JANATAA24 NEWS DESK
Tiptur: ಡಿ.18 ರಿಂದ 21 ರವರೆಗೆ 39ನೇ ರಾಜ್ಯಮಟ್ಟದ ಹೂನಲು ಬೆಳಕಿನ ಖೊಖೊ ಪಂದ್ಯಾವಳಿ.

ತಿಪಟೂರು : ಕರ್ನಾಟಕ ರಾಜ್ಯ ಕೊಕ್ಕೂ ಸಂಸ್ಥೆ ಹಾಗೂ ತುಮಕೂರು ಜಿಲ್ಲಾ ಕೊಕ್ಕೂ ಸಂಸ್ಥೆಯ ಸಹಯೋಗದೊಂದಿಗೆ ತಿಪಟೂರು ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ 39ನೇ ಕರ್ನಾಟಕ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷ ಮತ್ತು ಮಹಿಳೆಯರ ಕೊಕ್ಕೂ ಪಂದ್ಯಾವಳಿಯನ್ನು ದಿನಾಂಕ 18, 19 ,20, ಮತ್ತು 21 ರವರೆಗೆ ಕಲ್ಪತರು ಕ್ರೀಡಾಂಗಣದಲ್ಲಿ ನೆಡೆಯಲಿದೆ ಎಂದು ರಾಜ್ಯ ಕೂಕ್ಕೂ ಸಂಸ್ಥೆಯ ಅಧ್ಯಕ್ಷ ಲೋಕೇಶ್ ರವರು ಪತ್ರಿಕಾಗೋಷ್ಠಿಯಲ್ಲಿ ಮೂಲಕ ತಿಳಿಸಿದರು.
ಈ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯದ 30 ಜಿಲ್ಲೆಗಳ 95 ಪುರುಷರ ಮತ್ತು 30 ಮಹಿಳೆಯರ ತಂಡಗಳು ಸುಮಾರು 2000 ಕ್ಕೂ ಅಧಿಕ ಆಟಗಾರರು, 200ಕ್ಕೂ ಅಧಿಕ ಕ್ರೀಡಾ ತೀರ್ಪುಗಾರರು ಆಗಮಿಸಲಿದ್ದು. ಪಂದ್ಯಾವಳಿಯಲ್ಲಿ ನಾಲ್ಕು ಕೊಕ್ಕೂ ಕೋರ್ಟ್ ಗಳನ್ನು ತಯಾರಿ ಮಾಡಿದ್ದು. ಹೂನಲು ಬೆಳಕಿನ ಜೊತೆ ಎರಡು ಕೋರ್ಟ್ ಗಳಿಗೆ ಮ್ಯಾಟ್ ವ್ಯವಸ್ಥೆ ಮಾಡಲಾಗಿದೆ ಪಂದ್ಯಾವಳಿಗೆ ಆಗಮಿಸುವ ಎಲ್ಲಾ ಕ್ರೀಡಾಪಟುಗಳಿಗೂ ಮತ್ತು ಇತರೆ ಅಧಿಕಾರಿಗಳಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿರುತ್ತದೆ.
ಈ ಪಂದ್ಯಾವಳಿಗಳನ್ನು ನಡೆಸಲು ತಿಪಟೂರು ಸ್ಪೋರ್ಟ್ಸ್ ಕ್ಲಬ್ ಎಲ್ಲಾ ರೀತಿಯ ಸಿದ್ಧತೆ ಮಾಡಲಾಗಿದ್ದು. ಗೆದ್ದ ತಂಡಗಳಿಗೆ ಮೆಡಲ್ ಹಾಗೂ ಪ್ರಮಾಣ ಪತ್ರವನ್ನು ಕೊಕ್ಕೋ ಸಂಸ್ಥೆ ನೀಡಲಿದೆ ಮತ್ತು ಬಹುಮಾನವನ್ನು ತಿಪಟೂರು ಸ್ಪೋರ್ಟ್ಸ್ ಕ್ಲಬ್ ನೀಡಲಿದೆ ಎಂದರು. ಈ ನಾಲ್ಕು ದಿನ ನಡೆಯುವ ಪಂದ್ಯಾವಳಿಯನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಅಭಿಮಾನಿಗಳು ಆಗಮಿಸಬೇಕೆಂದು ಕೋರಿದರು. ಪತ್ರಕಾಗೋಷ್ಠಿಯಲ್ಲಿ
ನಗರಸಭಾ ಮಾಜಿ ಸದಸ್ಯ ಭಾರತಿ ಮಂಜುನಾಥ್, ಶಶಿಭೂಷಣ್, ಉದಯಕುಮಾರ್, ನಗರಸಭೆ ಮಾಜಿ ಉಪಾಧ್ಯಕ್ಷ ಗಣೇಶ್, ರೇಣು ಪಾಟೀಲ್, ನಾಗರಾಜ್ ಉಪಸ್ಥಿತಿಯಲ್ಲಿದ್ದರೂ.
ವರದಿ: ಮಂಜುನಾಥ್ ಡಿ ತಿಪಟೂರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.