಶನ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ವಿದ್ಯಾಭಾಸಕ್ಕೂ ಕಷ್ಟವಾಗಿದೆ ಇಂಥವರಿಗೆ ಕಡುಬಡವರಿಗೆ ನಿವೇಶನ ಕೊಡಿ ದಲಿತ ಅಲ್ಪಸಂಖ್ಯಾತ ಹಿಂದುಳಿದ ವರ್ಗದವರಿದ್ದು ನಿವೇಶನ ಕೊಡಿ ಎಂದು ಒತ್ತಾಯಿಸಿದರು ಮತ್ತು ಕರ್ನಾಟಕ ಸರ್ಕಾರ 30 ವರ್ಷಗಳ ಹಿಂದೆ ಮಡೆನೂರು ಗ್ರಾಮದ ಸರ್ವೆ ನಂಬರ್ 220 ರಲ್ಲಿ 9 ಎಕರೆಯಲ್ಲಿ ನಿವೇಶನದ ಅನುಮತಿ ನೀಡಿದ್ದರು ಅದನ್ನು ಕಾರ್ಯಗತಗೊಳಿಸುವಲ್ಲಿ ಜಿಲ್ಲಾಡಳಿತ ತಾಲೂಕ ಆಡಳಿತ ಮತ್ತು ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳು ವಿಫಲವಾಗಿವೆ ಎಂದು ವಿಷಾಧ ವ್ಯಕ್ತಪಡಿಸಿದವರು.

ಮತ್ತು ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದು ಬಗರು ಹುಕುಂ ಸಾಗುವಳಿದಾರರಿಗೆ ಭೂಮಿಯನ್ನು ಸಕ್ರಮ ಮಾಡಿಕೊಡಿ ಎಂದು ತಿಳಿಸಿದರು ನಿವೇಶನವನ್ನು ನೀಡುವುದು ಇನ್ನೂ ತಡವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿ ಆ ಮನವಿ ಪತ್ರವನ್ನು ತಾಲೂಕು ಆಡಳಿತಕ್ಕೆ ಸಲ್ಲಿಸಿದರು ಈ ಸಂದರ್ಭದಲ್ಲಿ ಕಾನೂನು ಸಲಹೆಗಾರರ ವೆಂಕಟೇಶ್ ತಾಲೂಕು ಅಧ್ಯಕ್ಷರು ಮಂಜುನಾಥ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಪರ್ವೇಜ್ ಮಹಿಳಾ ಘಟಕದ ನಂದಿನಿ,ಮಹಿಳಾ ಘಟಕದ ತಾಲೂಕು ಸಂಚಾಲಕರು ಆದ ಹೊನ್ನವಳ್ಳಿ ಲಕ್ಷ್ಮೀದೇವಮ್ಮ, ಕರೀಕೆರೆ ರಾಜಣ್ಣ, ಸುರೇಶ್, ಗಂಗನ ಘಟ್ಟ ರಾಜಣ್ಣ ಅರಸೀಕೆರೆ ಭಾಸ್ಕರ್ ಅಲ್ಲಪ್ಪ ಕಳ್ಳಶೆಟ್ಟಿಹಳ್ಳಿ ಮತ್ತು ನೂರಾರು ದಲಿತ ಬಂಧುಗಳು ಮತ್ತು ಅಲ್ಪಸಂಖ್ಯಾತ ಬಂಧುಗಳು ಭಾಗವಹಿಸಿದ್ದರು.

 

ವರದಿ: ಮಂಜುನಾಥ್ ಡಿ ತಿಪಟೂರು

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *