JANATAA24 NEWS DESK
Tiptur: ದಲಿತರ ಜಾಗಕ್ಕೆ ಕನ್ನಾ- ಪ್ರಶ್ನಿಸಿದವರ ಮೇಲೆ ಹಲ್ಲೆ.! ರಸ್ತೆಗೆ ಬೇಲಿ ಹಾಕಿದರೂ ಕೇಳುವವರಿಲ್ಲ.

ಮೃತ್ಯುವಿಗೆ ಆಹ್ವಾನಿಸುತ್ತಿರುವ 11 ಕೆ. ವಿ. ಎ. ಲೈನ ವಿದ್ಯುತ್ ತಂತಿ–ವರ್ಷ ಕಳೆದರೂ ತೆರವುಗೊಳಿಸದ ಅಧಿಕಾರಿಗಳು.
ತಿಪಟೂರು: ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಜಿ ಪರಮೇಶ್ವರ್ ರವರ ತವರಿನ ಕ್ಷೇತ್ರದಲ್ಲಿ ದಲಿತರಿಗೆ ಅನ್ಯಾಯ ಆಗುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದಿದೆ.
ತಿಪಟೂರು ನಗರದ 31 ನೇ ವಾರ್ಡ್ ನ ಗೊರಗೊಂಡನಹಳ್ಳಿ ಗ್ರಾಮದ ದಲಿತ ಕುಟುಂಬಗಳ ಸಮಸ್ಯೆಗಳನ್ನು ಕೇಳೋರ್ಯಾರು?
ಗೊರಗೊಂಡನಹಳ್ಳಿ ಗ್ರಾಮದ ದಲಿತ ಕುಟುಂಬಗಳು ಸವರ್ಣೀಯರ ದೌರ್ಜನ್ಯ ದಬ್ಬಾಳಿಕೆ ಭಯದಿಂದ ಬದುಕುವಂತ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಸ್ವತಂತ್ರ ಬಂದು 80 ವರ್ಷ ಕಳೆದರೂ ಇಂದಿಗೂ ದಲಿತರಿಗೆ ಸ್ವತಂತ್ರ ಸಿಕ್ಕಿಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹ ನಿರಂತರ ಸವರ್ಣಿಯರ ದೌರ್ಜನ್ಯ ಅನ್ಯಾಯ ಹಾಗೂ ಭಯದಿಂದ ಜೀವನ ಸಾಗಿಸುತ್ತಿರುವ ದಲಿತ ಕುಟುಂಬಗಳು ಗೊರಗೊಂಡನಹಳ್ಳಿ ಗ್ರಾಮದ ಸರ್ವೆ ನಂಬರ್ 90/4ಎ2ರಲ್ಲಿ ರಸ್ತೆಯಲ್ಲಿ ಓಡಾಡದಂತೆ ಶೆಡ್ಡು ಹಾಗೂ ಬೇಲಿ ಕಂಬಗಳನ್ನು ಒತ್ತುವರಿಯಾಗಿ ನಿರ್ಮಿಸಿರುವ ಸವರ್ಣೀಯರಾದ ಚೇರ್ಮನ್ ಶಿವನಂಜಪ್ಪ ಮಕ್ಕಳು ಮೊಮ್ಮಕ್ಕಳು.
ದನದ ಸಾಕಾಣಿಕೆ ಶೇಡ್ ಅನ್ನು ಕಬ್ಬಿಣದ ಶೀಟ್ ನಿಂದ ನಿರ್ಮಿಸಿಕೊಂಡು ಸುಮಾರು ಏಳೆಂಟು ಸೀಮೆ ಹಸುಗಳನ್ನ ಸಾಕುತ್ತಿದ್ದು ಅದೇ ಶೇಡ್ ಗೆ ಹೊಂದಿಕೊಂಡಂತೆ 11 ಕೆ. ವಿ. ಎ. ಲೈನ ವಿದ್ಯುತ್ ಕಂಬವನ್ನು ಅಳವಡಿಸಿದ್ದು ಇದನ್ನು ಸಹ ತೆರವುಗೊಳಿಸದೆ ಜಾಣ ಮೌನವಾಗಿರುವ ತಿಪಟೂರು ನಗರದ ಕೆ.ಇ.ಬಿ. ಅಧಿಕಾರಿಗಳು
ಸವರ್ಣಿಯರ ದೌರ್ಜನ್ಯ ದಬ್ಬಾಳಿಕೆ ಹಾಗೂ ಅನ್ಯಾಯದಿಂದ ತತ್ತರಿಸಿ ಸುಮಾರು ವರ್ಷ ಜೀವನ ಸಾಗಿಸಿದ ತಮ್ಮ ಅಳಲನ್ನು ವರದಿಗಾರರಿಗೆ ತೋಡಿಕೊಂಡ ದಲಿತ ಜನಾಂಗದ ಕೆಂಪಯ್ಯ ಕುಟುಂಬದ ಕಾಂತರಾಜ ನೊಂದ ದಲಿತ ಜನಾಂಗದ ಕಾಂತರಾಜ್ ಮಾತನಾಡಿದ್ದು ಹೀಗೆ
ಗೊರಗೊಂಡನಹಳ್ಳಿ 31ನೇ ವಾರ್ಡ್ ನ ದಲಿತ ಕಾಲೋನಿಯಲ್ಲಿ ದನದ ಸಾಕಾಣಿಕೆ ಶೆಡ್ಡನ್ನು ನಿರ್ಮಿಸಿದ್ದು ಅದಕ್ಕೆ 11 ಕೆ.ವಿ. ಎ. ಲೈನ್ ವಿದ್ಯುತ್ ಕಂಬಕ್ಕೆ ದನದ ಶೆಡ್ಡನ್ನು ನಿರ್ಮಾಣ ಮಾಡಿರುತ್ತಾರೆ ಅದಕ್ಕೆ ಒಂದು ವರ್ಷದ ಹಿಂದೆ ಕೆ. ಇ. ಬಿ. ಇಲಾಖೆಯವರಿಗೆ ದೂರ ಸಲ್ಲಿಸಿದರು ಯಾವುದೇ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ.
ಕಾರಣ ರಾಜಕೀಯ ಒತ್ತಡವೋ ಅಥವಾ ಇನ್ಯಾವುದಕ್ಕೆ ಮಣೆ ಹಾಕಿದ್ದಾರೋ ಗೊತ್ತಿಲ್ಲ
ಅನಾಹುತಕ್ಕೆ ಕಾಯುತ್ತಿರುವ ವಿದ್ಯುತ್ ಕಂಬವನ್ನು ಅಧಿಕಾರಿಗಳು ಕೂಡಲೆ ತೆರೆವುಗೊಳಿಸಿ ಇಲ್ಲವಾದರೆ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದರು.
ಇದನ್ನು ಪ್ರಶ್ನೆ ಮಾಡಲು ಹೋದರೆ ನಮ್ಮ ಮೇಲೆ ಹಲ್ಲೆ ಮಾಡಲು ಬರುತ್ತಾರೆ ಹಾಗಾಗಿ ನಾವುಗಳು ನಿರಂತರವಾಗಿ ಮಾನಸಿಕ ತೊಂದರೆ ಅನುಭವಿಸುತ್ತಿದ್ದೇವೆ
ಇದರ ಬಗ್ಗೆ ಗೃಹ ಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾಕ್ಟರ್ ಜಿ. ಎಸ್. ಪರಮೇಶ್ವರ್ ರವರು ಸೂಕ್ತವಾಗಿ ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದರು.
ನಿರಂತರವಾಗಿ ಸವರ್ಣಿಯರ ಕಿರುಕುಳವನ್ನು ಅನುಭವಿಸುತ್ತಿದ್ದು ಇವರ ವಿರುದ್ಧ ಎಸ್ಸಿ ಎಸ್ಟಿ ಕಾಯ್ದೆ ದೂರು ದಾಖಲಿಸಬೇಕೆಂದು ಆಗ್ರಹಿಸಿದರು.
ಕೆ. ಇ. ಬಿ. ಮತ್ತು ನಗರಸಭೆ ಇಲಾಖೆಯವರಿಗೂ ದೂರನ್ನು ಸಲ್ಲಿಸಿದ್ದು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ.
ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದಾಗ ಕ್ರಮ ಜರುಗಿಸುತ್ತೇವೆ ಎಂದು ಉಡಾಫೆ ಉತ್ತರ ಹೇಳುತ್ತಾರೆ.
ತಾಲೂಕು ಸರ್ವೆ ಅಧಿಕಾರಿಗಳು ಬಂದು ಅಳತೆ ಮಾಡಿ ಕಲ್ಲು ನೆಟ್ಟಿರುತ್ತಾರೆ
ಅಧಿಕಾರಿಗಳಿಗೂ ಸಹ ಕ್ಯಾರೆ ಅನ್ನದೆ ಒತ್ತುವರಿ ಜಾಗ ಮಾಡಿ ಪಾಳೆಗಾರಿಕೆ ನಡೆಸುತ್ತಿದ್ದಾರೆ .ದಲಿತರಿಗೆ ಸೇರಿರುವ ಭೂಮಿಯನ್ನು ಹಾಗೂ ರಸ್ತೆಯಲ್ಲಿ ಅಡ್ಡಲಾಗಿ ಅಕ್ರಮವಾಗಿ ಹಸುವಿನ ಸಾಕಾಣಿಕೆ ಶೇಡ್ ಹಾಗೂ ರಸ್ತೆಗೆ ತಿಂತಿ ಬೇಲಿಗಳನ್ನು ಉದ್ದೇಶಪೂರ್ವಕವಾಗಿ ಹಾಕಲಾಗಿದ್ದು.
ದಲಿತರಾದ ನಾವುಗಳು ವಾಸಿಸುವ ಮನೆ ಪಕ್ಕದಲ್ಲಿ ತಿಪ್ಪೆಗುಂಡಿ ಮಾಡಿಕೊಂಡು ಶೇಡ್ ನಿಂದ ಬರುವ ಗಂಜಲು ಸೇರಿದಂತೆ ಗಲೀಜನ್ನು ನೇರವಾಗಿ ಚರಂಡಿಗೆ ಹಾಗೂ ರಸ್ತೆಗೆ ಬಿಡುತ್ತಾರೆ.
ಇದರಿಂದ ನೂಣ ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿದೆ
ಈಗಲಾದರೂ ಒತ್ತುವರಿ ಮತ್ತು ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಶೆಡ್ ಅನ್ನು ತೆರವುಗೊಳಿಸಲು ಜಿಲ್ಲಾಡಳಿತ ಹಾಗೂ ತಾಲೂಕು ಮತ್ತು ನಗರ ಸಭೆ ಮುಂದಾಗುತ್ತದೆಯೋ ಕಾದು ನೋಡಬೇಕಾಗಿದೆ?
ವರದಿ :ಮಂಜುನಾಥ್ ಡಿ ತಿಪಟೂರು
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.