JANATAA24 NEWS DESK
Tiptur: ಅರಣ್ಯ ಇಲಾಖೆ ಅಧಿಕಾರಿ ರೈತರಿಂದ ಬಲವಂತವಾಗಿ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ರೈತರುಗಳ ಆರೋಪ?

ತಿಪಟೂರು:ರೈತರಿಂದ ಬಲವಂತವಾಗಿ ಸಹಿ ಹಾಕಿಸಿಕೊಳ್ಳುತ್ತಿರುವ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭರತ್-ರವರ ಮೇಲೆ
Tiptur: ರೈತರ ಆರೋಪ ಏನೇನು.?
ಮೊದಲು ನಮಗೆ ವಿಷ ನೀಡಿ ಸಾಯಿಸಿ ಆಮೇಲೆ ನಮ್ಮ ಜಮೀನನ್ನು ಪಡೆಯಲಿ ರೈತರ ಆಕ್ರೋಶ.
ನಾವು ಒತ್ತುವರಿದಾರರಲ್ಲ ಮೂಲ ಮಂಜೂರಿದಾರರು ರೈತರ ಅಳಲು.
ಈ ಹಿಂದೆ ಮೈಸೂರು ಸಂಸ್ಥಾನದಲ್ಲಿ ಇದ್ದಂತಹ ಕಾಗೆ ಹಳ್ಳ ಕಾವಲ್ ಸರ್ವೆ ನಂಬರ್ 1 ಹಾಗೂ ಚೌಡ್ಲಾಪುರ ಅರಣ್ಯದ ಸರ್ವೆ ನಂಬರ್ 15ರಲ್ಲಿ ಅರಣ್ಯ ಭೂಮಿಯನ್ನು 1963- 64 ರಲ್ಲಿ ರಾಜ್ಯ ಸರ್ಕಾರವು ಬಡವರಿಗೋಸ್ಕರ ದೀನದಲಿತರಿಗೆ ಯೋಧರಿಗೆ ಭೂಮಿಯನ್ನು ಪುನಃ ಮಂಜೂರು ಮಾಡಿದ್ದು ಇದೀಗ 60 ವರ್ಷಗಳ ನಂತರ ಈ ಭೂಮಿ ನಮಗೆ ಸೇರಿದ್ದು ಎಂದು ರೈತರಿಗೆ ನೋಟಿಸ್ ನೀಡಿರುವುದು ಬಾರಿ ಚರ್ಚೆಗೆ ಗ್ರಾಸವಾಗಿದೆ.
ಈ ನಡುವೆ 1963- 64ರ ನಂತರ ಸುಮಾರು 130 ಕ್ಕೂ ಹೆಚ್ಚು ಕುಟುಂಬಗಳಿಗೆ ರಾಜ್ಯ ಸರ್ಕಾರವು ಜಮೀನನ್ನು ಮಂಜೂರು ಮಾಡಿದ್ದರಿಂದ ತಮ್ಮದೇ ಆದ ಸಾಗುವಳಿ ಚೀಟಿ ದುರಸ್ತು ಮೊದಲಾದ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನು ಸರ್ಕಾರವೇ ಮಾಡಿದ್ದು ಅದರ ಅನ್ವಯವೇ ಸರ್ಕಾರವು ಬೋರ್ವೆಲ್ ಅಗೆಸಲು ವಿದ್ಯುತ್ ಸಂಪರ್ಕ ನೀಡಲು ಹಾಗೂ ಅನೇಕ ಬ್ಯಾಂಕ್ಗಳಲ್ಲಿ ಸಾಲ ಸೌಲಭ್ಯವನ್ನು ಇದೆ ಜಮೀನುಗಳಿಗೆ ನೀಡಿದ್ದು ಸರಿಯಷ್ಟೇ. ಆದರೆ ಇದೀಗ ಏಕಾಏಕಿ ಅರಣ್ಯ ಇಲಾಖೆಯು ಈ ಭೂಮಿಗೆ ತಮಗೆ ಸೇರಿದ್ದು ಹಾಗಾಗಿ ನೀವು ತಮಗೆ ಸೇರಿದ ದಾಖಲಾತಿಗಳನ್ನು ಕೋರ್ಟಿಗೆ ಸಲ್ಲಿಸಿ ಎಂದು ತಿಳಿಸಿದ್ದರಿಂದ ಇಂದು ನೂರಾರು ರೈತರು ಅರಣ್ಯ ಇಲಾಖೆಗೆ ತಮ್ಮ ತಮ್ಮ ದಾಖಲೆಗಳೊಂದಿಗೆ ತೆರಳಿದ್ದರು ಆದರೆ ಈ ವೇಳೆ ರೈತರಿಗೆ ಯಾಮಾರಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭರತ್ ತಾವು ನೀಡಿರುವ ದಾಖಲಾತಿಗಳೊಂದಿಗೆ ತಾವು ಒತ್ತುವರಿ ಮಾಡಿಕೊಂಡಿರುವ ಜಾಗಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ನೀಡುತ್ತಿದ್ದೇವೆ ಎಂದು ಮೊದಲೇ ಬರೆದಿಕೊಂಡಿರುವ ಕಚೇರಿ ಟಿಪ್ಪಣಿಗೆ ಎಲ್ಲಾ ರೈತರ ಬಳಿ ಸಹಿ ಹಾಕಿಸಿಕೊಳ್ಳುತ್ತಿರುವುದು ಕಂಡ ರೈತ ಮುಖಂಡರು ಕೂಡಲೇ ಎಸಿಎಫ್ ಭರತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರನ್ನು ಈ ರೀತಿ ಯಾಮರಿಸಿ ಸಹಿ ಹಾಕಿಸಿಕೊಳ್ಳುತ್ತಿರುವ ಭರತ್ ಅವರ ನಡೆ ಖಂಡನೀಯ ಮುಂದೆ ಇದೇ ರೀತಿಯಾದಲ್ಲಿ ಅರಣ್ಯ ಇಲಾಖೆಯ ವಿರುದ್ಧ ಉಗ್ರ ಪ್ರತಿಭಟನೆ ನೆಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ತಿಮ್ಲಾಪುರ ದೇವರಾಜು ಎಚ್ಚರಿಸಿದರು.
ಈ ವೇಳೆ ಮಾತನಾಡಿದ ರೈತರೊಬ್ಬರು ಮೊದಲು ನಮಗೆ ವಿಷ ನೀಡಿ ಸಾಯಿಸಲಿ ಆನಂತರ ನಮ್ಮ ಜಮೀನನ್ನು ಪಡೆಯಲಿ ಎಂದು ಇದೆ ವೇಳೆ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ರೀತಿ ಬಲವಂತದಿಂದ ರೈತರನ್ನು ಒತ್ತಾಯಪೂರ್ವಕವಾಗಿ ಸಹಿ ಹಾಕಿಸಿಕೊಳ್ಳುತ್ತಿರುವ ಅರಣ್ಯ ಇಲಾಖೆ ವಿರುದ್ಧ ಬಾರಿ ಆಕ್ರೋಶ ವ್ಯಕ್ತವಾಗಿದ್ದು ಮುಂದೆ ಅರಣ್ಯ ಇಲಾಖೆ ವಿರುದ್ಧ ತಾಲೂಕಿನಲ್ಲಿ ಬಾರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಇದೇ ವೇಳೆ ಅವರು ಎಚ್ಚರಿಸಿದ್ದರು.
ವರದಿ:ಮಂಜುನಾಥ್ ಡಿ ತಿಪಟೂರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.