JANATAA24 NEWS DESK
Tiptur: ನವೆಂಬರ್ 15ರಂದು ಶ್ರೀ ಅಂಜನೇಯ ಸ್ವಾಮಿಯ ಕಾರ್ತಿಕ ದೀಪೋತ್ಸವ.

ತಿಪಟೂರು: ತಾಲೂಕಿನ ರಂಗಾಪುರ ಹೊಸಳ್ಳಿ ರಾಯರ ತೋಟದ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕೆರೆ ಕೋಡಿ-ರಂಗಾಪುರ ಸುಕ್ಷೇತ್ರ ಅಧ್ಯಕ್ಷರಾದ ಶ್ರೀ ಗುರು ಪರದೇಶ ಕೇಂದ್ರ ಹಾಗೂ ಬೆಂಗಳೂರಿನ ಗಾಣಿಗರ ಮಹಾಸಂಸ್ಥಾನ ತೈಲೇಶ್ವರ ಮಠದ ಶ್ರೀ ಪೂರ್ಣಾನಂದ ಪುರಿ ಸ್ವಾಮೀಜಿಯವರ ಕೃಪೆ ಆಶೀರ್ವಾದದೊಂದಿಗೆ ಶ್ರೀ ಆಂಜನೇಯ ಸ್ವಾಮಿ ರವರ ಕಾರ್ತಿಕ ದೀಪೋತ್ಸವ ನವೆಂಬರ್ 15 ರಂದು ಶನಿವಾರ ನಡೆಯಲಿದೆ ಎಂದು ಶ್ರೀ ಅಂಜನೇಯ ಸ್ವಾಮಿ ದೇವಾಲಯದ ಧರ್ಮದರ್ಶಿ, ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶ್ರೀ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ 3:00 ಗಂಟೆಗೆ ಗಂಗ ಸ್ನಾನ, ಸಂಜೆ 4:30ಕ್ಕೆ 101 ಎಡೆ ಸೇವೆ ಸಂಜೆ 6:30 ಗಂಟೆಗೆ ದೀಪಾರಾಧನೆ ಸಂಜೆ 6:45 ರಿಂದ ಸನ್ನಿಧಾನದಿಂದ ರಂಗಾಪುರ ರಾಜಭೀದಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ
ಶ್ರೀ ಆಂಜನೇಯ ಸ್ವಾಮಿ ಮತ್ತು ರಂಗಾಪುರ ಕೆರಗೋಡಿ ದ್ಯಾವಮ್ಮ ದೇವಿ ಉತ್ಸವ ಏರ್ಪಡಿಸಲಾಗಿದೆ.
ರಾತ್ರಿ 9ಕ್ಕೆ ಕೆಂಡದ ಸೇವೆ ಭಕ್ತಾದಿಗಳಿಂದ. ರಾತ್ರಿ 9:30 ಗಂಟೆ- ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ, ರಾತ್ರಿ 10:00ಗೆ ಮಂಡ್ಯ ಜಿಲ್ಲೆಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಯರಹಳ್ಳಿ ಶ್ರೀಯುತ ಪುಟ್ಟಸ್ವಾಮಿ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮತ್ತು ಮದ್ದಿನ ಪ್ರದರ್ಶನ ಕೂಡ ಇರುತ್ತದೆ. ನವೆಂಬರ್ 16ರಂದು ಮಣೆವು ಸೇವೆ ಇರುತ್ತದೆ. ರಂಗಾಪುರ, ಹೊಸಹಳ್ಳಿ, ಕೆರಗೋಡಿ ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಿ. ಶ್ರೀ ಆಂಜನೇಯ ಸ್ವಾಮಿ ಅವರ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಕಾರ್ಯದರ್ಶಿ ಪ್ರಕಾಶ್, ಗೋವಿಂದಘಟ್ಟದ ಗಂಗಾಧರ್, ಚಿಕ್ಕನಾಯಕನಹಳ್ಳಿ ನಿಂಗಯ್ಯ, ಪತಾಂಜಲಿ ಯೋಗ ಕೇಂದ್ರದ ಮಂಜುನಾಥ್, ಶಿವರಾಜ್ ಮತ್ತಿತರು ಉಪಸ್ಥಿತಿಯಲ್ಲಿದ್ದರೂ
ವರದಿ: ಮಂಜುನಾಥ್ ಡಿ ತಿಪಟೂರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.