JANATAA24 NEWS DESK
Tiptur: ಮಿಲೀನಿಯರ್ ಫಾರ್ಮರ್ ಆಫ್ ಇಂಡಿಯಾ 2025ನೇ ಪ್ರಶಸ್ತಿ ಭಾಜಕರಾದ ಎಸ್ ಗಂಗಾಧರಯ್ಯ ರವರಿಗೆ ಅಭಿನಂದನಾ ಸಮಾರಂಭ.

ತಿಪಟೂರು: ಪತ್ರಕರ್ತರು ಹಾಗೂ ಸ್ನೇಹ ಅಭಿಮಾನಿಗಳ ಬಳಗದ ಸಂಯುಕ್ತಾಶ್ರದಲ್ಲಿ ಅಭಿನಂದನಾ ಸಮಾರಂಭವನ್ನು ತಿಪಟೂರು ತಾಲೂಕಿನ ಪ್ರಸಿದ್ಧ ಗ್ರಾಂಡ್ ಹೋಟೆಲ್ ಆವರಣದಲ್ಲಿ ಪ್ರಶಸ್ತಿಯನ್ನು ಪಡೆದ ಗೌರವಾನ್ವಿತ ಎಸ್ ಗಂಗಾಧರ್ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .
ಅಭಿನಂದನಾ ಕಾರ್ಯಕ್ರಮದಲ್ಲಿ ಕ.ಸಾ.ಪ. ಅಧ್ಯಕ್ಷರಾದ ಮಡೆನೂರು ಸೋಮಶೇಖರ್ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ನವ ದೆಹಲಿಯ ಕೃಷಿ ಜಾಗರಣ ಸಂಸ್ಥೆಯು ನಮ್ಮ ತಿಪಟೂರು ತಾಲೂಕಿನ ಪ್ರಗತಿಪರ ಕೃಷಿಕರಾದ ಲಿಂಗದಹಳ್ಳಿ ಎಸ್ ಗಂಗಾಧರಯ್ಯನವರಿಗೆ ಮಿಲೀನಿರ್ ಫಾರ್ಮರ್ ಆಫ್ ಇಂಡಿಯಾ ೨೦೨೫ ಪ್ರಶಸ್ತಿ ಭಾಜಕರಾದದ್ದಾರೆ.
ಹಾಗಾಗಿ ಇಡೀ ನಮ್ಮ ತಾಲೂಕು ಹೆಮ್ಮೆ ಪಡುವಂತ ವಿಷಯವಾಗಿದ್ದು. ಇಂತಹ ಒಂದು ಸಮಾಜಮುಖಿ ಕಾರ್ಯನಿರ್ಸುತ್ತಿರುವ ಇವರಿಗೆ ಹಾಗೂ ಕೃಷಿಕರಾಗಿ ಸೇವೆ ಸಲ್ಲಿಸಿರುವ ವ್ಯಕ್ತಿಗೆ ಇಂಥ ಪ್ರಶಸ್ತಿ ಲಭಿಸಿದ್ದು ತುಂಬಾ ಸಂತೋಷದ ವಿಚಾರ ಹಾಗೂ ಈ ಪ್ರಶಸ್ತಿಯನ್ನು ನೀಡಿದ ನವದೆಹಲಿ ಕೃಷಿ ಜಾಗರಣ ಸಂಸ್ಥೆಗೂ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಡಾ! ಭಾಸ್ಕರ್, ಹರ್ಷ, ತೇಜಮೂರ್ತಿ, ಉಮೇಶ್, ಶಂಕ್ರಪ್ಪ ಬಳ್ಳೆಕಟ್ಟೆ, ನಟರಾಜ್ ಆರ್ ವಿ, ವಸಂತ ಸಿ, ಪ್ರಕಾಶ್ ಬಸವರಾಜ್ ಲಿಂಗಣ್ಣ ರಮೇಶ್ ಬಸವಣ್ಣ ಪಂಚಾಕ್ಷರಯ್ಯ, ಸುನಂದ ಮಲ್ಲಿಕಾರ್ಜುನಯ್ಯ ಮತ್ತಿತರು ಅಭಿನಂದನಾ ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿದ್ದರು.
ವರದಿ: ಮಂಜುನಾಥ್ ಡಿ ತಿಪಟೂರು
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.