JANATAA24 NEWS DESK
Tiptur: ಅಂಡರ್ ಪಾಸ್ ಸರ್ವಿಸ್ ರಸ್ತೆ ಹಾಗೂ ಬಸ್ ನಿಲುಗಡೆ ಗೆ ಒತ್ತಾಯಿಸಿದ ಅಂಬೇಡ್ಕರ್ ಸೇವಾ ಸಮಿತಿ.

ತಿಪಟೂರು: ತಿಪಟೂರು – ಬೆಂಗಳೂರು ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ ಅತಿ ವೇಗ ಚಾಲನೆಯಿಂದಾಗಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.ಈ ಹಿನ್ನೆಲೆಯಲ್ಲಿ ತಿಪಟೂರು ತಾಲೂಕಿನ ಬೆಟ್ಟದ ಗೇಟ್ ನಲ್ಲಿ ಅಂಡರ್ ಪಾಸ್ ನಿರ್ಮಾಣ ಅಗತ್ಯವಾಗಿದೆ ಹಾಗೂ ಶಾಲಾ ಮಕ್ಕಳಿಗೆ ಶಾಲೆಗಳಿಗೆ ಹೋಗಲು ಬಸ್ ನಿಲುಗಡೆ ಇಲ್ಲದೆ ಮತ್ತು ಸಾರ್ವಜನಿಕರು ಸಹ ದಿನನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವಿಭಾಗೀಯ ಅಧ್ಯಕ್ಷರಾದ ಯಗಚಿಗಟ್ಟೆ ರಾಘು ವೇಂದ್ರ ರವರು ಪ್ರತಿಭಟನೆಯಲ್ಲಿ ಆಕ್ರೋಶವನ್ನು ಹೊರ ಹಾಕಿದರು.ಕೆಬಿ ಕ್ರಾಸ್ ನಿಂದ ಬೆಟ್ಟದ ಗೇಟ್ ವರೆಗೂ ಕಾಲ್ನಡಿಗೆ ಜಾಥ್ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ನಂತರ ದಲಿತ ಮುಖಂಡ ಕೊಪ್ಪ ಶಾಂತಪ್ಪ ಮಾತನಾಡಿ ತಾಲೂಕಿನ ಯಗಚೀಗಟ್ಟೆ ಬೆಟ್ಟದ ಗೇಟ್ ಹಾಗೂ ರಜತಾದ್ರಿಪುರ ಗೇಟ್ ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ ನಡೆಯುತ್ತಿದ್ದು. ಹಾಗೂ ಸಾರ್ವಜನಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದರು ಇಲಾಖೆಯ ಬೇಜವಾಬ್ದಾರಿತನ ಇದಕ್ಕೆ ಮುಖ್ಯ ಕಾರಣ ಸಂಬಂಧಪಟ್ಟ ಇಲಾಖೆ ಕಣ್ಣಿದ್ದು ಕುರುಡಾಗಿದೆ. ಈಗಲಾದರೂ ಅಂಡರ್ ಪಾಸ್ ಹಾಗೂ ಬಸ್ ನಿಲ್ದಾಣವನ್ನು ನಿರ್ಮಿಸುವುದರಿಂದ ಸುಮಾರು ಗ್ರಾಮದ ಜನರಿಗೆ ಸಂಚಾರಕ್ಕೆ ಅನುಕೂಲವಾಗಲಿದೆ. ದಿನನಿತ್ಯ ಶಾಲಾ ಮಕ್ಕಳಿಗೆ, ವೃದ್ಧರಿಗೆ ರೈತರಿಗೆ ಸಾರ್ವಜನಿಕರಿಗೆ ಕೂಡಲೇ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.
ಇದಕ್ಕೂ ಸಹ ಸಂಬಂಧಪಟ್ಟ ಇಲಾಖೆ ಮಣಿಯದೆ ಹೋದರೆ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು.ತಾಲೂಕು ಅಧ್ಯಕ್ಷರಾದ ಮತ್ತಿಘಟ್ಟ ಶಿವಕುಮಾರ್ ಮಾತನಾಡಿ ಬೆಟ್ಟದ ಗೇಟ್ ನಲ್ಲಿ ಅಂಡರಪಾಸ್, ಸರ್ವಿಸ್ ರಸ್ತೆ ಹಾಗೂ ರಜತಾದ್ರಿಪುರ ಗೇಟ್ ನಲ್ಲಿ ಸರ್ವಿಸ್ ರಸ್ತೆ ಇಲ್ಲದೆ ಪ್ರತಿದಿನ ವಿದ್ಯಾರ್ಥಿಗಳು ರೈತರು ಸಾರ್ವಜನಿಕರು ಸಾವು ನೋವುಗಳು ಬದುಕಿನ ನಡುವೆ ಜೀವನವನ್ನು ಹಿಡಿದುಕೊಂಡು ರಸ್ತೆ ದಾಟುವ ಒನ್ ವೇ ಓಡಾಡುತ್ತಿದ್ದಾರೆ.
ಯುಗಚೀಗಟ್ಟೆ, ಕೋಡುಗಲ್ ಕೋಡುಗಲ್ ಪಾಳ್ಯ, ಹೊಸಹಟ್ಟಿ, ಅಡವನಹಳ್ಳಿ, ಮತ್ತು ಗೊಲ್ಲರಟ್ಟಿ, ಹುಲ್ಲೇಕೆರೆಹಟ್ಟಿ, ಗ್ರಾಮದ ಜನರು ಬೆಟ್ಟದ ಗೇಟ್ ನಲ್ಲಿ ರಸ್ತೆದಾಟಲು ಅಂಡರ್ ಪಾಸ್ ಇಲ್ಲದೆ ಬ್ಯಾರೆಗೆಟ್ ದಾಟಿ ವಿದ್ಯಾರ್ಥಿಗಳು ವೃದ್ಧರು ರೈತರು ಸಾರ್ವಜನಿಕರು ರಸ್ತೆ ದಾಟಲು ತುಂಬಾ ತೊಂದರೆ ಅನುಭವಿಸುತ್ತಿದ್ದು ಹಾಗೂ ಕೆಬಿ ಕ್ರಾಸ್ ನಿಂದ ತಮ್ಮ ತಮ್ಮ ಊರಿಗೆ ತೆರಳರು ಒನ್ ವೇ ನಲ್ಲಿ ಸಾವು ಬದುಕಿನ ನಡುವೆ ಓಡಾಡುತ್ತಿದ್ದು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಲು ಬಸ್ ನಿಲ್ದಾಣ ಇರುವುದಿಲ್ಲ.
ತಾವುಗಳು ಸ್ಥಳ ಪರಿಶೀಲಿಸಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಿ ಅನುಕೂಲ ಮಾಡಿಕೊಳ್ಳಬೇಕೆಂದು ಎಂದರು.ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ಕೆಬಿ ಕ್ರಾಸ್ ನಿಂದ ಹತ್ಯಾಳ ನರಸಿಂಹಸ್ವಾಮಿ ಬೆಟ್ಟದವರಿಗೂ ಆಟೋ ಚಾಲಕರು ಹಾಗೂ ಸಂಘ ಸಂಸ್ಥೆಗಳು ಹೋರಾಟಗಾರರು ಶಾಂತಿಯುತವಾಗಿ ಕಾಲ್ನಡಿಗೆ ಜಾಥ್ ನೆಡೆಸಿದರು. ಪ್ರತಿಭಟನೆಯಲ್ಲಿ ದಲಿತ ಮುಖಂಡ ಕೊಪ್ಪ ಶಾಂತಪ್ಪ, ರಮೇಶ್ ಮಾರನಗೆರೆ, ತುರುವೇಕೆರೆ ರಂಗಸ್ವಾಮಿ, ಪ್ರಕಾಶ್, ಅಶೋಕ್, ಅಂಬೇಡ್ಕರ್ ಸೇವಾ ಸಮಿತಿಯ ಪದಾಧಿಕಾರಿಗಳು, ದಲಿತ ಮುಖಂಡರು, ಆಟೋ ಚಾಲಕರು ಸಾರ್ವಜನಿಕರು, ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ:ಮಂಜುನಾಥ್ ಡಿ, ತಿಪಟೂರು
Bengaluru: ಡಿಜಿಪಿ ರಾಮಚಂದ್ರ ರಾವ್ ಡಿಸ್ ಮಿಸ್ ಕೂಡ ಆಗಬಹುದು-ಡಾ.ಜಿ. ಪರಮೇಶ್ವರ್
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.