JANATAA24 NEWS DESK
Tiptur: ಕಲ್ಕೆರೆಯಲ್ಲಿ ಶಕಿಬ್ ಎಂಬಾತನಿಂದ ಸಾರ್ವಜನಿಕ ರಸ್ತೆ ಕಾಮಗಾರಿಗೆ ಅಡಚಣೆ.

ತಿಪಟೂರು :ತಹಶೀಲ್ದಾರ್ ಕೂಡಲೇ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಬೇಕು ಇಲ್ಲವಾದರೆ ಸಾರ್ವಜನಿಕರೊಂದಿಗೆ ಕಚೇರಿ ಮುಂಭಾಗ ಪ್ರತಿಭಟನೆ– ಗ್ರಾಮಸ್ಥರ ಎಚ್ಚರಿಕೆ.
ಕಲ್ಕೆರೆಯ ಸರ್ವೆ ನಂಬರ್ 46 ರ ಜಾಗ ಜಾಮಿಯಾ ಮಸೀದಿಯ ಜಾಗವಾಗಿದ್ದು, ಈ ಜಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ.
ಶಕಿಬ್ ಎಂಬತಾ ಈ ಜಾಗ ನಮ್ಮದೆಂದು ತಂಟೆ ತಕರಾರು ಮಾಡುತ್ತಿದ್ದು, ಘನ ನ್ಯಾಯಾಲಯ ಮಸೀದಿ ಜಾಗವೆಂದು ಆದೇಶ ಹೊರಡಿಸಿದೆ. ಸ್ಥಳೀಯ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ಪ್ರಕರಣ ದಾಖಲಾಗಿ, ದಾಖಲಾತಿ ಪರಿಶೀಲಿಸಿ ಈ ಜಾಗ ಮಸೀದಿಗೆ ಸೇರಿದೆ ಎಂದು ತಿಳಿಸಿ, ಬರವಣಿಗೆ ಮೂಲಕ ತಿಳಿಸಿದ್ದಾರೆ.
ಶಾಲಾ ಮಕ್ಕಳು, ರೈತರು ಮತ್ತು ಸಾರ್ವಜನಿಕರಿಗೆ ಓಡಾಡದಂತೆ ಸರ್ಕಾರಿ ರಸ್ತೆಗೆ ಗುಂಡಿ ಅಗೆದು ನಿರ್ಬಂಧ.
ಶಕಿಬ್ ಮತ್ತು ರಮೇಶ್ ಎಂಬುವವರಿಂದ ಸರ್ಕಾರಿ ಕಾಮಗಾರಿಗೆ ಅಡ್ಡಗಾಲು: ಗ್ರಾಮಸ್ಥ ನೂರುಲ್ಲಾ ಸಾಬ್ ಆರೋಪ. ಕಾಮಗಾರಿ ನಡೆಸುತ್ತಿರುವ ಸ್ಥಳ ಮಾರಾಟ ಮಾಡುವಂತಿಲ್ಲ. ಸರ್ಕಾರಿ ಕಾಮಗಾರಿಗೆ ಸೂಕ್ತವಾಗಿದೆ ಎಂದು ಈಗಾಗಲೇ ಮಸೀದಿಯಿಂದ ತಿಳಿಸಲಾಗಿದೆ.
ಜಾಮಿಯಾ ಮಸೀದಿಗೆ ಸಂಬಂಧಪಟ್ಟ ರಸ್ತೆಯಲ್ಲಿ ಸಿಸಿ ರಸ್ತೆ ನಿರ್ಮಾಣ. ಯಾವುದೇ ಖಾಸಗಿಯವರ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡುತ್ತಿಲ್ಲ–ಗುತ್ತಿಗೆದಾರರ ಸ್ಪಷ್ಟನೆ.
ಶಕಿಬ್ ಎಂಬತಾ ದುರುದ್ದೇಶದಿಂದ, ಕಾಮಗಾರಿಗೆ ಅಡ್ಡಪಡಿಸುತ್ತಿದ್ದಾನೆ. ಈತ ಸರ್ಕಾರಿ ಗೋಮಾಳ ಜಾಗದಲ್ಲಿ ಮಣ್ಣನ್ನು ಅಕ್ರಮವಾಗಿ ದಬ್ಬಾಳಿಕೆ ಮತ್ತು ದೌರ್ಜನ್ಯದಿಂದ ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾನೆ.ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಒತ್ತಾಯ.
ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಶೀಘ್ರದಲ್ಲೇ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ–ಗ್ರಾಮಸ್ಥರ ಎಚ್ಚರಿಕೆ.
ವರದಿ :ಮಂಜುನಾಥ್ ಡಿ ತಿಪಟೂರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.