Document

The Nature Story: ಕಾಡು ಕಾಣದ ಖಂಡ್ರೆ ಅರಣ್ಯ ಮಂತ್ರಿ ಅಲ್ಲಾ ಸ್ವಾಮಿ ಅವಾಂತರ ಮಂತ್ರಿ.

Janataa24 NEWS DESK 

 

The Nature Story: ಕಾಡು ಕಾಣದ ಖಂಡ್ರೆ ಅರಣ್ಯ ಮಂತ್ರಿ ಅಲ್ಲಾ ಸ್ವಾಮಿ ಅವಾಂತರ ಮಂತ್ರಿ.

The Nature story

ಕರ್ನಾಟಕದ ವನ್ಯಜೀವಿ ಸಂರಕ್ಷಣೆ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಎಷ್ಟರ ಮಟ್ಟಕ್ಕೆ ಇದೆ ಎಂಬುದಕ್ಕೆ ಕೈಗನ್ನಡಿಯಂತಿದೆ ಈ ಘಟನೆಗಳು!

The Nature Story 9 dears killed in bangalore kaglipura forest
ರಾಜ್ಯ ರಾಜಧಾನಿ ಬೆಂಗಳೂರಿನ ಬನ್ನೇರುಘಟ್ಟ ಅರಣ್ಯ ಸಮೀಪದ ಕಗ್ಗಲೀಪುರ ಪ್ರಾದೇಶಿಕ ವಲಯದಲ್ಲಿ 9 ಜಿಂಕೆಗಳು ಮತ್ತು 1 ಕಾಡು ಹಂದಿಯ 74 ಕೆ.ಜಿ. ಮಾಂಸವನ್ನು ಸಂಗ್ರಹಿಸಿದ ಘಟನೆ, ಚಿಕ್ಕಪಾಳ್ಯದ ಶೆಡ್‌ನಲ್ಲಿ ಬಂದೂಕಿನೊಂದಿಗೆ ಆರೋಪಿಯ ಸೆರೆ ಮತ್ತು ಮಲೆ ಮಹದೇಶ್ವರ (MM Hills) ವನ್ಯಜೀವಿ ಧಾಮದಲ್ಲಿ ಒಂದು ಹೆಣ್ಣು ಹುಲಿ ಮತ್ತು ಅದರ ನಾಲ್ಕು ಮರಿಗಳ ವಿಷಪ್ರಯೋಗದಿಂದ ಸಾವು—ಈ ಘಟನೆಗಳು ಸರ್ಕಾರದ ನಿರಾಸಕ್ತಿಯನ್ನು ಸ್ಪಷ್ಟವಾಗಿ ತೋರಿಸುತ್ತವೆ.

 

The Nature Story: ಕಾಡು ಕಾಯುವ ಕಾವಲುಗಾರರಿಗೆ ಸಂಬಳ ಕೊಟ್ಟು ಎಷ್ಟು ಕಾಲ ಆಯ್ತು.?

ಇದರ ಜೊತೆಗೆ, ಅರಣ್ಯ ಕಾವಲುಗಾರರಿಗೆ ತಿಂಗಳುಗಟ್ಟಲೆ ವೇತನವನ್ನೇ ನೀಡದಿರುವುದು ರಾಜ್ಯ ಸರ್ಕಾರದ ಕಿರಿಕಿರಿಯ ಆಡಳಿತವೆಂಬುದು ಮತ್ತೊಂದು ಸಾಕ್ಷಿಯಾಗಿದೆ.

The Nature Story

ಅರಣ್ಯ ಇಲಾಖೆ ಕೇವಲ ತಾತ್ಕಾಲಿಕ ಕ್ರಮಗಳಿಗೆ ಸೀಮಿತವಾಗಿದೆ. ಎಂ.ಎಂ. ಹಿಲ್ಸ್‌ನಲ್ಲಿ ಗೋವುಗಳ ಮೇಯಿಸುವಿಕೆ ಮತ್ತು ವಿಷಪ್ರಯೋಗದಂತಹ ಕೃತ್ಯಗಳು ಮುಂದುವರಿಯುತ್ತಿರುವುದು, ಗಸ್ತು ತಪಾಸಣೆಯ ಕೊರತೆ ಮತ್ತು ಸಿಬ್ಬಂದಿಗಳ ಕೊರತೆಯನ್ನು ಎತ್ತಿ ತೋರಿಸುತ್ತದೆ. ಇದಕ್ಕೆ ಮೇಲಾಗಿ, ಅರಣ್ಯ ಕಾವಲುಗಾರರಿಗೆ ವೇತನವಿಲ್ಲದೇ ಜೀವನ ಸಾಗಿಸುವಂತೆ ಮಾಡಿರುವ ಸರ್ಕಾರ, ಅವರ ಕೆಲಸದ ಉತ್ಸಾಹವನ್ನು ಕುಗ್ಗಿಸಿ, ಅರಣ್ಯ ಸಂರಕ್ಷಣೆಯನ್ನು ಮತ್ತಷ್ಟು ದುರ್ಬಲಗೊಳಿಸಿದೆ. ಎಂ.ಎಂ. ಹಿಲ್ಸ್‌ಗೆ ಹುಲಿ ಸಂರಕ್ಷಿತ ಪ್ರದೇಶದ ಮಾನ್ಯತೆ ನೀಡದಿರುವುದು ಮತ್ತು ಸಮರ್ಪಕ ಸಂರಕ್ಷಣಾ ಕ್ರಮಗಳನ್ನು ಜಾರಿಗೊಳಿಸದಿರುವುದು ಈ ದುರಂತಕ್ಕೆ ಕಾರಣವಾಗಿದೆ.

 

ರಾಜ್ಯ ಸರ್ಕಾರವು ವನ್ಯಜೀವಿ ಸಂರಕ್ಷಣೆಯಲ್ಲಿ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಲ್ಯಾಣದಲ್ಲಿ ಸಂಪೂರ್ಣ ವಿಫಲವಾಗಿದೆ.

 

The Nature Story: ಜಿಂಕೆಗಳು ಹಣವಂತರ ಆಹಾರ.ಜಿಂಕೆಗಳ ಕೊಲೆ, ಹುಲಿಗಳ ವಿಷಪ್ರಯೋಗ, ಮತ್ತು ಕಾವಲುಗಾರರಿಗೆ ವೇತನ ವಿಳಂಬ—ಇವೆಲ್ಲವೂ ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಪರಿಸರ ಸಂರಕ್ಷಣೆಯ ದುರ್ಬಲತೆಯನ್ನು ಬಯಲಿಗೆಳೆಯುತ್ತವೆ. ತಕ್ಷಣದ ಕಾರ್ಯಾಚರಣೆಗಳಿಂದ ಜನರ ಕಣ್ಣಿಗೆ ಮಣ್ಣೆರಚುವ ಬದಲು, ಕಾಂಗ್ರೆಸ್ ಸರ್ಕಾರವು ಕಾವಲುಗಾರರಿಗೆ ಸಕಾಲದಲ್ಲಿ ವೇತನ, ಶಾಶ್ವತ ಸಂರಕ್ಷಣಾ ಕ್ರಮಗಳು, ಮತ್ತು ವನ್ಯಜೀವಿಗಳ ರಕ್ಷಣೆಗೆ ಆದ್ಯತೆ ನೀಡಬೇಕು. ಈ ನಿರ್ಲಕ್ಷ್ಯವನ್ನು ಖಂಡಿಸದಿರಲು ಸಾಧ್ಯವಿಲ್ಲ.

 

ಇದೆಲ್ಲಾ ಸಾಲದಕ್ಕೆ ಮಾನ್ಯ ಅರಣ್ಯ ಸಚಿವರದ ಈಶ್ವರ್ ಖಂಡ್ರೆ ಅವರು ಅರಣ್ಯ ಅಧಿಕಾರಿಗಳನ್ನು ಶ್ಲಾಗಿಸಿ ಸನ್ಮಾನ ಬೇರೆ ಮಾಡಿದ್ರಂತೆ.!

 

ಅರಣ್ಯವನ್ನೇ ನೋಡದವರಿಗೆ ಅರಣ್ಯ ಇಲಾಖೆ ಕೊಟ್ಟು ಅರಣ್ಯದಲ್ಲಿ ಸಾಲು ಸಾಲು ಅಪರಾಧಗಳು ನಡೆಯುತ್ತಿದ್ದು ವನ್ಯಜೀವಿಗಳ ಮಾರಣಹೋಮವೇ ನಡೆದುಹೋಗಿದೆ.

 

ಅಲ್ಲ ಸ್ವಾಮಿ ಇದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿರುವ ಘಟನೆ ಎನ್ನುವ ಪರಿಜ್ಞಾನ ಬೇಡವೇ ನಿಮಗೆ.?

ಬೇರೆ ಯಾವುದೋ ರಾಜ್ಯದಲ್ಲಿ ನಡೆದಿರುವ ಘಟನೆಯಂತೆ ಮಾಧ್ಯಮಗಳಲ್ಲಿ ಸುದ್ದಿ ಮಾಡದೆ ಇಂತಹ ಅನ್ಯಾಯವನ್ನು ಮುಚ್ಚಿ ಹಾಕಲು ಹೊರಟಿರುವ ರಾಜ್ಯ ಸರ್ಕಾರಕ್ಕೆ ಕನಿಷ್ಠ ಪ್ರಜ್ಞೆ ಬೇಡವೇ ಕಾಡು ಪ್ರಾಣಿಗಳೆಲ್ಲದ ಕಾಡು ಕಾಡಲ್ಲ.

 

ಇಂತಹದ್ದೇ ಘಟನೆ ನಿಮ್ಮ ಮನೇಲ್ಲಿ ನಡೆದಿದ್ದರೇ? ನೀವಿಲ್ಲದ ಸಮಯದಲ್ಲಿ ನಿಮ್ಮ ಕುಟುಂಬಸ್ಥರನ್ನು ಕೊಂದು ಹಾಕಿದ್ದಿದ್ದರೆ ನೀವು ಸುಮ್ಮನೆ ಇರುತ್ತಿದ್ರಾ?

 

ಒಬ್ಬ ಎಂಎಲ್ಎ ಅಥವಾ ಓರ್ವ ಪುಡಿ ರಾಜಕಾರಣಿಯ ಮಗನ ಕಾರು, ಬೈಕೋ ಅಡ್ಡಗಟ್ಟಿದ ಟ್ರಾಫಿಕ್ ಪೋಲಿಸ್ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಟ್ರಾನ್ಸ್ಫರ್ ಮಾಡಿಸುವಾಗ ಮಾಡುವ ರಾಜಕಾರಣ ಕಾಡು ಪ್ರಾಣಿಗಳನ್ನು ಮಾರಣ ಹೋಮ ಮಾಡಿ ಕಡಿದು ಕೊಚ್ಚಿ ಹಾಕಿ ಮಾಂಸದ ಆಸೆಗೆ, ಬದುಕಿನ ದುರಾಸೆಗೆ ಇಂತಹ ದುಷ್ಕೃತ್ಯವನ್ನು ಮಾಡಿದ ಪಾಪಿಗಳನ್ನು ಸುಮ್ಮನೆ ಬಿಟ್ಟು ಒಬ್ಬರನ್ನೋ, ಇಬ್ಬರನ್ನೋ ಬಂಧಿಸಿ ಜನರ ಕಣ್ಣೊರೆಸುವ ಈ ನಾಟಕದ ಅವಶ್ಯಕತೆ ಇದೆಯಾ.?

 

ಇದರ ಹಿಂದೆ ದೊಡ್ಡ ಗುಂಪೊಂದು ಇದೆ ಕಾಡು ಪ್ರಾಣಿಗಳ ಮಾಂಸಕ್ಕೆ ಬೆಂಗಳೂರಿನಲ್ಲಿ ಬಾರಿ ಬೇಡಿಕೆಯೂ ಇದೆ ಎಂಬುದು ನಗ್ನ ಸತ್ಯ.

ಇದಕ್ಕೆ ರಾಜಕಾರಣಿಗಳ ಕುಮ್ಮಕ್ಕೂ ಇದೆ ಎಂಬುದು ಈಗ ನಮ್ಮ ರಾಜ್ಯದ ಎಲ್ಲಾ ರಾಜಕಾರಣಿಗಳು ತೋರುತ್ತಿರುವ ಅಸಡ್ಡೆಯೇ ಸಾಕ್ಷಿ.
The Nature Story

ಇಷ್ಟೆಲ್ಲ ಸಾಲದಕ್ಕೆ ಮೊನ್ನೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ (Chamarajanagara) ಮತ್ತೊಂದು ಮನಕಲಕುವ ಘಟನೆ ನಡೆದಿದೆ. 20 ಕ್ಕೂ ಹೆಚ್ಚು ಕೋತಿಗಳು ಶವವಾಗಿ ಪತ್ತೆಯಾಗಿವೆ.

ಇಲ್ಲಿ ಪ್ರಕೃತಿಗೆ ಮನುಷ್ಯನೇ ಹಾನಿಕಾರಕ ಎಂಬುದು ಗಮನಿಸಬೇಕಾದ ಸತ್ಯ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *