Document

Tiptur: ಮತ್ತಿಹಳ್ಳಿ ಗ್ರಾಮದ ಎಂ.ಡಿ. ಚಿಕ್ಕಣ್ಣನವರಿಗೆ ಒಲಿದ ಗೌರವ ಡಾಕ್ಟರೇಟ್ ಪ್ರಶಸ್ತಿ 

JANATAA24 NEWS DESK 

 

 

Tiptur: ಮತ್ತಿಹಳ್ಳಿ ಗ್ರಾಮದ ಎಂ.ಡಿ. ಚಿಕ್ಕಣ್ಣನವರಿಗೆ ಒಲಿದ ಗೌರವ ಡಾಕ್ಟರೇಟ್ ಪ್ರಶಸ್ತಿ .

 

Tiptur

ತಿಪಟೂರು: ಮತ್ತಿಹಳ್ಳಿ ಗ್ರಾಮದ ದಿವಗಂತ ಶ್ರೀಮತಿ ನಿಂಗಮ್ಮ ಹಾಗೂ ಲೇಟ್‌ ದೊಡ್ಡಯ್ಯ ಇವರ ಮಗನಾದ ಶ್ರೀಯುತ ಎಂ ಡಿ ಚಿಕ್ಕಣ್ಣ ಇವರು 10.06.1954 ರಲ್ಲಿ ಜನಿಸಿ 10.06.1980 ರಲ್ಲಿ ಕಂದಾಯ ಇಲಾಖೆ ತಿಪಟೂರು ತಾಲ್ಲೂಕು ಗುಡಿಗೊಂಡನಹಳ್ಳಿ ವೃತ್ತದ ಗ್ರಾಮ ಸೇವಕನಾಗಿ ಸೇವೆ ಸಲ್ಲಿಸಿ ದಿನಾಂಕ:- 31.08.2014 ವಯೋನಿವೃತ್ತಿ ಹೊಂದಿದರು.

 

ಇವರು ಸುಮಾರು 35 ವರ್ಷಗಳ ಕಾಲ ತಮ್ಮ ವೃತ್ತಿಜೀವನದಲ್ಲಿ ಉತ್ತಮವಾದ ಸೇವೆ ಸಲ್ಲಿಸಿರುತ್ತಾರೆ, ಹಾಗೂ ಶ್ರೀಯುತರು ತಮ್ಮ ವೃತ್ತಿ ಜೀವನದ ಜೊತೆಗೆ ಕಲಾ ಪೋಷಕರಾಗಿ ಜಾನಪದ ಗೀತೆ , ಭಜನೆ, ತತ್ವಪದ, ಕಥಾಕಲಾಕ್ಷೇಪ , ಹರಿಕಥೆ, ಇನ್ನು ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ನಿರ್ದೇಶಕರಾಗಿ ಕೆಲವೊಂದು ಯಕ್ಷಗಾನ, ಸಾಮಾಜಿಕ, ಪೌರಾಣಿಕ ನಾಟಕಗಳನ್ನು ಸುಮಾರು ಕಡೆಗಳಲ್ಲಿ ಕಲಿಸಿದ್ದಾರೆ, ಹಾಗೂ ಇವರು ಕರಿಭಂಟನ ಕಥೆ, ಸತ್ಯ ಹರಿಶ್ಚಂದ್ರ, ರಾಮಾಂಜನೇಯ ಯುದ್ದ. ಸಂಪೂರ್ಣ ರಾಮಾಯಣ, ಕುರುಕ್ಷೇತ್ರ, ರಾಜಾ ಸತ್ಯವ್ರತ ಅಥವಾ ಶನಿ ಪ್ರಭಾವ, ವಿಕ್ರಮರಾಜನ ಕಥೆ, ಸಂಪೂರ್ಣಮಹಾಭಾರತ, ಇನ್ನು ಮುಂತಾದ ನಾಟಕ ಪ್ರದರ್ಶಗಳನ್ನು ಪ್ರದರ್ಶಿಸಿದ್ದಾರೆ.

 

ಇವರು ಹಾಸ್ಯ ಕಲಾವಿಧರಾಗಿದ್ದು ಚಾರಕನ ಪಾತ್ರ, ಸಾರಥಿ ಪಾತ್ರ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಅಭಿನಯಿಸುವುದರೊಂದಿಗೆ ನಾಟಕ ಕಲಾವಿದರು ಹಾಗೂ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯ ಹಿರಿಯ ಕಲಾವಿದರು. ಮತ್ತು ಸದಸ್ಯರು ಹಾಗೂ ರಾಜ ಸತ್ಯವ್ರತ ಮತ್ತು ಶನಿಪ್ರಭಾವ ನಾಟಕದ ವಿಧೂಷಕ ಎಂದೇ ಖ್ಯಾತರಾದಂತಹ ಮತೀಹಳ್ಳಿ ಗ್ರಾಮದ ಶ್ರೀ ಎಂ ಡಿ ಚಿಕ್ಕಣ್ಣ ನವರಿಗೆ ಏಷ್ಯಾ ಅಂತರಾಷ್ಟ್ರೀಯ ಸಂಸ್ಕೃತಿ ಸಂಶೋಧನಾ ವಿಶ್ವವಿದ್ಯಾಲಯವು ಶ್ರೀಯುತರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಹಾಗೂ ತಿಪಟೂರು ತಾಲೂಕಿನ ಮತೀಹಳ್ಳಿ

ಗ್ರಾಮದ ಚಿಕ್ಕಣ್ಣನವರಿಗೆ ಇಂತಹ ಒಂದು ಪ್ರಶಸ್ತಿ ಲಭಿಸಿರುವುದು ಅವರ ಶ್ರಮಕ್ಕೆ ತಕ್ಕ ಫಲ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

 

ವರದಿ :ಮಂಜುನಾಥ್ ಡಿ ತಿಪಟೂರು.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *